ನನ್ನಿಂದ ಸಮಸ್ಯೆ ಅಥವಾ ಅವಮಾನ ಆಯ್ತಾ?; ಪತ್ನಿಗೆ ವಿನಯ್ ಗೌಡ ಪ್ರಶ್ನೆ

Published : Dec 29, 2023, 10:57 AM IST

ಸಂಗೀತಾ ಜೊತೆ ಚರ್ಚೆ ಮಾಡಿದ ವಿನಯ್ ಪತ್ನಿ. ಜಗಳ ಆಗುತ್ತೆ ಅಂದುಕೊಂಡ್ರೆ ನಗುತ್ತಲೇ ಮಾತನಾಡುತ್ತಿದ್ದರು.

PREV
19
ನನ್ನಿಂದ ಸಮಸ್ಯೆ ಅಥವಾ ಅವಮಾನ ಆಯ್ತಾ?; ಪತ್ನಿಗೆ ವಿನಯ್ ಗೌಡ ಪ್ರಶ್ನೆ

ಬಿಗ್ ಬಾಸ್ ಸೀಸನ್ 10ರ ಟಫ್ ಸ್ಪರ್ಧಿ ವಿನಯ್ ಗೌಡ ಅವರ ದಿನ ಆರಂಭವಾಗುವ ಮುನ್ನವೇ ಪತ್ನಿ ಪಕ್ಕದಲ್ಲಿ ಬಂದು ನಿಂತಿದ್ದರು. 

29

ವಿಲನ್‌ ಮುಖದಲ್ಲಿ ಹೀರೋ ಕಳೆ ಬಂದಿದೆ ಎಂದು ತನಿಷಾ ತಮಾಷೆ ಮಾಡುತ್ತಾರೆ ಆಗ ನಾನು ವಿಲನ್ ಆಗೋಕಿಂತ ಮುಂಚೆ ಹೀರೋನೆ ಎಂದು ವಿನಯ್ ಹೇಳುತ್ತಾರೆ.

39

ಮೊದಲು ಪ್ರತಾಪ್ ಬಳಿ ಮಾತನಾಡಿದ ವಿನಯ್ ಪತ್ನಿ ಅಕ್ಷತಾ 'ನಿನ್ನ ತಾಯಿಯಾಗಿ ಮಾತನಾಡುತ್ತಿದ್ದೀನಿ ಯಾರು ಏನೇ ಹೇಳಿದರೂ ತಲೆ ಕೆಡಿಸಿಕೊಳ್ಳಬೇಡ' ಎನ್ನುತ್ತಾರೆ.

49

ಆನಂತರ ಪತ್ನಿ ಬಳಿ ವಿನಯ್ ನನ್ನಿಂದ ನಿಮಗೆ ಬೇಸರ ಆಯ್ತಾ? ನನ್ನಿಂದ ನಿಮಗೆ ಅವಮಾನ ಆಯ್ತಾ ಎಂದು ಪದೇ ಪದೇ ಪ್ರಶ್ನೆ ಮಾಡಿದ್ದಾರೆ.

59

 'ಖಂಡಿತ ಬೇಸರ ಇಲ್ಲ. ನೀವು ಇಷ್ಟು ಚೆನ್ನಾಗಿ ಆಟ  ಆಡುತ್ತಿದ್ದೀರಿ ಇಷ್ಟು ಪ್ರತಿಭೆ ಇದೆ ಅಂತ ನನಗೆ ಗೊತ್ತಿರಲಿಲ್ಲ. ನೀವು ಯಾಕೆ ಬಾತ್‌ರೂಮ್‌ನಲ್ಲಿ ಅತ್ತರಿ? ಎಂದು ಅಕ್ಷತಾ ಕೇಳುತ್ತಾರೆ.

69

ಇಲ್ಲಿ ಆಗುತ್ತಿರುವುದನ್ನು ನೋಡಿ ನೀನು ಅತ್ತೆ ಅಂತ ಗೊತ್ತಾಗಿ ನಾನು ಅತ್ತೆ. ನಿಜಕ್ಕೂ ಖುಷಿ ಇದ್ಯಾ ಎಂದು ವಿನಯ್ ಹೇಳುತ್ತಾರೆ.

79

ಇದಾದ ಮೇಲೆ ಸಂಗೀತಾ ಬಳಿ ಚೆನ್ನಾಗಿ ಆಟ ಆಡುತ್ತಿದ್ದೀರಿ. ಆಟ ಆಡಿ. ನಮಗೆ ಬೇಸರ ಆಗಿದ್ದೂ ಇದೆ ಆಮೇಲೆ ಇದನ್ನು ಮರೆತಿದ್ದೇವೆ' ಅಂತಾರೆ ಅಕ್ಷತಾ.

89

'ಇದು ಆಟ ಅಂತ ಗೊತ್ತಿದೆ. ನಾನು ಕೂಡ ರಿಯಾಲಿಟಿ ಶೋ ಆಟ ಆಡಿದ್ದೇನೆ. ನನಗೆ ಇದೆಲ್ಲಾ ಅರ್ಥವಾಗುತ್ತದೆ' ಎಂದು ಅಕ್ಷತಾ ಹೇಳಿದ್ದಾರೆ.

99

ನನ್ನಿಂದ ನಿಮ್ಮ ಮನಸ್ಸಿಗೆ ಬೇಸರ ಅಥವಾ ನೋವು ಆಗಿದ್ದರೆ ದಯವಿಟ್ಟು ಕ್ಷಮಿಸಿಬಿಡಿ ಎಂದು ಸಂಗೀತಾ ಅಕ್ಷತಾಗೆ ಹೇಳಿದ್ದಾರೆ.

Read more Photos on
click me!

Recommended Stories