ಅಮೃತಧಾರೆ ಸೀರಿಯಲ್ನಲ್ಲಿ ಶಕುಂತಲಾ ಮತ್ತು ಜೈದೇವ್ ಸೇರಿ ಗೌತಮ್-ಭೂಮಿಕಾ ವಿರುದ್ಧ ಸಂಚು ರೂಪಿಸುತ್ತಿದ್ದಾರೆ. ಇದೇ ವೇಳೆ, ಭೂಮಿಕಾಳ ಡೈರಿಯನ್ನು ಪುಸ್ತಕ ರೂಪದಲ್ಲಿ ತರಲು ಹಿರಿಯ ಪತ್ರಕರ್ತ ಜೋಗಿ ಅವರ ಎಂಟ್ರಿಯಾಗಿದೆ. ಈ ಎಲ್ಲಾ ತಿರುವುಗಳು ಧಾರಾವಾಹಿಯಲ್ಲಿ ಕುತೂಹಲ ಹೆಚ್ಚಿಸಿವೆ.
ಅಮೃತಧಾರೆ ಸೀರಿಯಲ್ (Amruthadhaare Serial) ಇದೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಒಂದೆಡೆ ವಿಲನ್ಗಳಾದ ಶಕುಂತಲಾ ಮತ್ತು ಜೈದೇವ್ ಅಮ್ಮ-ಮಗ ಒಂದಾಗಿದ್ದು, ಗೌತಮ್-ಭೂಮಿಕಾ ವಿರುದ್ಧ ಸಂಚು ರೂಪಿಸುತ್ತಿದ್ದಾರೆ. ಇದರ ಅರಿವೇ ಇಲ್ಲದ ಎಲ್ಲರೂ ಶಕುಂತಲಾ ಬದಲಾಗಿ ಒಳ್ಳೆಯವಳಾಗಿದ್ದಾಳೆ ಎಂದೇ ಅಂದುಕೊಂಡಿದ್ದಾರೆ.
26
ಡೈರಿ ಬರೆಯುವ ಅಭ್ಯಾಸ
ಅದೇ ಇನ್ನೊಂದೆಡೆ, ಸೀರಿಯಲ್ನಲ್ಲಿ ಭೂಮಿಕಾಳಿಗೆ ಮೊದಲಿನಿಂದಲೂ ಡೈರಿ ಬರೆಯುವ ಅಭ್ಯಾಸವಿತ್ತು. ಅದನ್ನು ಈಗ ಓದಿರುವ ಗೌತಮ್ ಆಕೆಯ ಜೀವನದ ಪ್ರತಿಯೊಂದು ಮಜಲುಗಳನ್ನು ಪುಸ್ತಕದ ರೂಪದಲ್ಲಿ ಹೊರತಂದು, ಭೂಮಿಕಾಗೆ ಸರ್ಪ್ರೈಸ್ ಕೊಟ್ಟಿದ್ದಾನೆ.
36
ಹಿರಿಯ ಪತ್ರಕರ್ತ ಜೋಗಿ ಎಂಟ್ರಿ
ಕುತೂಹಲ ಎನ್ನುವಂತೆ ಈ ಸೀರಿಯಲ್ನಲ್ಲಿ ಮತ್ತೊಮ್ಮೆ ಜೋಗಿ ಸರ್ ಎಂದೇ ಫೇಮಸ್ ಆಗಿರುವ, ಹಿರಿಯ ಪತ್ರಕರ್ತ, ಕನ್ನಡ ಪ್ರಭ ಪತ್ರಿಕೆಯ ಸಂಪಾದಕರಾಗಿರುವ ಗಿರೀಶ ರಾವ್ ಹತ್ವಾರ ಅವರು ಎಂಟ್ರಿ ಆಗಿದ್ದಾರೆ. ಪತ್ರಕರ್ತ ಗೌರೀಶ್ ಅಕ್ಕಿ ಅವರನ್ನೂ ಸೀರಿಯಲ್ನ ಪುಸ್ತಕ ಬಿಡುಗಡೆ ಸಮಾರಂಭಕ್ಕೆ ಆಮಂತ್ರಿಸಲಾಗಿದೆ. ಈ ಮೂಲಕ ಸೀರಿಯಲ್ನಲ್ಲಿ ಇನ್ನೊಂದು ಕುತೂಹಲವನ್ನು ತರಲಾಗಿದೆ.
ಜೋಗಿ ಸರ್ ಎಂದರೆ ಸೀರಿಯಲ್ನಲ್ಲಿ ಭೂಮಿಕಾಗೆ ಸಿಕ್ಕಾಪಟ್ಟೆ ಆಪ್ತರು. ಇದೇ ಕಾರಣಕ್ಕೆ ಈ ಹಿಂದೆಯೂ ಗೌತಮ್ ಇವರನ್ನು ಪರಿಚಯ ಮಾಡಿಸಿ ಭೂಮಿಕಾಗೆ ಸರ್ಪ್ರೈಸ್ ನೀಡಿದ್ದರೆ, ಇದೀಗ ಅಮೃತಧಾರೆ ಪುಸ್ತಕದ ಬಿಡುಗಡೆಗೂ ಅವರನ್ನೇ ಆಹ್ವಾನಿಸಿರುವ ಪ್ರೊಮೋ ಬಿಡುಗಡೆ ಮಾಡಲಾಗಿದೆ.
56
ಗೌತಮ್ಗೆ ಕಾಯಿಲೆ?
ಇನ್ನು ಸೀರಿಯಲ್ ವಿಷಯಕ್ಕೆ ಬರುವುದಾದರೆ, ಗೌತಮ್ಗೆ ಏನೋ ಕಾಯಿಲೆ ಇರುವಂತೆ ತೋರಿಸಲಾಗಿದೆ. ಆಫೀಸ್‌ನಲ್ಲಿ ಗೌತಮ್ ತಲೆ ಸುತ್ತಿ ಬಿದ್ದಿದ್ದಾನೆ. ಇದನ್ನು ನೋಡಿ ಆನಂದ್ ಚಿಂತಾಕ್ರಾಂತನಾಗಿದ್ದಾನೆ. ಈ ವಿಷಯವನ್ನು ಅವನು ಭೂಮಿಕಾಗೂ ಕೂಡ ತಿಳಿಸಿದ್ದಾನೆ. ಭೂಮಿಕಾ ಕೂಡ ಪತಿಯ ಆರೋಗ್ಯಕ್ಕೆ ಏನಾದರೂ ಆಗಿರಬಹುದಾ ಎಂದು ಅವಳು ಆಲೋಚನೆ ಮಾಡಿದ್ದಾಳೆ.
66
ಸೀರಿಯಲ್ ಮುಗಿಯಲ್ಲ
ಈ ರೀತಿಯ ಟ್ವಿಸ್ಟ್ ಇನ್ನೊಂದೆಡೆ ಕೊಟ್ಟು, ಅದೇ ಮತ್ತೊಂದೆಡೆ ಶಕುಂತಲಾ ಸರ್ವನಾಶ ಮಾಡುವ ಪಣತೊಟ್ಟಿದ್ದು, ಇನ್ನೊಂದೆಡೆ, ಈ ಪುಸ್ತಕ ಬಿಡುಗಡೆ... ಹೀಗೆ ವಿವಿಧ ರೀತಿಯ ವಿಷಯಗಳನ್ನು ಮತ್ತೆ ತರಲಾಗಿರುವ ಕಾರಣ, ಸೀರಿಯಲ್ ಅಂತೂ ಸದ್ಯ ಮುಗಿಯಲ್ಲ ಎನ್ನುವುದು ಕನ್ಫರ್ಮ್ ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.