ಜೀ ಕನ್ನಡದ ಅಮೃತಧಾರೆ ಧಾರಾವಾಹಿಯಲ್ಲಿ ಐದು ವರ್ಷಗಳ ನಂತರ ಗೌತಮ್ ಮತ್ತು ಭೂಮಿಕಾ ಒಂದಾಗಿದ್ದಾರೆ. ಗೌತಮ್‌ಗೆ ತನ್ನ ಮಗ ಅಪ್ಪು ಎಂಬ ಸತ್ಯ ತಿಳಿದಿದ್ದು, ಶಕುಂತಲಾಳ ಕುತಂತ್ರಗಳು ಬಯಲಾಗಿದೆ.
ಜೀ ಕನ್ನಡದ ಅಮೃತಧಾರೆ ಸೀರಿಯಲ್‌ನಲ್ಲಿ ಐದು ವರ್ಷಗಳ ನಂತರ ಗೌತಮ್ ಮತ್ತು ಭೂಮಿಕಾ ಒಂದಾಗುತ್ತಿದ್ದಾರೆ. ತಿಂಡಿಪೋತ, ಮಾತಿನ ಮಲ್ಲ, ಕಿಲಾಡಿ ಅಪ್ಪು ತನ್ನ ಮಗ ಎಂಬ ವಿಷಯ ಗೌತಮ್‌ಗೆ ಗೊತ್ತಾಗಿದೆ. ಶಕುಂತಲಾಳ ಅಸಲಿ ವಿಷಯ ಗೌತಮ್‌ಗೆ ಗೊತ್ತಾಗಿರೋ ವಿಷಯ ಮಲ್ಲಿ ಮತ್ತು ಭೂಮಿಕಾಗೆ ಗೊತ್ತಾಗಿಲ್ಲ.
26
ಹಿಂದಿನ ಸತ್ಯ
ಭೂಮಿಕಾಗೆ ತನಗೆ ಅವಳಿ ಮಕ್ಕಳಾಗಿದ್ದು ಎಂಬ ನಿಜ ಗೊತ್ತಾಗಿದೆ. ಮಗಳನ್ನು ಶಕುಂತಲಾಳನ್ನು ಕೊಂದಿದ್ದಾಳೆ ಎಂದು ಭೂಮಿಕಾ ತಿಳಿದುಕೊಂಡಿದ್ದಾಳೆ. ಆದ್ರೆ ಇದರ ಹಿಂದಿನ ಸತ್ಯ ಬೇರೆಯಾಗಿದೆ. ಅಂದು ಜೈದೇವ್ ಮಗುವನ್ನು ಕಾಡಿನಲ್ಲಿ ಎಸೆದು ಹೋಗಿದ್ದನು. ಮರುದಿನ ಹುಡುಕಾಡಿದಾಗ ಮಗು ಸಿಕ್ಕಿರಲಿಲ್ಲ. ಮಗು ಸತ್ತಿದೆ ಎಂದು ಶಕುಂತಲಾ ಮತ್ತು ಜೈದೇವ್ ತಿಳಿದುಕೊಂಡಿದ್ದಾರೆ.
36
ಐದು ವರ್ಷದ ನಂತರದ ಕಥೆ
ಮಗನ ಮತ್ತು ಗೌತಮ್ ಜೀವ ಕಾಪಾಡಲು ಭೂಮಿಕಾ ದಿವಾನ್ ಮನೆಯಿಂದ ಹೊರಬಂದಿರುತ್ತಾಳೆ. ಇದಾದ ಬಳಿಕ ಐದು ವರ್ಷದ ನಂತರದ ಕಥೆಯನ್ನು ತೋರಿಸಲಾಗುತ್ತಿದೆ. ಗೌತಮ್ ಮತ್ತು ಭೂಮಿಕಾ ಮಗನ ಪಾತ್ರದಲ್ಲಿ ನಟಿಸುತ್ತಿರೊ ಬಾಲ ನಟ ಎಲ್ಲರಿಗೂ ಇಷ್ಟವಾಗುತ್ತಿದ್ದಾನೆ.
ಸೀರಿಯಲ್‌ನಲ್ಲಿ ಗೌತಮ್ ಮತ್ತು ಭೂಮಿಕಾ ಪಾತ್ರಕ್ಕೆ ರಾಜೇಶ್ ನಟರಂಗ ಮತ್ತು ಛಾಯಾ ಸಿಂಗ್ ಜೀವ ತುಂಬಿ ನಟಿಸುತ್ತಿರೋ ಕಾರಣ ವೀಕ್ಷಕರಿಗೆ ಧಾರಾವಾಹಿ ಹೆಚ್ಚಚ್ಚು ಇಷ್ಟವಾಗುತ್ತಿದೆ. ಹಾಗಾಗಿ ಈ ಬಾರಿಯ ಝೀ ಕುಟುಂಬ ಅವಾರ್ಡ್ ಹೆಚ್ಚಿನ ಪ್ರಶಸ್ತಿಗಳು ಅಮೃತಧಾರೆ ಸೀರಿಯಲ್‌ಗೆ ಹೋಗಬೇಕೆಂದು ವೀಕ್ಷಕರು ಬಯಸುತ್ತಿದ್ದಾರೆ.
56
ಗೌತಮ್ ದಿವಾನ್ ಮಗಳು
5 ವರ್ಷ ಕಳೆದರು ಗೌತಮ್ ದಿವಾನ್ ಅವ್ರ ಮಗಳು ಪತ್ತೆ ಇಲ್ಲ. ದಯವಿಟ್ಟು ಕಥೆಯನ್ನ ತುಂಬಾ ಎಳೆಯದೇ ಆ ಮಗಳ ಕಥೆ ಏನಾಗಿದೆ ಅಂತ ತೋರಿಸಿ ಎಂದು ವೀಕ್ಷಕರು ಮನವಿ ಮಾಡಿಕೊಂಡಿದ್ದಾರೆ. ಭೂಮಿಕಾ ಮತ್ತು ಮಗ ಸಿಕ್ಕ ನಂತರ ಧಾರಾವಾಹಿ ಮಗಳ ಹುಡುಕಾಟದ ಆಯಾಮಕ್ಕೆ ತೆರೆದುಕೊಳ್ಳುವ ಸಾಧ್ಯತೆಗಳಿರುತ್ತವೆ. ಸೂಪರ್ ಇದೇ ನಾವು ಇಷ್ಟ ಪಡೋದು. ಇಬ್ಬರೂ ಒಂದಾಗಿ ತಪ್ಪು ಮಾಡುವವರಿಗೆ ಬುದ್ಧಿ ಕಳಿಸಿ ತನ್ನ ಸಾಮ್ರಾಜವನ್ನು ತನಗೆ ದಕ್ಕಿಸಿ ಕೊಂಡು ಅಧಿಪತಿ ಆಗಬೇಕು ಎಂದು ಸೀರಿಯಲ್ ಅಭಿಮಾನಿಗಳು ಬಯಸಿದ್ದಾರೆ.
ಶಕುಂತಲಾ ಮತ್ತು ಜೈದೇವ್ ಮೋಸದಾಟ ನಿಲ್ಲಬೇಕು, ಕಾಣೆಯಾಗಿರುವ ಗೌತಮ್-ಭೂಮಿಕಾ ಮಗಳು ಸಿಗಬೇಕು ಮತ್ತು ಮಲ್ಲಿ ಜೀವನಕ್ಕೆ ನ್ಯಾಯ ಸಿಕ್ಕರೆ ಅಮೃತಧಾರೆ ಸೀರಿಯಲ್ ಬಹುತೇಕ ಅಂತ್ಯವಾಗಲಿದೆ. ಮುಂದೆ ಸೀರಿಯಲ್ ಯಾವ ಆಯಾಮ ಪಡೆದುಕೊಳ್ಳಲಿದೆ ಎಂಬುದನ್ನು ನೋಡಬೇಕಿದೆ.