ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾಳ ಅವಳಿ ಸಹೋದರಿ ದೀಪಿಕಾ (ಬಡ್ಡಿ ಬಂಗಾರಮ್ಮ) ಎಂಟ್ರಿಯಾಗಿದೆ. ಇವಳನ್ನು ನೋಡಿದ ಜೈದೇವ ಮತ್ತು ಶಕುಂತಲಾ, ಭೂಮಿಕಾ ವಿರುದ್ಧ ಹೊಸ ಷಡ್ಯಂತ್ರ ರೂಪಿಸಲು ಮುಂದಾಗಿದ್ದಾರೆ. ಇದರಿಂದ ಧಾರಾವಾಹಿಯಲ್ಲಿ ಹೊಸ ಟ್ವಿಸ್ಟ್ ಸಿಕ್ಕಿದ್ದು, ಕಥೆ ಮತ್ತಷ್ಟು ರೋಚಕವಾಗಿದೆ.
ಅಮೃತಧಾರೆ ಸೀರಿಯಲ್ (Amruthadhaare Serial)ನಲ್ಲಿ ಭೂಮಿಕಾ ಅವಳಿ ಸಹೋದರಿ ದೀಪಿಕಾ ಎಂಟ್ರಿಯಾಗಿದೆ. ಸದ್ಯ ಈಕೆ ಬಡ್ಡಿ ನೀಡುವ ಬಡ್ಡಿ ಬಂಗಾರಮ್ಮ. ನಟಿ ಛಾಯಾ ಸಿಂಗ್ ಡಬಲ್ ರೋಲ್ನಲ್ಲಿ ಕಾಣಿಸಿಕೊಂಡಿದ್ದು, ದೀಪಿಕಾ ರೂಪದಲ್ಲಿ ಸಕತ್ ಮಿಂಚುತ್ತಿದ್ದಾರೆ.
26
ಬಡ್ಡಿ ಬಂಗಾರಮ್ಮ
ಎಲ್ಲರಿಗೂ ಹಣವನ್ನು ಬಡ್ಡಿಗೆ ನೀಡಿ, ಸರಿಯಾದ ಟೈಮ್ನಲ್ಲಿ ವಸೂಲಿ ಮಾಡುವ ಭೂಮಿಕಾ ಪ್ರತಿರೂಪ ದೀಪಿಕಾ ಎಂಟ್ರಿಯಿಂದ ಸೀರಿಯಲ್ ಮತ್ತಷ್ಟು ರಂಗೇರಿದೆ. ಇದರಿಂದ ಸೀರಿಯಲ್ ಇನ್ನಷ್ಟು ವರ್ಷ ನಡೆಯುವುದು ನಿಚ್ಚಳವಾಗಿದೆ!
36
ಜೈದೇವನ ಕಣ್ಣಿಗೆ ಬಿದ್ದಳು
ಇದೀಗ ಈ ದೀಪಿಕಾ, ಜೈದೇವನ ಕಣ್ಣಿಗೂ ಬಿದ್ದಿದ್ದಾಳೆ. ಅವಳನ್ನು ಬಳಸಿಕೊಂಡು ಭೂಮಿಕಾ ವಿರುದ್ಧ ಷಡ್ಯಂತ್ರ ರಚಿಸುವ ತಂತ್ರಗಾರಿಕೆ ರೂಪಿಸುತ್ತಿದ್ದಾನೆ ಜೈದೇವ.
ಅದಕ್ಕಾಗಿ ಆತ ಶಕುಂತಲಾಳನ್ನು ದೀಪಿಕಾ ಇರುವಲ್ಲಿಗೆ ಕರೆದುಕೊಂಡು ಬಂದಿದ್ದಾನೆ. ಆರಂಭದಲ್ಲಿ ಶಕುಂತಲಾಗೆ ಏನು ಎಂದೇ ತಿಳಿಯಲಿಲ್ಲ. ಬಳಿಕ ದೀಪಿಕಾಳನ್ನು ನೋಡಿ ಶಾಕ್ ಆಗಿದ್ದಾಳೆ.
56
ಭೂಮಿಕಾ ವಿರುದ್ಧ ಷಡ್ಯಂತ್ರ
ಮುಂದೆ ಏನಿದ್ದರೂ ಅಮ್ಮ ಮತ್ತು ಮಗ ಸೇರಿ ಭೂಮಿಕಾ ಮತ್ತು ಗೌತಮ್ರನ್ನು ಮಟ್ಟ ಹಾಕುವ ಪ್ಲ್ಯಾನ್ ಮಾಡುವುದೇ ಆಗಿದೆ. ಪ್ರತಿಸಲವೂ ಜೈದೇವ ಆರಂಭದಲ್ಲಿ ಗೆಲ್ಲುತ್ತಲೇ ಬಂದಿದ್ದಾನೆ. ಕೊನೆಗೆ ಸೋಲಾದರೂ ಒಂದಷ್ಟು ದಿನ ಭೂಮಿಕಾ ಮತ್ತು ಗೌತಮ್ಗೆ ಕಾಟ ತಪ್ಪಿದ್ದಲ್ಲ.
66
ಇನ್ನೇನು ಕಾದಿದ್ಯೋ
ದೀಪಿಕಾಳನ್ನು ಅಸ್ತ್ರವಾಗಿಸಿಕೊಂಡು ಭೂಮಿಕಾಗೆ ಇನ್ನೇನೇನು ತೊಂದರೆ ಕೊಡುತ್ತಾನೆಯೋ ಎಂದು ಕಾದು ನೋಡಬೇಕಷ್ಟೇ. ಸೀರಿಯಲ್ ಮುಗಿಯತ್ತೆ ಮುಗಿಯತ್ತೆ ಎನ್ನುವಾಗಲೇ ಟ್ವಿಸ್ಟ್ ಮೇಲೆ ಟ್ವಿಸ್ಟ್ ಸಿಗುತ್ತಾ ಸಾಗಿದೆ. ಇದೀಗ ದೀಪಿಕಾ ಅಧ್ಯಾಯ ಶುರುವಾಗಿದ್ದು, ಸೀರಿಯಲ್ ಮತ್ತಷ್ಟು ರೋಚಕವಾಗುತ್ತಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.