'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ, ಮಾಳವಿಕಾ ತಾಂತ್ರಿಕನ ಸಹಾಯದಿಂದ ಹಿತಾಳ ಪ್ರಾಣ ತೆಗೆಯಲು ಮಾಯಾವಿ ಬ್ರೇಸ್ಲೈಟ್ ಬಳಸಿ ಸಂಚು ರೂಪಿಸಿದ್ದಾಳೆ. ಹಿತಾಳ ರಕ್ಷಣಾ ಸರ ಹರಿದಿರುವುದು ಅಕ್ಕ ಅಂಬಿಕಾ ಆತ್ಮಕ್ಕೆ ತಿಳಿಯದ ಕಾರಣ, ಮಗಳ ಪ್ರಾಣಕ್ಕೆ ಕುತ್ತು ಬಂದಿದೆ.
ನಾ ನಿನ್ನ ಬಿಡಲಾರೆ (Naa Ninna Bidalaare) ಸೀರಿಯಲ್ನಲ್ಲಿ ಸದ್ಯ ಅಂಬಿಕಾ ಆತ್ಮ ಮತ್ತೆ ದುರ್ಗಾಳಿಗೆ ಕಾಣಿಸಿಕೊಳ್ಳುತ್ತಿದೆ. ಶರತ್ ಮತ್ತು ದುರ್ಗಾ ಮರುಮಾಂಗಲ್ಯಧಾರಣೆ ಆಗುತ್ತಿದ್ದಂತೆಯೇ ಮತ್ತು ಅಂಬಿಕಾ ದುರ್ಗಾಗೆ ಕಾಣಿಸಿಕೊಳ್ತಿದ್ದಾಳೆ.
27
ದೆವ್ವ ಬೆಡ್ರೂಮ್ನಲ್ಲಿ
ಆದರೆ ಸದಾ ಈ ಆತ್ಮ, ದುರ್ಗಾ ಮತ್ತು ಶರತ್ ಮಧ್ಯೆಯೇ ಇರುವುದಕ್ಕೆ ನೆಟ್ಟಿಗರು ಸದಾ ತಮಾಷೆ ಮಾಡುತ್ತಲೇ ಇರುತ್ತಾರೆ. ಈ ದೆವ್ವದ ಕಾಟದಲ್ಲಿ, ಗಂಡ-ಹೆಂಡತಿ ಒಂದು ಆಗೋದೇ ಇಲ್ಲ. ಯಾವಾಗ್ಲೂ ಬೆಡ್ರೂಮ್ನಲ್ಲೇ ಬಂದು ನಿಲ್ಲುತ್ತಾಳೆ ಎಂದು.
37
ತಾಂತ್ರಿಕನ ಮೊರೆ
ಇದೀಗ ಹಿತಾಳ ಪ್ರಾಣವನ್ನು ತೆಗೆದು ಸರ್ವಶಕ್ತಿಯನ್ನು ಪಡೆಯುವ ಉದ್ದೇಶದಿಂದ ಮಾಳವಿಕಾ ಮತ್ತೆ ತಾಂತ್ರಿಕನ ಮೊರೆ ಹೋಗಿದ್ದಾಳೆ. ಈ ಹಿಂದೆ ಮಾಡಿದ್ದ ಪ್ಲ್ಯಾನ್ ಎಲ್ಲವೂ ಠುಸ್ ಆಗಿದೆ. ಆದರೆ ಈ ಬಾರಿ ಆಕೆ ಬೇರೆಯದ್ದೇ ತಂತ್ರ ಹೂಡಿದ್ದಾಳೆ.
ಹಿತಾಳ ರಕ್ಷಣೆಗೆ ಇದ್ದ ಸರ ಹರಿದು ಹೋಗಿದೆ. ಅದು ಅಮ್ಮ ಅಂಬಿಕಾಗೂ ಗೊತ್ತಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡು ಮಾಳವಿಕಾ, ಮಾಯಾ ಬ್ರೇಸ್ಲೈಟ್ ತಂದಿದ್ದಾಳೆ.
57
ಮಾಯಾವಿ ಬ್ರೇಸ್ಲೈಟ್
ಅಪ್ಪ-ಅಮ್ಮನ ಸ್ಪರ್ಧೆಯಲ್ಲಿ ಶರತ್ ಮತ್ತು ದುರ್ಗಾ ಗೆದ್ದ ಕಾರಣ, ಆಕೆ ತುಂಬಾ ಖುಷಿಯಾಗಿದ್ದಾಳೆ. ಇದೇ ಖುಷಿಯನ್ನು ಇಮ್ಮಡಿ ಮಾಡುವುದಾಗಿ ಹೇಳಿದ ಮಾಳವಿಕಾ ಅವಳಿಗೆ ಬ್ರೇಸ್ಲೈಟ್ ಹಾಕಿದ್ದಾಳೆ.
67
ಬೆಡ್ರೂಮ್ ಬಿಟ್ಟುಹೋಗು
ಇದು ಮಾಯಾವಿ ಬ್ರೇಸ್ಲೈಟ್ ಆಗಿರೋ ಕಾರಣ, ಹಿತಾಳ ಪ್ರಾಣಕ್ಕೆ ಕುತ್ತು ಬಂದಿದೆ. ಆದರೆ ಇದು ಅಂಬಿಕಾಗೆ ಗೊತ್ತಾಗೇ ಇಲ್ಲ. ಆದ್ದರಿಂದ ಗಂಡನ ಬೆಡ್ರೂಮ್ ಬಿಟ್ಟು ಮಗಳ ಕಡೆ ಸ್ವಲ್ಪ ಗಮನ ಕೊಡು ಎಂದು ನೆಟ್ಟಿಗರು ತಮಾಷೆ ಮಾಡುತ್ತಿದ್ದಾರೆ.
77
ಮುಂದೇನು?
ಸದ್ಯ ಹಿತಾಳ ಪ್ರಾಣಕ್ಕೆ ಸಂಚಕಾರ ಇದೆ. ಮುಂದೇನಾಗುತ್ತೋ ಎನ್ನುವುದು ನೋಡಬೇಕಿದೆ. ದೈವೀ ಶಕ್ತಿಯ ಮುಂದೆ ಕಾಲಾ ಜಾದೂ ಸೋಲುತ್ತಾ ಬಂದಿದೆ. ಈಗೇನಾಗುತ್ತೋ ನೋಡಬೇಕಿದೆ.