Annayya Serial: ಕೊನೆಗೂ ಬೆಂಕಿಯೊಳಗಡೆ ಅಡಗಿದ್ದ ಸತ್ಯದರ್ಶನ ಮಾಡಿಸಿದ ಮಾಂಕಾಳವ್ವ! ಈಗ ಆಟ ಶುರು

Published : Nov 23, 2025, 03:15 PM IST

Annayya Kannada Serial Episode Update: ಅಣ್ಣಯ್ಯ ಧಾರಾವಾಹಿಯಲ್ಲಿ ಶಿವು ಮೈಮೇಲೆ ದೇವಿ ಬಂದಾಗಿದೆ. ಅವನ ಮೈಮೇಲೆ ದೇವಿ ಬರಬಾರದು, ಸತ್ಯ ಹೊರಗಡೆ ಬರಬಾರದು ಎಂದು ಕಿಡಿಗೇಡಿಗಳು ಪ್ರಯತ್ನಪಟ್ಟರು. ಆದರೆ ಸತ್ಯ ಯಾವತ್ತಿದ್ರೂ ಹೊರಗಡೆ ಬರಲೇಬೇಕಿತ್ತು, ಬಂದಿದೆ.

PREV
15
ಶಿವು ಅವತಾರ ಬೇರೆಯೇ ಇದೆ

ಅಣಯ್ಯ ಧಾರಾವಾಹಿಯಲ್ಲಿ ಶಿವುಗೆ ಈ ಹಿಂದೆ ಒಂದು ಭಯಂಕರವಾದ ಲೈಫ್‌ ಇತ್ತು, ಅವನು ಕೊಲೆಗಾರ, ಸಿಕ್ಕಾಪಟ್ಟೆ ಜನರಿಗೆ ಹೊಡೆದಿದ್ದಾನೆ ಎನ್ನೋ ಸತ್ಯ ಇನ್ನೂ ಅವನ ಪತ್ನಿ ಪಾರ್ವತಿಗೆ ಗೊತ್ತೇ ಆಗಿಲ್ಲ.

25
ನಾಟಕ ಮಾಡ್ತಿರೋ ಜಿಮ್‌ ಸೀನ

ಒಂದು ಕಡೆ ರಶ್ಮಿ ಹಾಗೂ ಜಿಮ್‌ ಸೀನ ಜೀವನ ಚೆನ್ನಾಗಿಲ್ಲ. ಜಿಮ್‌ ಸೀನ ಮೊದಲೇ ಪಿಂಕಿಯನ್ನು ಪ್ರೀತಿ ಮಾಡುತ್ತಿದ್ದನು. ಯಾರು ಎಷ್ಟೇ ಬೇಡ ಎಂದರೂ ಕೂಡ ಅವನಿಗೆ ಒತ್ತಾಯ ಮಾಡಿ ಮದುವೆ ಮಾಡಲಾಯ್ತು. ಹೀಗಾಗಿ ಅವನು ರಶ್ಮಿ ಜೊತೆ ಮದುವೆಯಾಗಿದ್ದು, ಚೆನ್ನಾಗಿದ್ದೀವಿ ಎಂದು ನಾಟಕ ಮಾಡುತ್ತಿದ್ದಾನೆ. ಅವನಿಗೆ ಪಿಂಕಿ ಮದುವೆ ಆಗುವ ಪ್ಲ್ಯಾನ್‌ ಇದೆ. ಇದು ಶಿವುಗೆ ಗೊತ್ತಾಗಿಲ್ಲ.

35
ರಾಣಿ ಜೀವನ ಚೆನ್ನಾಗಿಲ್ಲ

ಮನು ಗೌಡ್ರು ದಡ್ಡ ಎನ್ನೋದನ್ನು ಮುಚ್ಚಿಡಲಾಗಿತ್ತು. ಈ ಸತ್ಯ ತಿಳಿಯದೆ. ರಾಣಿಯನ್ನು ಇವನಿಗೆ ಮದುವೆ ಮಾಡಿಕೊಡಲಾಗಿತ್ತು. ನಾಗೇಗೌಡ್ರು ಮನೆಯವರು ರಾಣಿಗೆ ಎಷ್ಟು ಹಿಂಸೆ ಕೊಡ್ತಾರೆ ಎನ್ನೋದು ಕೂಡ ಪಾರುಗೆ ಗೊತ್ತಿದ್ದರೂ ಕೂಡ ಶಿವುಗೆ ಗೊತ್ತೇ ಇಲ್ಲ.

45
ಜೈಲಿನಲ್ಲಿದ್ದ ಶಿವು ತಾಯಿ ಶಾರದಾ

ಶಿವು ತಾಯಿ ಶಾರದಾಳ ಹೆಸರಿಗೆ ಕಳಂಕ ಹೊರಿಸಿ, ಇಷ್ಟು ವರ್ಷ ಜೈಲಿನಲ್ಲಿ ಇರುವ ಹಾಗೆ ಮಾಡಿರೋದು ವೀರಭದ್ರ ಎನ್ನೋದು ಯಾರಿಗೂ ಗೊತ್ತಿಲ್ಲ. ತನ್ನ ತಾಯಿ ಯಾರದ್ದೋ ಜೊತೆ ಓಡಿಹೋದಳು ಎಂದು ಶಿವು ಅವಳನ್ನು ಕಂಡರೆ ದ್ವೇಷ ಮಾಡುತ್ತಿದ್ದಾನೆ.

55
ಮಾಂಕಾಳವ್ವ ತೋರಿಸಿಕೊಟ್ಟಿದ್ದೇನು?

ಈಗ ಶಿವು ಮೈಮೇಲೆ ದೇವರು ಬಂದಿದೆ. ಆ ದೇವಿ ಈಗ ಇವನ ಮೈಹೊಕ್ಕಿದ್ದಲ್ಲದೆ, ರಾಣಿ ಮನೆಗೆ ಹೋಗಿದೆ. ಪಾರು ಕೂಡ ಅವನ ಹಿಂದೆ ಹೋದಳು. ಅಲ್ಲಿ ಶಾರದಾ ಕಂಡಿದ್ದಾಳೆ. ಶಾರದಾಳೇ ಶಿವು ತಾಯಿ ಎನ್ನೋ ಸತ್ಯ ಪಾರುಗೆ ಗೊತ್ತಾಗಿದೆ. ಈಗ ಏನಾಗುವುದು ಎಂದು ಕಾದು ನೋಡಬೇಕಿದೆ.

Read more Photos on
click me!

Recommended Stories