
ಸರಿಗಮಪ ರಿಯಾಲಿಟಿ ಶೋ ಸೀಸನ್ 13ರ ಮೂಲಕ ಮುನ್ನಲೆಗೆ ಬಂದ ಗಾಯಕಿ ಶಿವಮೊಗ್ಗ ಮೂಲದ ಸುಹಾನಾ ಸೈಯದ್. ಸಿನಿಮಾಗಳಿಗೆ ಹಿನ್ನೆಲೆ ಗಾಯನದ ಜೊತೆ ರಾಜ್ಯದ ಮೂಲೆ ಮೂಲೆಯಲ್ಲಿಯೂ ಸುಹಾನಾ ಸೈಯದ್ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಿದ್ದಾರೆ.
ಬಹುಮುಖ ಪ್ರತಿಭೆಯಾಗಿರುವ ಸುಹಾನಾ ಸೈಯದ್, ಸರಿಗಮಪ ಸೀಸನ್ 13ರ ಮೆಗಾ ಆಡಿಷನ್‌ನಲ್ಲಿ ಆಯ್ಕೆ ಮಾಡಿಕೊಂಡಿದ್ದ ಹಾಡು ತೀವ್ರ ಚರ್ಚೆಗೆ ಗ್ರಾಸವಾಗಿತ್ತು. ಬುರ್ಕಾ ಧರಿಸಿದ ಮುಸ್ಲಿಂ ಯುವತಿಯೊಬ್ಬಳು "ಶ್ರೀಕಾರ" ಹಾಡು ಕೇಳಿ ತೀರ್ಪುಗಾರರು ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆ ಸಂಚಿಕೆಯಲ್ಲಿ ಸುಹಾನಾ ಆಕರ್ಷಣೆಯ ಕೇಂದ್ರ ಬಿಂದು ಆಗಿದ್ದರು.
ಸಂಚಿಕೆ ಪ್ರಸಾರವಾಗುತ್ತಿದ್ದಂತೆ ಸುಹಾನಾ ಸೈಯದ್ ಕುರಿತು ಸಾಮಾಜಿಕ ಜಾಲತಾಣದಲ್ಲಿ ನೆಗೆಟಿವ್ ಕಮೆಂಟ್‌ಗಳು ಬರಲಾರಂಭಿಸಿದವು. ಮಾಧ್ಯಮಗಳಲ್ಲಿಯೂ ಸುಹಾನಾ ಸೈಯದ್ ಹಾಡಿನ ಬಗ್ಗೆ ತೀವ್ರ ಚರ್ಚೆಗಳು ನಡೆದವು. ತಮ್ಮ ವಿರುದ್ಧ ಕೇಳಿಬಂದ ಎಲ್ಲಾ ನಕಾರಾತ್ಮಕ ಟೀಕೆಗಳಿಗೆ ಸುಹಾನಾ ಸೈಯದ್, ಮುಕುಂದ ಮುರಾರಿ ಹಾಡಿನ ಮೂಲಕ ಉತ್ತರ ನೀಡಿದ್ದರು.
ಇದೀಗ ಸುಹಾನಾ ಸೈಯದ್ ಸಂಗಾತಿಯನ್ನು ಆಯ್ಕೆ ಮಾಡಿಕೊಂಡಿದ್ದರು. ಇಬ್ಬರು ಜೊತೆಯಾಗಿ ಜೀವನ ನಡೆಸುವ ನಿರ್ಧಾರಕ್ಕೆ ಬಂದಿದ್ದಾರೆ. ನಿತಿನ್ ಶಿವಾಂಶ್ ಜೊತೆಗಿನ ಮುದ್ದಾದ ಫೋಟೋ ಹಂಚಿಕೊಂಡಿರುವ ಸುಹಾನಾ, ನಮ್ಮ ಪ್ರೀತಿಗೆ ಯಾವುದೇ ಮಿತಿ ಇಲ್ಲ ಎಂದು ಬರೆದುಕೊಂಡು ನಿಮ್ಮೆಲ್ಲರ ಆಶೀರ್ವಾದ ನಮ್ಮ ಮೇಲಿರಲಿ ಎಂದು ಬರೆದುಕೊಂಡಿದ್ದಾರೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ಸುಹಾನಾ ಸೈಯದ್ ಮತ್ತು ನಿತಿನ್ ಶಿವಾಂಶ್ ಜೋಡಿಗೆ ಶುಭಾಶಯಗಳನ್ನು ತಿಳಿಸುತ್ತಿದ್ದಾರೆ. ಅಭಿಮಾನಿಗಳು ಸುಹಾನಾ ಹೃದಯ ಕದ್ದ ಚೆಲುವ ಯಾರು ಎಂದು ಗೂಗಲ್ ಸರ್ಚ್ ಮಾಡುತ್ತಿದ್ದಾರೆ. ನಿತಿನ್ ಜೊತೆಗಿನ ಸುಹಾನಾ ಫೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಕ್ಯೂಟ್ ಜೋಡಿಗೆ ಮುದ್ದಾದ ಪ್ರೀತಿಗೆ ನೆಟ್ಟಿಗರು ಏನು ಹೇಳಿದರು ಎಂದು ನೋಡೋಣ ಬನ್ನಿ.
ಸುಹಾನಾ ಸೈಯದ್ ಸಂಗಾತಿಯ ಹೆಸರು ನಿತಿನ್ ಶಿವಾಂಶ್. ರಂಗಭೂಮಿ ಕಲಾವಿದರಾಗಿರುವ ನಿತಿನ್ ಶಿವಾಂಶ್, ನೀನಾಸಂನಲ್ಲಿ ತರಬೇತಿಯನ್ನು ಪಡೆದುಕೊಂಡಿದ್ದಾರೆ. ಸುಹಾನಾ ಸಹ ಗಾಯನದ ಜೊತೆ ಯಕ್ಷಗಾನ ಕಲಾವಿದೆಯಾಗಿಯೂ ಗುರುತಿಸಿಕೊಂಡಿದ್ದಾರೆ.
ಪ್ರತಿ ಜೀವಿಯ ನಿರೀಕ್ಷೆ ಪ್ರೇಮಕ್ಕಾಗಿಯೇ, ಪ್ರೇಮಕ್ಕೆ ಕಾರಣ ಇಲ್ಲ. ಈ ಪ್ರೇಮ ಅನಂತ ದೂರದ ಸುಧೀರ್ಘ ಪ್ರಯಾಣ. ಪ್ರೇಮಕ್ಕೆ ಯಾವ ಮಿತಿ ಇಲ್ಲ, ಎಂಬುದಕ್ಕೆ ನಾವೇ ಸಾಕ್ಷಿ. ಹೃದಯಗಳ ಭಾಷೆ ಎಲ್ಲವನ್ನೂ ಮೀರಿದ್ದು. ಪ್ರತಿ ಸವಾಲು, ಪ್ರತಿ ಸಂಶಯ ಮತ್ತು ಪ್ರತಿ ಭಯದ ಮೌನದಲ್ಲಿಯೂ ನಮ್ಮನ್ನು ಹಿಡಿದಿಟ್ಟಿದ್ದು ಪ್ರೀತಿ. ಇಂದು, ನಮ್ಮ ಗುಟ್ಟನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. ನಿಮ್ಮ ಆಶೀರ್ವಾದವಿರಲಿ ಎಂದು ಸುಹಾನಾ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಟ್ವಿಸ್ಟ್ ಅಂದ್ರೆ ಇದು ನೋಡಿ: ವೀರಭದ್ರನ ಕುತಂತ್ರದ ಕತ್ತಲಲ್ಲಿ ಮುಳುಗಿದ ಮಾರಿಗುಡಿಗೆ ಸಾಕ್ಷಾತ್ಕಾರ
ಸರಿಗಮಪ ಸೀಸನ್ 13ರ ಮೆಗಾ ಆಡಿಷನ್‌ನಲ್ಲಿ ಸುಹಾನಾ ಸೈಯ್ಯದ್ "ಶ್ರೀಕಾರನೇ" ಎಂಬ ಹಾಡು ಹೇಳಿದ್ದರು. ಬುರ್ಖಾ ಧರಿಸಿದ್ದ ಮುಸ್ಲಿಂ ಮಹಿಳೆ ಹಿಂದೂ ಅಥವಾ ಧಾರ್ಮಿಕ ಗೀತೆಗಳನ್ನು ಹಾಡಬಹುದಾದ ಎಂಬ ಚರ್ಚೆಗಳು ನಡೆದಿದ್ದವು. ನಂತರ "ನೀನೇ ರಾಮ, ಅಲ್ಲಾ, ಯೇಸು" ಎಂಬ ಹಾಡು ಹೇಳಿ ಸುಹಾನಾ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡಿದ್ದರು.
ಇದನ್ನೂ ಓದಿ: ಇದಪ್ಪಾ ಸಾಧನೆ ಅಂದ್ರೆ.. ಹಿಂದಿ ಸೀರಿಯಲ್ ಹೀರೋಯಿನ್ ಆದ ಉಡುಪಿ ಮೂಲದ ನಟಿ! ಯಾರದು?
ತಮ್ಮ ಕುರಿತ ನಡೆಯುತ್ತಿರುವ ಚರ್ಚೆಗಳ ಬಗ್ಗೆ ಪ್ರತಿಕ್ರಿಯಿಸಿದ್ದ ಸುಹಾನಾ, ನಾನು ಇಲ್ಲಿ ಹಾಡಲು ಬಂದಿದ್ದೇನೆ. ನನಗೆ ಪ್ರತಿಭೆ ಇರೋದರಿಂದ ನನ್ನನ್ನು ಆಯ್ಕೆ ಮಾಡಲಾಗಿದೆ. ಹಾಡು ಹಾಡುತ್ತಾ ಸಂಗೀತ ಕಲಿಯಲು ಈ ವೇದಿಕೆ ಬಂದಿದ್ದೇನೆ ಎಂದು ಹೇಳಿದ್ದರು. ಸುಹಾನಾ ಮೂಲತಃ ಶಿವಮೊಗ್ಗ ಜಿಲ್ಲೆಯವರಾಗಿದ್ದಾರೆ. ಸುಹಾನಾ ಯಕ್ಷಗಾನ ಕಲಾವಿದೆಯೂ ಆಗಿದ್ದಾರೆ.