'ಕರುನಾಡ ನಿರೂಪಕಿಯರ ಸಾಲಿನ ಸೌಂದರ್ಯದ ಗೊಂಬೆ': ಅನುಪಮಾ ಗೌಡ ಫೋಟೋಶೂಟ್‌ಗೆ ಬಂತು ವೈರಲ್‌ ಕಾಮೆಂಟ್‌!

First Published | Dec 30, 2023, 2:30 AM IST

‘ಬಿಗ್ ಬಾಸ್’ ಖ್ಯಾತಿಯ ಅನುಪಮಾ ಗೌಡ ನಯಾ ಫೋಟೋಶೂಟ್ ಮಾಡಿಸಿಕೊಂಡಿದ್ದಾರೆ. ಆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುವ ಮೂಲಕ ನಟಿ ಅನುಪಮಾ ಗೌಡ ಪಡ್ಡೆಹುಡುಗರ ನಿದ್ದೆಗೆಡಿಸಿದ್ದಾರೆ. 

ಆ ಕರಾಳ ರಾತ್ರಿ, ಪುಟ 109, ಬೆಂಕಿಯಲ್ಲಿ ಅರಳಿದ ಹೂವು ಸೇರಿದಂತೆ ಹಲವು ಸಿನಿಮಾಗಳಲ್ಲಿ ನಾಯಕಿಯಾಗಿ ಅನುಪಮಾ ನಟಿಸಿದ್ದರು. ಆ ಕರಾಳ ರಾತ್ರಿ ಸಿನಿಮಾ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತ್ತು. ಕಿರುತೆರೆಯಿಂದ ಹಿರಿತೆರೆಗೆ ಬಂದ ನಟಿ ಅನುಪಮಾ ಬಿಗ್ ಬಾಸ್ ರಿಯಾಲಿಟಿ ಶೋನಲ್ಲಿ ಕೂಡ ಛಾಪು ಮೂಡಿಸಿದ್ದರು. 

ಇದೀಗ ಅನುಪಮಾ ಗೌಡ ಆರೆಂಜ್ ಬಣ್ಣದ ಡ್ರೆಸ್‌ನಲ್ಲಿ ಸಖತ್ತಾಗಿ ಮಿಂಚಿದ್ದು, ಕ್ಯಾಮೆರಾಗೆ ವಿವಿಧ ಭಂಗಿಗಳಲ್ಲಿ ಪೋಸ್ ಕೊಟ್ಟಿದ್ದಾರೆ. ಅಭಿಮಾನಿಗಳು ಸಹ ಫೋಟೋಸ್ ನೋಡಿ ಮೆಚ್ಚುಗೆಯ ಸುರಿಮಳೆ ಗೈದಿದ್ದಾರೆ. 

Tap to resize

ಅನುಪಮಾ ಗೌಡ ಶೇರ್ ಮಾಡಿದ ಫೋಟೋಗಳಿಗೆ 30 ಸಾವಿರಕ್ಕೂ ಹೆಚ್ಚು ಲೈಕ್ಸ್ ಬಂದಿವೆ. ನೈಸ್, ಸೂಪರ್, ಮುದ್ದು ಮೊಗದ ಸೌಮ್ಯ ಸ್ವಭಾವದ ಅನು ನೀವು ಯಾವಾಗಲೂ ಚಂದ, ಕರುನಾಡ ನಿರೂಪಕಿಯರ ಸಾಲಿನ ಅನುಪಮ ಸೌಂದರ್ಯದ ಗೊಂಬೆ ಎಂದು ಫ್ಯಾನ್ಸ್ ಹೇಳಿದ್ದಾರೆ.

ಅನುಪಮಾಗೆ ಸೋಲೋ ಟ್ರಿಪ್ ಹೋಗುವುದು ಎಂದರೆ ಬಹಳ ಇಷ್ಟವಂತೆ. ಹಾಗೆಯೇ ಹಲವಾರು ಬಾರಿ ಟ್ರಿಪ್‌ಗಳಿಗೂ ಹೋಗಿದ್ದಾರೆ. ಟ್ರಿಪ್‌ನಲ್ಲಿ ಎಂಜಾಯ್ ಮಾಡುತ್ತಿರುವ ದೃಶ್ಯವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಅನುಪಮಾ ಗೌಡ ಅವರು ಒಳ್ಳೆ ಸಿನಿಮಾ ಮಾಡಲು ಕಾಯ್ತಾ ಇದ್ದಾರಂತೆ. ಅಲ್ಲದೇ ಫೋಟೋಗ್ರಫಿ ಅಂದ್ರೂ ಅನುಪಮಾ ಅವರಿಗೆ ಇಷ್ಟ ಅಂತೆ. ಕ್ಯಾಮೆರಾ ಹಿಡಿದು ಪ್ರವಾಸಕ್ಕೆ ಹೋಗ್ತಾ ಇರ್ತಾರೆ. ವಿಶೇಷವಾಗಿ ನಿರೂಪಕಿಯಾಗಿ ಅನುಪಮಾ ಲಕ್ಷಾಂತರ ಅಭಿಮಾನಿಗಳನ್ನೂ ಹೊಂದಿದ್ದಾರೆ. 

ಮಾತಿನ ಮೂಲಕವೇ ಸಾವಿರ ಹೃದಯಗಳನ್ನು ಖೆಡ್ಡಾಗಿ ಕೆಡವುವ ತಾಕತ್ತು ಅನುಪಮಾ ಗೌಡರಿಗಿದೆ. ಗುಳಿಕೆನ್ನೆಯ ಮೇಲಿನ ನಗು ಮತ್ತು ತುಟಿ ಚಲನೆಗಳ ಮೂಲಕ ಮಾತಿಗೆ ಬೇರೆಯೇ ಶಕ್ತಿ ನೀಡುವ ಈ ಸುಂದರಿಯು ಕಿರುತೆರೆ ಮತ್ತು ಹಿರಿತೆರೆ ಎರಡಲ್ಲೂ ಸೈ ಅನಿಸಿಕೊಂಡವರು. 

ಅನುಪಮಾ ಗೌಡ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯರಾಗಿರುತ್ತಾರೆ. 879 ಕೆ ಫಾಲೋವರ್ಸ್ ಹೊಂದಿದ್ದಾರೆ. ಇಲ್ಲಿಯವರೆಗೆ 1,472 ಪೋಸ್ಟ್ ಗಳನ್ನು ಹಂಚಿಕೊಂಡಿದ್ದಾರೆ. ಆಗಾಗ ಫೋಟೋ, ವಿಡಿಯೋಗಳನ್ನು ಶೇರ್ ಮಾಡ್ತಾ ಇರ್ತಾರೆ.

Latest Videos

click me!