Anushree in Mangalya: ಸೆಲೆಬ್ರಿಟಿಗಳು ಮದುವೆಯಾದ ನಂತರ ತಾಳಿ ತೆಗೆದು ಶೋಗಳಲ್ಲಿ, ಕಾರ್ಯಕ್ರಮಗಳಲ್ಲಿ, ಸಿನಿಮಾಗಳಲ್ಲಿ ಭಾಗವಹಿಸುತ್ತಾರೆ. ಕೆಲವರು ಶೋ ಮುಗಿದ ಮೇಲೆ ಮತ್ತೆ ತಾಳಿ ಹಾಕಿಕೊಳ್ಳುತ್ತಾರೆ. ಆದರೆ ಈ ವಿಚಾರದಲ್ಲಿ ಕೆಲವು ನಟಿಯರು ಡಿಫರೆಂಟ್. ಅದರಲ್ಲಿ ನಮ್ಮ ಅನುಶ್ರೀ ಕೂಡ ಒಬ್ಬರು.
ಖ್ಯಾತ ಕನ್ನಡ ನಿರೂಪಕಿ ಅನುಶ್ರೀ ಆಗಸ್ಟ್ 28, 2025 ರಂದು ತಮ್ಮ ಬಹುಕಾಲದ ಗೆಳೆಯ, ಉದ್ಯಮಿ ರೋಷನ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಅನುಶ್ರೀ ಮದುವೆಯಾಗಿದ್ದಕ್ಕೆ ಅವರ ಕುಟುಂಬದವರಷ್ಟೇ ಖುಷಿಪಟ್ಟಿದ್ದು ಅಭಿಮಾನಿಗಳು. ಇದೇ ಅಭಿಮಾನಿಗಳು ಈಗ ಮದುವೆಯಾದ ನಂತರ ಅನುಶ್ರೀ ಲುಕ್ ನೋಡಿಯೂ ಖುಷಿಪಡುತ್ತಿದ್ದಾರೆ.
25
ಮಹಾನಟಿ ಶೋ
ಹೌದು. ಅನುಶ್ರೀ ಮದುವೆಯಾದ ನಂತರ ರಿಯಾಲಿಟಿ ಶೋಗಳಲ್ಲಿ ನಿರೂಪಣೆ ಮಾಡುತ್ತಾರೋ ಇಲ್ಲವೋ ಎಂಬ ಕುತೂಹಲವಿತ್ತು. ಆದರೆ ಅನು ಮದುವೆಯಾದ ನಂತರ ಮತ್ತೆ ಮಹಾನಟಿ ಶೋನಲ್ಲಿ ಕಾಣಿಸಿಕೊಂಡರು. ಜೀ ವಾಹಿನಿಯೂ ಕೂಡ ಅವರನ್ನು ಅದ್ದೂರಿಯಾಗೇ ಮತ್ತೆ ಬರಮಾಡಿಕೊಂಡಿತು.
35
ಕೆಲವು ನಟಿಯರು ಡಿಫರೆಂಟ್
ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಸೆಲೆಬ್ರಿಟಿಗಳು, ನಟಿಯರು, ನಿರೂಪಕಿಯರು ಮದುವೆಯಾದ ನಂತರ ತಾಳಿ ತೆಗೆದು ಶೋಗಳಲ್ಲಿ, ಕಾರ್ಯಕ್ರಮಗಳಲ್ಲಿ, ಸಿನಿಮಾಗಳಲ್ಲಿ ಭಾಗವಹಿಸುತ್ತಾರೆ. ಕೆಲವರು ಶೋ ಮುಗಿದ ಮೇಲೆ ಮತ್ತೆ ತಾಳಿ ಹಾಕಿಕೊಳ್ಳುತ್ತಾರೆ. ಆದರೆ ಈ ವಿಚಾರದಲ್ಲಿ ಕೆಲವು ನಟಿಯರು ಡಿಫರೆಂಟ್. ಅದರಲ್ಲಿ ನಮ್ಮ ಅನುಶ್ರೀ ಕೂಡ ಒಬ್ಬರು.
ಸದ್ಯ ಅನುಶ್ರೀ ತಾಳಿ ಬಿಚ್ಚಿಡದೆ ಶೋ ನಡೆಸಿಕೊಡುತ್ತಿರುವುದು ವೀಕ್ಷಕರರ ಮೆಚ್ಚುಗೆಗೆ ಪಾತ್ರವಾಗಿದೆ. ಹೌದು, ಅನುಶ್ರೀ ಕಳೆದ ವಾರ ಸಿಲ್ಕ್ ಸೀರೆ ಧರಿಸಿ ಬಂದಿದ್ದರು. ಆಗಲೂ ನೆಕ್ಲೇಸ್ ಜೊತೆ ಕರಿಮಣಿ ಧರಿಸಿದ್ದರು. ಈ ಬಾರಿ ಸೂಪರ್ ಆಗಿರೋ ಸಲ್ವಾರ್ ಜೊತೆ ತಾಳಿ ತೆಗೆಯದೆ ಲಕ್ಷಣವಾಗಿ ಕಾಣಿಸಿಕೊಂಡಿದ್ದಾರೆ. ಸದ್ಯ ಅನುಶ್ರೀ ಅವರ ಈ ಲುಕ್ ಅಭಿಮಾನಿಗಳ ಮನಗೆದ್ದಿದೆ.
55
ವೀಕ್ಷಕರ ಕಾಮೆಂಟ್ಸ್
ಕೆಲವರು ಅನುಶ್ರೀ ಮದುವೆಯಾದ ನಂತರ ತುಂಬಾ ಚೆನ್ನಾಗಿ ಕಾಣಿಸುತ್ತಿದ್ದಾರೆ ಅಂದರೆ ಮತ್ತೆ ಕೆಲವರು "ಅನುಶ್ರೀ ಮದುವೆಯಾದ ಮೇಲೆ ತಾಳಿ ಸಮೇತ ಕಾಣಿಸುತ್ತಿರುವುದು ತುಂಬಾ ಖುಷಿ ವಿಷಯ. ಈ ಕಾಲದಲ್ಲಿ ತಾಳಿ ತೆಗೆದಿಟ್ಟು ಬರುವವರೇ ಜಾಸ್ತಿ. ಆದ್ರೆ ನಮ್ಮ ಸಂಸ್ಕೃತಿ ಪರಂಪರೆ ಉಳಿಸೋದು ನಮ್ಮ ಕರ್ತವ್ಯ. superb keep it up" ಎಂದರೆ, ಮತ್ತೆ ಕೆಲವರು "ದಯವಿಟ್ಟು ತಾಳಿ ತೆಗೆಯಬೇಡಿ, ತುಂಬಾ ಲಕ್ಷಣವಾಗಿ ಕಾಣಿಸುತ್ತಿದ್ದೀರಿ" "ಮಾಂಗಲ್ಯ ಸರ ತುಂಬಾ ಚೆನ್ನಾಗಿ ಕಾಣ್ತಾ ಇದೆ ಅನು ಅಕ್ಕ" ಎಂದೆಲ್ಲಾ ಕಾಮೆಂಟ್ ಮಾಡಿರುವುದನ್ನು ಜೀ ಕನ್ನಡ ಫೇಸ್‌ಬುಕ್ ಪೇಜ್‌ನಲ್ಲಿ ನೋಡಬಹುದು.