Amruthadhaare: ನೀನು ಗಂಡಸೇ ಅಲ್ಲ- ಭೂಮಿಕಾ ಬೆಂಕಿ; ಮಲ್ಲಿ ಮದುವೆ ನಿಲ್ಲಿಸಲು ಹೋಗೇ ಬಿಟ್ಟಳು

Published : Mar 22, 2026, 01:29 PM IST

ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿಯ ಮದುವೆ ನಿಲ್ಲುವ ಹಂತ ತಲುಪಿದೆ. ಮದುವೆ ಮಂಟಪದಲ್ಲಿ ಸುನಿಲ್, ಜೈದೇವನ ಶಿಷ್ಯ ಎಂಬ ಸತ್ಯ ಭೂಮಿಕಾ ಮತ್ತು ಗೌತಮ್‌ಗೆ ತಿಳಿದಿದ್ದು, ಜೈದೇವನ ಕುತಂತ್ರವನ್ನು ಬಯಲು ಮಾಡಲು ಭೂಮಿಕಾ ಸಿದ್ಧಳಾಗಿದ್ದಾಳೆ. ಈ ಮದುವೆ ನಿಂತರೆ ಮಲ್ಲಿಯ ಮುಂದಿನ ಗತಿ ಏನು ಎಂಬ ಕುತೂಹಲ ಮೂಡಿದೆ.

PREV
16
ಅಸಲಿ ಆಟ ಶುರು

ಅಮೃತಧಾರೆ ಸೀರಿಯಲ್​ (Amruthadhaare Serial) ಇದೀಗ ಅಸಲಿ ಆಟ ಶುರುವಾಗಿದೆ. ಮಲ್ಲಿಗೆ ಇನ್ನೇನು ಸುನಿಲ್​ ತಾಳಿ ಕಟ್ಟಬೇಕು ಎನ್ನುವಷ್ಟರಲ್ಲಿಯೇ ಆತನ ಅಸಲಿಯತ್ತು ಭೂಮಿಕಾ ಮತ್ತು ಗೌತಮ್​ ಎದುರು ಬಯಲಾಗಿದೆ.

26
ಸುನಿಲ್ ಅಸಲಿಯತ್ತು ಬಯಲು

ಸುನಿಲ್​ನನ್ನು ನೋಡಿದ ಪಾರ್ಥ, ಅವನು ಜೈದೇವನ ಶಿಷ್ಯ ಎಂದು ಹೇಳಿದರೆ, ಅತ್ತ ಆಕಾಶ್​ ಸುನೀಲ್​ನ ಅಸಲಿಯತ್ತನ್ನು ಪತ್ತೆ ಮಾಡಿ ಅಮ್ಮನಿಗೆ ತಿಳಿಸಿದ್ದಾನೆ. ಭೂಮಿಕಾ ಬೆಂಕಿಯಾಗಿದ್ದಾಳೆ.

36
ಮದುವೆ ನಿಲ್ಲಿಸಲು ಭೂಮಿಕಾ ರೆಡಿ

ಜೈದೇವನ ಬಳಿ ಹೋಗಿ ಕೆಂಡಾಮಂಡಲವಾದ ಭೂಮಿಕಾ, ಇನ್ನೊಬ್ಬ ಗಂಡಸನ್ನು ಹೆಂಡತಿಯ ಹಿಂದೆ ಬಿಟ್ಟವ ನಿನ್ನಂಥವರನ್ನು ಗಂಡಸು ಅನ್ನುವುದಿಲ್ಲ ಎಂದು ಕೆಂಡ ಕಾರಿದ್ದಾಳೆ. ಜೈದೇವ ಎದುರಾಡಲು ಹೋದಾಗ, ಏ.. ನೀನೇನು ಅವಳ ಮದುವೆ ನಿಲ್ಲಿಸುತ್ತಿ, ನಾನೇ ನಿಲ್ಲಿಸುತ್ತೇನೆ ಎಂದು ಹೋಗಿದ್ದಾಳೆ.

46
ಮಲ್ಲಿ ಮದ್ವೆ ನಿಲ್ಲತ್ತಾ?

ಜೈದೇವನ ಕೆಟ್ಟ ದಿನ ಅಂತೂ ಬಂದಾಯ್ತು. ಆದರೆ ಮಲ್ಲಿಯ ಗತಿ ಏನು? ಸುನಿಲ್​ ಈಗಾದ್ರೂ ಬಾಯಿ ಬಿಟ್ಟು ನಾನು ಮಲ್ಲಿಯನ್ನು ನಿಜವಾಗಿಯೂ ಪ್ರೀತಿಸ್ತೇನೆ ಎಂದು ಹೇಳ್ತಾನಾ? ಒಂದು ವೇಳೆ ಈ ಮದುವೆ ನಿಂತರೆ ಮಲ್ಲಿಯ ಸ್ಥಿತಿ ಏನು ಎನ್ನುವುದು ಸದ್ಯಕ್ಕಿರುವ ಕುತೂಹಲ.

56
ಏಕೆ ಸಾಧ್ಯವಾಗಲಿಲ್ಲ?

ಆದರೆ, ಇದರ ನಡುವೆಯೇ, ಅಷ್ಟು ಬುದ್ಧಿವಂತರಾಗಿರುವ ಭೂಮಿಕಾ ಮತ್ತು ಗೌತಮ್​ಗೆ ಸುನೀಲ್​​ ಅಸಲಿಯತ್ತು ಇಷ್ಟು ದಿನ ಪತ್ತೆ ಮಾಡಲು ಸಾಧ್ಯವಾಗಲಿಲ್ಲ ಏಕೆ ಎನ್ನುವುದು ವೀಕ್ಷಕರ ಪ್ರಶ್ನೆ.

66
ಮಲ್ಲಿ ಮದುವೆ ಆಗಲಿ

ಅಂತೂ ದಿನೇ ದಿನೇ ಸೀರಿಯಲ್​ ಕುತೂಹಲ ಕೆರಳಿಸುತ್ತಾ ಇದೆ. ಜೈದೇವ ಸೋಲುವುದು ಗ್ಯಾರೆಂಟಿ. ಆದರೆ ಮಲ್ಲಿ ಬದುಕಿನಲ್ಲಿ ಮತ್ತೊಮ್ಮೆ ಮೋಸ ಆಗಬಾರದು, ಸುನಿಲ್​ ಎಲ್ಲ ಸತ್ಯ ಹೇಳಬೇಕು. ಮಲ್ಲಿಯ ಮದುವೆ ಆಗಬೇಕು ಎನ್ನುವುದು ವೀಕ್ಷಕರ ಆಶಯ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories