ಅಮೃತಧಾರೆ ಧಾರಾವಾಹಿಯ ಇತ್ತೀಚಿನ ಸಂಚಿಕೆಯಲ್ಲಿ, ಗೌತಮ್ ತನ್ನ ಮಗ ಆಕಾಶ್‌ನನ್ನು ಅನಿರೀಕ್ಷಿತವಾಗಿ ಭೇಟಿಯಾಗುತ್ತಾನೆ. ತನ್ನೊಂದಿಗಿದ್ದ ಹುಡುಗನೇ ತನ್ನ ಮಗ ಎಂದು ತಿಳಿದು ಗೌತಮ್ ಭಾವುಕನಾಗಿದ್ದು, ತಂದೆ-ಮಗನ ಈ ಭಾವುಕ ಮಿಲನದ ದೃಶ್ಯ ವೀಕ್ಷಕರ ಮನಗೆದ್ದಿದೆ.
ಅಮೃತಧಾರೆ ಧಾರಾವಾಹಿಯ ಇಂದಿನ ಸಂಚಿಕೆ ನೋಡಿ ವೀಕ್ಷಕರು ಭಾವುಕರಾಗಿದ್ದಾರೆ. ಕಳೆದ ಎರಡ್ಮೂರು ದಿನಗಳಿಂದ ತನ್ನೊಂದಿಗೆ ತಮಾಷೆ ಮಾಡಿಕೊಂಡಿದ್ದ ಹುಡುಗನೇ ತನ್ನ ಮಗ ಎಂಬ ವಿಷಯ ತಿಳಿದು ಗೌತಮ್ ಭಾವುಕನಾಗಿದ್ದಾನೆ. ರಾಜೇಶ್ ನಟರಂಗ ತಂದೆಯಾಗಿ ಮಗನನ್ನು ಅಪ್ಪಿಕೊಳ್ಳುವ ದೃಶ್ಯ ನೋಡುಗರ ಕಣ್ಣಾಲಿಗಳನ್ನು ತೇವಗೊಳಿಸಿವೆ.
25
ಗೌತಮ್ ಮತ್ತು ಆನಂದ್
ಮಗನನ್ನು ಹುಡುಕಿಕೊಂಡು ಗೌತಮ್ ಮತ್ತು ಆನಂದ್ ಶಾಲೆಯೊಳಗೆ ಬಂದಿದ್ದಾರೆ. ಮಗನನ್ನು ಹುಡುಕಲು ಅಪ್ಪು ಬಳಿಯೇ ಗೌತಮ್ ಮತ್ತು ಆನಂದ್ ಸಹಾಯ ಕೇಳಿದ್ದಾರೆ. ಆದ್ರೆ ಅಪ್ಪು ಭಲೇ ಕಿಲಾಡಿ. ಸಹಾಯಕ್ಕೆ ಪ್ರತಿಯಾಗಿ ಸಹಾಯ ಕೇಳಿದ್ದಾನೆ. ಗೌತಮ್ ದಿವಾನ್ ತನ್ನ ನಿಜವಾದ ತಂದೆ ಎಂದು ತಿಳಿಯದೇ ಬಾಡಿಗೆ ಅಪ್ಪನನ್ನಾಗಿ ಮಾಡಿಕೊಂಡಿದ್ದಾನೆ.
ಇಷ್ಟು ಮಾತ್ರವಲ್ಲ ಹೆಸರಿಗೆ ತಕ್ಕಂತೆ ಅಪ್ಪು ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ಫ್ಯಾನ್. ಅವರಂತಯೇ ಡ್ರೆಸ್ ಮಾಡ್ಕೊಂಡು ಬಂದು ಪ್ರಿನ್ಸಿಪಾಲ್ ಅವರನ್ನು ಮೀಟ್ ಮಾಡುವಂತೆ ಹೇಳಿದ್ದಾನೆ. ಗೌತಮ್ ಸಹ ರಾಯಲ್ ಲುಕ್‌ನಲ್ಲಿ ಶಾಲೆಗೆ ಬಂದಿದ್ದಾನೆ. ಈ ವಿಡಿಯೋಗೆ ಬಲ್ ನನ್ ಮಗ ಕಣೋ ನೀನು ಆಕಾಶ್ ದಿವಾನ್ ಎಂದು ವೀಕ್ಷಕರು ತಮಾಷೆ ಮಾಡಿದ್ದಾರೆ.
ಗೌತಮ್ ಜೊತೆಗಿರುವಾಗಲೇ ಶಾಲೆಯಲ್ಲಿ ತಾಯಿ ಭೂಮಿಕಾಳನ್ನು ನೋಡುತ್ತಲೇ ಅಪ್ಪು ಅಡಗಿಕೊಂಡಿದ್ದಾಳೆ. ಈ ವೇಳೆ ಅಲ್ಲಿ ಬರುತ್ತಿರೋದು ನನ್ನ ತಾಯಿ ಮತ್ತು ನಿಜವಾದ ಹೆಸರು ಆಕಾಶ್ ಎಂಬ ವಿಷಯ ಹೇಳಿದ್ದಾನೆ. ಇದನ್ನು ಕೇಳುತ್ತಿದ್ದಂತೆ ಭಾವುಕನಾದ ಗೌತಮ್, ಮಗನನ್ನು ತಬ್ಬಿಕೊಂಡು ಭಾವುಕನಾಗಿ ಕಣ್ಣೀರು ಹಾಕಿದ್ದಾನೆ.
ಈ ದೃಶ್ಯದ ತುಣಕನ್ನು ಝೀ ಕನ್ನಡದ ವಾಹಿನಿ ಫೇಸ್‌ಬುಕ್ ಪೇಜ್‌ನಲ್ಲಿ ಪೋಸ್ಟ್ ಮಾಡಿಕೊಳ್ಳಲಾಗಿದೆ. ಈ ವಿಡಿಯೋಗೆ ಲಲಿತಾ ಎಂಬವರು, ಇವತ್ತಿನ ಸಂಚಿಕೆ ತುಂಬಾ ಚೆನ್ನಾಗಿದೆ. ಪಾದರಸದಂತಹ ಅಭಿನಯ ಈ ಅಪ್ಪು ಮತ್ತು ಗೌತಮನದು. ಅಪ್ಪ ಮತ್ತು ಮಗನ ಜೋಡಿಯನ್ನು ನೋಡುವುದೇ ಒಂದು ಸಂತೋಷ. ಈ ಚಿಕ್ಕ ಹುಡುಗ ವಿಪರೀತ ಅಧಿಕ ಪ್ರಸಂಗ ಮಾತನಾಡುತ್ತಾನೆ. ಅವನ ತಪ್ಪುಗಳನ್ನು ತಿದ್ದಿ ತೀಡುವ ಜವಾಬ್ದಾರಿ ಗೌತಮನ ಹೆಗಲ ಮೇಲಿದೆ ಎಂದು ಕಮೆಂಟ್ ಮಾಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.