Amruthadhaare ಶೂಟಿಂಗ್​ ವೇಳೆ ನಡೆಯಬಾರದ್ದೆಲ್ಲಾ ನಡೆದೋಯ್ತು! ವಿಡಿಯೋ ನೋಡಿದ್ರೆ ಬಿದ್ದೂ ಬಿದ್ದೂ ನಗ್ತೀರಾ

Published : Nov 22, 2025, 02:21 PM IST

ಅಮೃತಧಾರೆ ಧಾರಾವಾಹಿಯ ಶೂಟಿಂಗ್ ಸೆಟ್‌ನಲ್ಲಿ ನಡೆದ ತಮಾಷೆಯ ಕ್ಷಣಗಳ ಬಗ್ಗೆ ಈ ಲೇಖನ ವಿವರಿಸುತ್ತದೆ. ಭೂಮಿಕಾ, ಗೌತಮ್ ಮತ್ತು ಜೈದೇವ್ ಅವರಂತಹ ಪಾತ್ರಗಳು ಡೈಲಾಗ್‌ಗಳನ್ನು ಮರೆತು ಮಾಡಿದ ಎಡವಟ್ಟುಗಳು ಮತ್ತು ನಗುವಿನ ಸನ್ನಿವೇಶಗಳನ್ನು ಇದರಲ್ಲಿ ಸೆರೆಹಿಡಿಯಲಾಗಿದೆ.

PREV
19
ಕುತೂಹಲದತ್ತ ಅಮೃತಧಾರೆ

ಅಮೃತಧಾರೆ (Amruthadhaare Serial) ಸದ್ಯ ಬಹು ಕುತೂಹಲದ ತಿರುವು ಪಡೆದುಕೊಂಡು ಸಾಗುತ್ತಿದೆ. ಭೂಮಿಕಾ ಮತ್ತು ಗೌತಮ್​ ಒಂದಾಗುವ ಎಲ್ಲಾ ಲಕ್ಷಣಗಳೂ ಸ್ಪಷ್ಟವಾಗಿದೆ. ಭೂಮಿಕಾ ಗೌತಮ್​ ಪರಸ್ಪರ ದೂರ ಆಗಿದ್ದು ಏಕೆ ಎನ್ನುವುದು ಅವರಿಬ್ಬರಿಗೂ ಅರ್ಥವಾಗಬೇಕಿದೆಯಷ್ಟೇ.

29
ಶೂಟಿಂಗ್ ತಮಾಷೆ

ಇದರ ನಡುವೆಯೇ, ಶೂಟಿಂಗ್​ ಸೆಟ್​​ನಲ್ಲಿ ಡೈಲಾಗ್​ ಹೇಳುವ ವೇಳೆ ಏನೆಲ್ಲಾ ತಮಾಷೆಗಳು ನಡೆದಿವೆ ಎನ್ನುವುದನ್ನು ಡಿವಿಡ್ರೀಮ್ಸ್​ ಯುಟ್ಯೂಬ್​ ಚಾನೆಲ್​ ಶೇರ್​ ಮಾಡಿಕೊಂಡಿದೆ. ಇದನ್ನು ನೋಡಿದ್ರೆ ಬಿದ್ದೂ ಬಿದ್ದೂ ನಗಬೇಕು, ಆ ರೀತಿಯ ಸನ್ನಿವೇಶಗಳು ಇವೆ.

39
ಡೈಲಾಗ್​ಗಳು ಮರೆತಾಗ

ಸಹಜವಾಗಿ ಶೂಟಿಂಗ್​ ಮಾಡುವ ಸಮಯದಲ್ಲಿ ಡೈಲಾಗ್​ಗಳು ಮರೆತು ಹೋಗುತ್ತವೆ. ಯಾವುದೋ ಸೀರಿಯಸ್​ ಸನ್ನಿವೇಶ ಇರಲಿ, ಜೋಕ್​ ಇರಲಿ ಒಂದು ಶಬ್ದ ಅತ್ತ ಇತ್ತ ಆದರೂ ಗಲಿಬಿಲಿ ಆಗುವುದು ಸಹಜ. ಅಂಥವುಗಳನ್ನು ಈ ಯುಟ್ಯೂಬ್​ನಲ್ಲಿ ತೋರಿಸಲಾಗಿದೆ.

49
ಸಿಟ್ಟು ಮಾಡಿಕೊಳ್ಳುವಾಗ್ಲೇ ಮರೆತು ಹೋಯ್ತು!

ಭೂಮಿಕಾ ಮತ್ತು ಶಕುಂತಲಾ ನಡುವೆ ಫೈಟಿಂಗ್​ ನಡೆಯುವ ವೇಳೆ, ಭೂಮಿಕಾ ಶಕುಂತಲಾಗೆ ಚಾಲೆಂಜ್​ ಮಾಡುವಾಗ ವಿಪರೀತ ಕೋಪದಿಂದ ಇರುತ್ತಾಳೆ. ಆ ಸಮಯದಲ್ಲಿ ಡೈಲಾಗೇ ಮರೆತು ಹೋದ್ರೆ ಹೇಗಿರುತ್ತೆ ಎನ್ನುವುದನ್ನೂ ಇದರಲ್ಲಿ ನೋಡಬಹುದು.

59
ಕುತಂತ್ರಿ ಜೈದೇವ್​ಗೂ ಫಜೀತಿ!

ಜೈದೇವ್​ ಸ್ಥಿತಿಯೂ ಅದೇ ರೀತಿ ಆಗಿದೆ. ಏನೋ ಕುತಂತ್ರ ಮಾಡುವ ಪ್ಲ್ಯಾನ್​ ಮಾಡ್ತಿರುವಾಗಲೇ ಡೈಲಾಗ್​ ಮರೆತು ಹೋಗಿ ಪೇಚಿಗೆ ಸಿಲುಕಿರುವುದೆಲ್ಲಾ ಕ್ಯಾಮೆರಾದಲ್ಲಿ ಸೆರೆಯಾಗಿದೆ.

69
ಹಾಸ್ಯದಲ್ಲಿಯೂ ಹಾಸ್ಯ

ಅದೇ ಇನ್ನೊಂದೆಡೆ, ಆನಂದ್​ ಫ್ಯಾಮಿಲಿಯ ಸ್ಟೋರಿ. ಹಾಸ್ಯಕ್ಕಾಗಿ ಈ ದೃಶ್ಯಗಳನ್ನು ತೆಗೆದುಕೊಂಡಿದ್ದರೂ, ಆನಂದ್​ನನ್ನು ಕಟ್ಟಿಹಾಕುವ ಸಮಯದಲ್ಲಿ ಅವನ ಸೀರಿಯಲ್​ ಪುತ್ರ ಮಾಡಿರೋ ಕಿತಾಪತಿಯ ದೃಶ್ಯಗಳನ್ನೂ ನೋಡಬಹುದಾಗದೆ.

79
ಭೂಮಿಕಾ ಎಡವಟ್ಟು

ಬಹಳ ವರ್ಷಗಳ ಬಳಿಕ ಭೂಮಿಕಾ ಮತ್ತು ಗೌತಮ್​ ಒಂದಾದಾಗ, ಭೂಮಿಕಾಗೆ ಗೌತಮ್​ನಿಂದ ದೂರ ಇರುವ ಅನಿವಾರ್ಯತೆ ಇರುತ್ತದೆ. ಆ ಸಮಯದಲ್ಲಿ ಏನೋ ಹೇಳಲು ಹೋದ ಭೂಮಿಕಾ ಇನ್ನೇನೋ ಹೇಳಿ ಎಡವಟ್ಟು ಆಗಿದೆ. ಅದರ ವಿಡಿಯೋ ಕೂಡ ಇಲ್ಲಿ ನೋಡಬಹುದು.

89
ಡೈಲಾಗ್​ ಏನ್ರೀ?

ಭೂಮಿಕಾಳನ್ನು ಗೌತಮ್​ ನೋಡಿದಾಗ ಖುಷಿಯಿಂದ ಮಾತನಾಡಿಸಲು ಹೋದಾಗ ಡೈಲಾಗೇ ಮರೆತು ಹೋದ್ರೆ? ಅಯ್ಯಯ್ಯೋ ಡೈಲಾಗ್​ ಏನ್ರೀ ಎಂದು ಕೇಳುವುದು ಇಲ್ಲಿ ರೆಕಾರ್ಡ್​ ಆಗಿದೆ.

99
ವಿಡಿಯೋ ಇಲ್ಲಿದೆ

ಒಟ್ಟಿನಲ್ಲಿ ಒಂದಿಷ್ಟು ತಮಾಷೆಯನ್ನು ಒಳಗೊಂಡಿರುವ Amruthadhaare Making Video ಇಲ್ಲಿ ನೋಡಬಹುದಾಗಿದೆ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories