Annayya serial : ಅಣ್ಣಯ್ಯ ಧಾರಾವಾಹಿಯಲ್ಲಿ ಇದೀಗ ಹೊಸ ತಿರುವು ಸಿಕ್ಕಿದೆ. ಗುಂಡಮ್ಮನನ್ನು ದೂರ ಮಾಡಿ, ಪಿಂಕಿ ಹಿಂದೆ ಹೋಗಿದ್ದ, ಸೀನಾಗೆ ಇದೀಗ ಬುದ್ದಿ ಬಂದಿದೆ. ರಶ್ಮಿಯನ್ನು ಹೆಂಡ್ತಿ ಎಂದು ಒಪ್ಪಿ, ಮನೆ ಸೇರಿಸಿದ್ದಾನೆ. ಇದೆಲ್ಲಾ ಆಸ್ತಿ ಹೊಡೆಯೋ ಸಂಚು ಎನ್ನುವ ಅನುಮಾನ ವೀಕ್ಷಕರಿಗೆ ಶುರುವಾಗಿದೆ.
ಅಣ್ಣಯ್ಯ ಧಾರಾವಾಹಿಯಲ್ಲಿ ಇದೀಗ ದೊಡ್ಡ ತಿರುವು ಸಿಕ್ಕಿದೆ. ರಶ್ಮಿಯ ಬಾಳು ಹಾಳಾಯಿತು ಎನ್ನುವಾಗಲೇ, ಕೆಟ್ಟ ಮೇಲೆ ಬುದ್ದಿ ಬಂತು ಎನ್ನುವಂತೆ ಜಿಮ್ ಸೀನಾ ಬದಲಾಗಿ, ರಶ್ಮಿಯನ್ನು ಹೆಂಡ್ತಿ ಎಂದು ಒಪ್ಪಿಕೊಂಡು, ತನ್ನ ಕೈ ಮೇಲೆ ಆಕೆಯ ಕಾಲಿರಿಸಿ ಮನೆಗೆ ಸ್ವಾಗತಿಸಿದ್ದಾನೆ. ಆದರೆ ವೀಕ್ಷಕರಿಗೆ ಮಾತ್ರ ಸೀನಾ ಮೇಲೆ ಸಂಶಯ ಮೂಡಿದೆ.
26
ಅಷ್ಟಕ್ಕೂ ಧಾರಾವಾಹಿಯಲ್ಲಿ ಆಗುತ್ತಿರೋದು ಏನು?
ಜಿಮ್ ಸೀನಾ ರಶ್ಮಿಯಿಂದ ದೂರವಾಗಿ, ಪಿಂಕಿಯನ್ನು ಮದುವೆಯಾಗಲು ಎಲ್ಲಾ ತಯಾರಿ ನಡೆಸಿದ್ದ. ಆದರೆ ಪಿಂಕಿ ಕೆಲಸ ಇಲ್ಲದ, ಆಸ್ತಿನೂ ಇಲ್ಲ ಸೀನಾನನ್ನೆ ದೂರ ಮಾಡಿ, ಮದುವೆ ದಿನ ಬೇರೆ ಯಾರೊಂದಿಗೋ ಓಡಿ ಹೋಗಿದ್ದಾಳೆ. ಇದರಿಂದ ಮನೆ, ಮಠ ಕಳೆದುಕೊಂಡ ಸೀನಾ, ಬಿಕ್ಷುಕರ ಜೊತೆ ಜೀವನ ಮಾಡುವಂತಾಗಿದೆ.
36
ಬಿಕ್ಷುಕರ ಸಾಲಲ್ಲಿ ಸೀನಾ
ದೇವಸ್ಥಾನಕ್ಕೆ ಪರಿವಾರ ಸಮೇತ ಬಂದ ರಶ್ಮಿ, ಅಲ್ಲಿ ಸಿಕ್ಕಿದ ಬಿಕ್ಷುಕನೊಬ್ಬನಿಗೆ ಸ್ನಾನ ಮಾಡಿಸಲು ಮುಂದಾಗುತ್ತಾಳೆ. ಆ ಸಮಯದಲ್ಲಿ ಆಕೆಯ ಕೈಹಿಡಿಯುವ ಆತನ ಮುಖ ನೋಡಿ ರಶ್ಮಿ ಶಾಕ್. ಕಾರಣ ಜಿಮ್ ಸೀನಾ ನಿರ್ಗತಿಕನಂತೆ ಇರುತ್ತಾನೆ. ತಾನು ಮಾಡಿದ ಪಾಪವನ್ನು ಅರ್ಥಮಾಡಿಕೊಂಡ ಸೀನಾ, ನಿನ್ನ ಕಾಲು ತೊಳೆದು ನೀರು ಕುಡಿದ್ರು ನನ್ನ ಪಾಪ ಕಮ್ಮಿ ಆಗಲ್ಲ ಎಂದು ರಶ್ಮಿಗೆ ಕ್ಷಮೆ ಕೇಳುತ್ತಾನೆ.
ಮತ್ತೆ ಹಳೆಯದ್ದನ್ನೆಲ್ಲಾ ಮರೆತು ರಶ್ಮಿ ಮತ್ತು ಸೀನಾ ಮನೆಗೆ ವಾಪಾಸ್ ಬರುತ್ತಾರೆ. ಇಬ್ಬರನ್ನು ಆರತಿ ಎತ್ತಿ ಸ್ವಾಗತಿಸುತ್ತಾರೆ. ಇನ್ನೇನು ರಶ್ಮಿ ಒಳಗೆ ಬರುವಾಗ, ತನ್ನ ಕೈಯನ್ನು ನೆಲದ ಮೇಲೆ ಇಡುವ ಸೀನಾ, ನಿನ್ನ ಕಾಲು ನೆಲ ಸೋಕದಂತೆ ನಾನು ಇನ್ನು ನಿನ್ನನ್ನು ಕಾಪಾಡುತ್ತೇನೆ ಎನ್ನುತ್ತಾನೆ. ಇದನ್ನು ನೋಡಿ ಶಿವು ಸೇರಿ ಮನೆಮಂದಿ ಸಂಭ್ರಮಪಟ್ಟಿದ್ದಾರೆ.
56
ಆದರೆ ವೀಕ್ಷಕರಿಗೆ ಯಾಕೋ ಸೀನಾ ಮೇಲೆ ಡೌಟ್
ಸೀನಾ ಬದಲಾಗಿರೋದನ್ನು ನೋಡಿ ವೀಕ್ಷಕರಿಗೆ ಯಾಕೋ ಸಂಶಯ ಕಾಡುತ್ತಿದೆ. ನಿಜವಾಗಿಯೂ ಸೀನ ಬದಲಾಗಿದ್ದಾನ? ಅಥವಾ ಇದು ಆಸ್ತಿ ಹೊಡೆಯಲು ಇರುವ ಸಂಚೇ? ಯಾಕೋ ಇದೆಲ್ಲಾ ಕನಸು ಅನಿಸ್ತಿದೆ ಎಂದು ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.
66
ಸೀನಾ ರಶ್ಮಿ ಜೋಡಿ ನೋಡಿ ಹಲವರಿಗೆ ಖುಷಿ
ಇನ್ನು ಒಂದಾದ ಸೀನಾ -ರಶ್ಮಿ ಜೋಡಿಯನ್ನು ನೋಡಿ ಹಲವು ವೀಕ್ಷಕರು ಸಂಭ್ರಮ ವ್ಯಕ್ತಪಡಿಸಿದ್ದಾರೆ. ಕಟ್ ಕೊಂಡೋಳು ಕೊನೆ ತನಕ ಇಟ್ಕೊಂಡೋಳು ಇರೋತನ. ಏನೇ ಕಷ್ಟ ಇದ್ರೂ ಕಟ್ಕೊಂಡೋಳು ಕೈ ಬಿಡಲ್ಲ. ಇಟ್ಕೊಂಡೋಳು ಅರ್ಧ ದಾರಿಲಿ ಬಿಟ್ಟು ಹೋಗೋದೇ. ಇನ್ಮೇಲೆ ಆದ್ರೂ ಕಟ್ ಕೊಂಡೋಳ್ಗೆ ಬೆಲೆ ಕೊಡು ಎಂದು ಹಾರೈಸಿದ್ದಾರೆ ಜನ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.