ಪಾರು ಖ್ಯಾತಿಯ ಮೋಕ್ಷಿತಾ ಪೈ ನಿವಾಸದಲ್ಲಿ ಸತ್ಯನಾರಾಯಣಸ್ವಾಮಿ ಪೂಜೆ

Published : Dec 29, 2023, 05:31 PM IST

ಪಾರು ಸೀರಿಯಲ್ ಮೂಲಕ ಖ್ಯಾತಿ ಪಡೆದಿರುವ ನಟಿ ಮೋಕ್ಷಿತಾ ಪೈ ನಿವಾಸದಲ್ಲಿ ಸತ್ಯನಾರಾಯಣ ಸ್ವಾಮಿ ಪೂಜೆ ಏರ್ಪಡಿಸಿದ್ದು, ಪೂಜೆಯಲ್ಲಿ ಪಾರು ಸೀರಿಯಲ್ ತಂಡದ ತಾರೆಯರು ಭಾಗಿಯಾಗಿದ್ದರು. 

PREV
18
ಪಾರು ಖ್ಯಾತಿಯ ಮೋಕ್ಷಿತಾ ಪೈ ನಿವಾಸದಲ್ಲಿ ಸತ್ಯನಾರಾಯಣಸ್ವಾಮಿ ಪೂಜೆ

ಝೀ ಕನ್ನಡದಲ್ಲಿ (Zee Kannada) ಕಳೆದ ಐದು ವರ್ಷಗಳಿಂದ ಮನರಂಜನೆ ನೀಡುತ್ತಾ ಬಂದಿರುವ ಪಾರು ಸೀರಿಯಲ್ ನ ನೆಚ್ಚಿನ ತಾರೆ ಮೋಕ್ಷಿತಾ ಪೈ ತಮ್ಮ ಪರ್ಸನಲ್ ಲೈಫ್ ಮತ್ತು ಪ್ರೊಫೆಶನಲ್ ಲೈಫ್ ಎರಡೂ ವಿಷಯದಲ್ಲೂ ಸದಾ ಸುದ್ದಿಯಲ್ಲಿರುತ್ತಾರೆ. 
 

28

ಸೋಶಿಯಲ್ ಮೀಡಿಯಾದಲ್ಲಿ ಸದಾ ಆಕ್ಟೀವ್ (Mokshitha Pai) ಆಗಿರುವ ಮೋಕ್ಷಿತಾ ಹೆಚ್ಚಾಗಿ ತಮ್ಮ ಮನೆಯವರೊಂದಿಗಿನ ಫೋಟೊ, ಸೆಟ್ ನಲ್ಲಿನ ಫೋಟೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಈ ಬಾರಿ ತಮ್ಮ ಮನೆಯಲ್ಲಿ ನಡೆದ ಪೂಜೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. 

38

ಮೋಕ್ಷಿತಾ ಮನೆಯಲ್ಲಿ ಇತ್ತೀಚೆಗೆ ಸತ್ಯನಾರಾಯಣ ಸ್ವಾಮಿ ಪೂಜೆ ನಡೆದಿದ್ದು, ಸಂಭ್ರಮದಿಂದ ಪೂಜೆ ನಡೆದಿದ್ದು, ಕಾರ್ಯಕ್ರಮಕ್ಕೆ ಪಾರು ಸೀರಿಯಲ್ ನ ಸಹ ನಟ ನಟಿಯರು ಭಾಗಿಯಾಗಿ ಸಂಭ್ರಮಿಸಿದ್ದಾರೆ. 

48

ಕಾರ್ಯಕ್ರಮದಲ್ಲಿ ಶರತ್ ಪದ್ಮನಾಭನ್ (Sharath Padmanabhan), ಮಾನ್ಸಿ ಜೋಶಿ, ನಾಗೇಂದ್ರ ಶಾ, ಸುಮಾ ಶಾಸ್ತ್ರೀ, ನಾಗೇಶ್ ಯಾದವ್, ಗಗನ್ ದೀಪ್ ಮೊದಲಾದವರು ಕುಟುಂಬದ ಜೊತೆ ಆಗಮಿಸಿ, ಪೂಜೆಯಲ್ಲಿ ಭಾಗವಹಿಸಿದ್ದಾರೆ. 

58

ಪೂಜೆಯ ಸಂಭ್ರಮದಲ್ಲಿ ಮೋಕ್ಷಿತಾ ಹಳದಿ ಬಣ್ಣದ ಜರಿ ಸೀರೆಯುಟ್ಟು, ಅದಕ್ಕೆ ಮ್ಯಾಚಿಂಗ್ ಆಗುವ ಹಸಿರು ಮತ್ತು ಮರೂನ್ ಬಣ್ಣದ ಸರ, ಬಳೆ, ಕಿವಿಯೋಲೆ, ಮುಂದಾಲೆ ಧರಿಸಿ, ತಲೆಗೆ ಕನಕಾಂಬರ ಮುಡಿದು ಸುಂದರವಾಗಿ ಕಾಣಿಸುತ್ತಿದ್ದರು. 

68

ಇನ್ನು ಕರಿಯರ್ (Career) ವಿಷಯಕ್ಕೆ ಬಂದ್ರೆ ಕನ್ನಡ, ತಮಿಳು, ತೆಲುಗು ಸೀರಿಯಲ್ ಗಳಲ್ಲೂ ನಟಿಸಿರುವ ಪಾರು, ತಮಿಳು ತೆಲುಗು ಸೀರಿಯಲ್ ಗಳಿಂದ ಬೇಗನೆ ಹೊರಬಂದು ಕಳೆದ ಐದು ವರ್ಷಗಳಿಂದ ಪಾರು ಸೀರಿಯಲ್ ನಲ್ಲಿ ಪಾರು ಪಾತ್ರದ ಮೂಲಕವೇ ಮಿಂಚುತ್ತಿದ್ದಾರೆ. 

78

ಸೀರಿಯಲ್ (Serial) ನಲ್ಲಿ ತನ್ನ ಮಗುವನ್ನು ಜನನಿಗೆ ನೀಡಿ ತ್ಯಾಗಮಯಿ ಎನಿಸಿಕೊಂಡಿರುವ ಪಾರು, ಸದ್ಯ ಮಗುವಿನ ಸಾಮಿಪ್ಯಕ್ಕಾಗಿ ಆಕೆಯ ಸೇವೆಯನ್ನು ಮಾಡುವ ತಾಯಿಯಾಗಿ ಜೊತೆಯಾಗಿ ನಿಂತಿದ್ದಾಳೆ. 

88

ಮಂಗಳೂರು ಮೂಲದ ಈ ಚೆಲುವೆ ಮೋಕ್ಷಿತಾ ಪೈ ರಿಯಲ್ ಲೈಫಲ್ಲಿ ಜೊತೆಗೆ ರೀಲ್ ಲೈಫ್ ಎರಡರಲ್ಲೂ ಎಲ್ಲಾ ಅಭಿಮಾನಿಗಳಿಂದ ಪಾಸಿಟಿವ್ ಮಾತುಗಳನ್ನೇ ಕೇಳಿಕೊಂಡು ಬಂದಿದ್ದಾರೆ. ವಿಕಲಚೇತನ ತಮ್ಮನಿಗೆ ಎರಡನೇ ತಾಯಿಯಾಗಿರುವ ಪಾರು, ಸೋಶಿಯಲ್ ಮೀಡಿಯಾದಲ್ಲೂ ತಮ್ಮನ ಬಗ್ಗೆ ಬರೆದುಕೊಂಡು ಫೋಟೋ ಹಂಚಿಕೊಳ್ಳುತ್ತಿರುತ್ತಾರೆ. 

Read more Photos on
click me!

Recommended Stories