ಜೀ ಕನ್ನಡವು ನಡೆಸಿದಂತಹ ‘ಅಮೃತಧಾರೆ ಸಂಕ್ರಾಂತಿ ಜಾತ್ರೆ’ ಅದ್ಧೂರಿಯಾಗಿ ನಡೆದಿತ್ತು, ಈ ಕಾರ್ಯಕ್ರಮದಲ್ಲಿ ಗೌತಮ್ ದಿವಾನ್ ಖ್ಯಾತಿಯ ರಾಜೇಶ್ ನಟರಂಗ ಅವರ ಪುತ್ರಿ ಮತ್ತು ಪತ್ನಿ ನಟನಿಗೆ ಸರ್ಪ್ರೈಸ್ ಕೊಡಲು ಬಂದಿದ್ದು, ರಾಜೇಶ್ ಅವರಂತೆ ಮಗಳು ಕೂಡ ನಟಿ.
ಜೀ ಕನ್ನಡ ವಾಹಿನಿಯು ಅಮೃತಧಾರೆ ಸಂಕ್ರಾಂತಿ ಜಾತ್ರೆ ದಾವಣಗೆರೆಯಲ್ಲಿ ಅದ್ಧೂರಿಯಾಗಿಯೇ ನಡೆದಿದ್ದು, ಗೌತಮ್ ದಿವಾನ್ -ಭೂಮಿಕಾ ಅಭಿಮಾನಿಗಳ ಸಾಗರವೇ ನೆರೆದಿತ್ತು, ಜೊತೆಗೆ ಅಭಿಮಾನಿಗಳು ಈ ಮುದ್ದಾದ ಜೋಡಿಗಳ 48 ಅಡಿ ಎತ್ತರದ ಕಟೌಟ್ ನಿಲ್ಲಿಸಿ, ತಮ್ಮ ಅಭಿಮಾನ ಮೆರೆದಿದ್ದಾರೆ.
27
ರಾಜೇಶ್ ನಟರಂಗ
ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್ ಆಗಿ ಖ್ಯಾತಿ ಪಡೆದಿರುವ ನಟ ರಾಜೇಶ್ ನಟರಂಗ ಅವರಿಗೆ ಸಂಕ್ರಾಂತಿ ಜಾತ್ರೆ ವೇದಿಕೆಯಲ್ಲಿ ದೊಡ್ಡ ಸರ್ಪ್ರೈಸ್ ಸಿಕ್ಕಿದೆ. ಗೌತಮ್ ರೀಲ್ ಪತ್ನಿಯನ್ನು ಕೊಂಚ ಹೊತ್ತು ಸೈಡ್ ಬಿಟ್ಟು, ರಾಜೇಶ್ ಅವರ ರಿಯಲ್ ಪತ್ನಿ ಹಾಗೂ ಪುತ್ರಿಯನ್ನು ವೇದಿಕೆಗೆ ಕರೆಯಿಸಲಾಯಿತು.
37
ಪತ್ನಿ-ಪುತ್ರಿಯನ್ನು ನೋಡಿ ರಾಜೇಶ್ ಶಾಕ್
ಮನೆಯಿಂದ ಹೊರಡುವಾಗ ಪತ್ನಿ ಮತ್ತು ಪುತ್ರಿ ಬೇರೆ ಕಡೆ ಹೋಗುವುದಾಗಿ ಡ್ರಾಮ ಮಾಡಿದ್ದರಂತೆ, ಆದರೆ ವೇದಿಕೆ ಮೇಲೆ ಇಬ್ಬರನ್ನು ನೋಡಿ ರಾಜೇಶ್ ಶಾಕ್ ಆಗಿದ್ದಾರೆ. ಇವರಿಬ್ಬರು ದೊಡ್ಡ ನಟರಾಗಬೇಕಿತ್ತು, ಮನೆಯಲ್ಲಿ ಸಿಕ್ಕಾಪಟ್ಟೆ ಡ್ರಾಮ ಮಾಡಿದ್ದಾರೆ. ಹಾಗಾಗಿ ಇವರು ಸೀರಿಯಲ್ ನಲ್ಲಿ ನಟಿಸಿದ್ರೆ ಖಂಡಿತಾ ನೀವು ಇಷ್ಟಪಡಬಹುದು ಎಂದಿದ್ದಾರೆ.
ರಾಜೇಶ್ ನಟರಂಗ ಅವರ ಪುತ್ರಿ ಧ್ವನಿ ರಾಜೇಶ್, ಇವರು ಸದ್ಯ ಡಿಗ್ರಿ ಎರಡನೇ ವರ್ಷದಲ್ಲಿ ಅಭ್ಯಾಸ ಮಾಡುತ್ತಿದ್ದಾರೆ. ಮತ್ತೊಂದು ಇಂಟ್ರೆಸ್ಟಿಂಗ್ ವಿಷಯ ಅಂದ್ರೆ, ಅಪ್ಪನಂತೆ ರಾಜೇಶ್ ಪುತ್ರಿ ಧ್ವನಿ ಕೂಡ ಒಬ್ಬಳು ನಟಿಯಾಗಿದ್ದು, ಈಗಾಗಲೇ ಎರಡು ಸಿನಿಮಾಗಳಲ್ಲಿ ನಟಿಸಿದ್ದಾರೆ.
57
ಇಂಟರ್ ನ್ಯಾಷನಲ್ ಸಿನಿಮಾ
ಧ್ವನಿ ರಾಜೇಶ್ ಅವರು ಭಾರತದ ಇಂಟರ್ ನ್ಯಾಷನಲ್ ಸಿನಿಮಾದಲ್ಲಿ ನಟಿಸಿದ್ದಾರೆ. ‘ಮಜೀದ್ ಮಜೀದ್’ ನಿರ್ದೇಶನದ ‘ಬಿಯೋಂಡ್ ದಿ ಕ್ಲೌಡ್ಸ್’ ಸಿನಿಮಾದಲ್ಲಿ ನಟಿಸಿದ್ದರು. ಈ ಸಿನಿಮಾದಲ್ಲಿ ಇಶಾನ್ ಖಟ್ಟರ್, ಮಾಳವಿಕಾ ಮೋಹನನ್ ಕೂಡ ನಟಿಸಿದ್ದರು.
67
ಪಾಚುವುಮ್ ಅಲ್ಬುತವಿಳಕುಂ
ಧ್ವನಿ ಮಲಯಾಳಂ ಸಿನಿಮಾದಲ್ಲೂ ಕೂಡ ನಟಿಸಿದ್ದರು. ಜನಪ್ರಿಯ ನಟ ಫಹಾದ್ ಫಾಜಿಲ್ ನಟಿಸಿರುವ ‘ಪಾಚುವುಮ್ ಅಲ್ಬುತವಿಳಕುಂ’ ಸಿನಿಮಾದಲ್ಲಿ ಬಾಲ ನಟಿಯಾಗಿ ನಟಿಸಿದ್ದರು. ಇವರ ಪಾತ್ರಕ್ಕೆ ಬಹಳ ಮೆಚ್ಚುಗೆ ಕೂಡ ವ್ಯಕ್ತವಾಗಿತ್ತು.
77
ಅಪ್ಪನಂತೆ ಕನ್ನಡ ಸಿನಿಮಾದಲ್ಲಿ ಮಿಂಚುತ್ತಾರೆಯೆ?
ಸದ್ಯ ಕಾಲೇಜು ಓದುತ್ತಿರುವ ಧ್ವನಿ ಮುಂದೊಂದು ದಿನ ಅಪ್ಪನಂತೆ ಕನ್ನಡ ಚಿತ್ರರಂಗದಲ್ಲಿ ಬೆಳೆಯುತ್ತಾರೆಯೇ ಅನ್ನೋದನ್ನು ಕಾದು ನೋಡಬೇಕು. ಬಂದ್ರೆ ಕನ್ನಡಕ್ಕೆ ಒಬ್ಬ ಪ್ರತಿಭಾನ್ವಿತ ನಟಿ ಸಿಗೋದಂತೂ ಖಚಿತಾ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.