Published : Apr 16, 2025, 05:31 PM ISTUpdated : Apr 16, 2025, 05:38 PM IST
ನನ್ನ ಎಂಗೇಜ್‌ಮೆಂಟ್ ಬಹಳ ಎಗ್ಸೈಟಿಂಗ್ ಆಗಿತ್ತು. ಮನಸ್ಸಿಗೆ ಬಹಳ ಖುಷಿ ಅನಿಸಿತು. ಉಳಿದಂತೆ ಸ್ಕ್ರಿಪ್ಟ್, ಸ್ಟೇಜ್‌ಗಳೇ ನನ್ನ ಜಗತ್ತು, ಆತನಿಗೆ ಆಕಾಶವೇ ಪ್ರಪಂಚ, ನಮ್ಮಿಬ್ಬರ ನಡುವೆ ವಿಧಿ ಪರ್ಫೆಕ್ಟ್ ಲವ್ ಸ್ಟೋರಿ ಬರೆದಿದ್ದೇ ಮಜಾ ಸಂಗತಿ ಎಂದಿದ್ದಾರೆ.
ನನ್ನ ಭಾವಿ ಪತಿ ಅನುಕೂಲ್ ಏರ್‌ಫೋರ್ಸ್‌ನಲ್ಲಿದ್ದಾರೆ, ಏರ್‌ಪೋರ್ಟ್‌ನಲ್ಲಲ್ಲ. ಸೋಷಿಯಲ್ ಮೀಡಿಯಾದಲ್ಲಿ ಅವರು ಏರ್‌ಪೋರ್ಟ್‌ನಲ್ಲಿದ್ದಾರೆ ಅಂತ ಕೆಲವರು ಬರೆದಿದ್ದು ಅವರಿಗೆ ಕೊಂಚ ಬೇಸರ, ಕೊಂಚ ತಮಾಷೆ ಅನಿಸಿದೆ.
26
ಹೀಗಂದಿದ್ದು ನಟಿ ವೈಷ್ಣವಿ ಗೌಡ. ಅವರ ನಿಶ್ಚಿತಾರ್ಥ ವಾಯುಸೇನೆ ಅಧಿಕಾರಿ ಅನುಕೂಲ್ ಮಿಶ್ರಾ ಜೊತೆಗೆ ಅದ್ದೂರಿಯಾಗಿ ನಡೆದಿದೆ. ತನ್ನ ಎಂಗೇಜ್‌ಮೆಂಟ್ ಬಗ್ಗೆ ವಿವರ ನೀಡಿದ ವೈಷ್ಣವಿ, ನನ್ನ ಎಂಗೇಜ್‌ಮೆಂಟ್ ಬಹಳ ಎಗ್ಸೈಟಿಂಗ್ ಆಗಿತ್ತು.
36
ಮನಸ್ಸಿಗೆ ಬಹಳ ಖುಷಿ ಅನಿಸಿತು. ಉಳಿದಂತೆ ಸ್ಕ್ರಿಪ್ಟ್, ಸ್ಟೇಜ್‌ಗಳೇ ನನ್ನ ಜಗತ್ತು, ಆತನಿಗೆ ಆಕಾಶವೇ ಪ್ರಪಂಚ, ನಮ್ಮಿಬ್ಬರ ನಡುವೆ ವಿಧಿ ಪರ್ಫೆಕ್ಟ್ ಲವ್ ಸ್ಟೋರಿ ಬರೆದಿದ್ದೇ ಮಜಾ ಸಂಗತಿ ಎಂದಿದ್ದಾರೆ.
46
ಅನುಕೂಲ್ ನನಗಾಗಿ ಇಂಟರ್‌ನೆಟ್ ಮೂಲಕ ಕನ್ನಡ ಕಲಿತು, ನಾನು ನಿನ್ನನ್ನು ಹೆಚ್ಚು ಹೆಚ್ಚು ಪ್ರೀತಿಸುತ್ತೇನೆ ವೈಷ್ಣವಿ ಅಂತ ಹೇಳಿದ್ದು ಬಹಳ ಇಷ್ಟವಾಯಿತು ಎಂದರು ವೈಷ್ಣವಿ ಗೌಡ.
56
ವೈಷ್ಣವಿ ಗೌಡ ಅವರು ‘ಬಿಗ್ ಬಾಸ್’ನಲ್ಲಿ ಸ್ಪರ್ಧಿಸಿದ್ದ ಸಂದರ್ಭದಲ್ಲಿ ತಮಗೆ ಮದುವೆ ಬಗ್ಗೆ ಇರುವ ಕನಸುಗಳ ಬಗ್ಗೆ ಹೇಳಿಕೊಂಡಿದ್ದರು. ಮದುವೆನ ಹೀಗೆ ಆಗ್ತೀನಿ, ಹಾಗೆ ಆಗ್ತೀನಿ ಎಂದೆಲ್ಲ ವಿವರಿಸಿದ್ದರು. ಅವರಿಗೆ ಸಾಕಷ್ಟು ಮದುವೆ ಆಫರ್ಗಳು ಬಂದರೂ ಅದನ್ನು ಒಪ್ಪಿಲ್ಲ ಎಂದಿದ್ದರು.
66
ಆದ್ದರಿಂದ ಪದೇ ಪದೇ ಎಲ್ಲೇ ಹೋದರೂ ಇವರ ಮದ್ವೆ ವಿಷಯವೇ ಪ್ರಸ್ತಾಪ ಆಗುತ್ತಿತ್ತು. ಇವರ ಸ್ನೇಹಿತೆಯೂ ಆದ ಸೀತಾರಾಮ ಪ್ರಿಯಾ ಅರ್ಥಾತ್ ಮೇಘನಾ ಶಂಕರಪ್ಪ ಅವರು ಮದುವೆಯಾದ ಮೇಲಂತೂ ಇನ್ನಷ್ಟು ಒತ್ತಡ ಹೆಚ್ಚಾಗಿತ್ತು. ಆದರೆ ಈಗ ಎಲ್ಲರ ಆಸೆ ನೆರವೇರಿದೆ.