ಧಾರಾವಾಹಿಗೆ ಗುಡ್ ಬೈ ಹೇಳಿ ಹೊಸ ಬ್ಯುಸಿನೆಸ್ ಶುರು ಮಾಡಿದ ‘ಅಮೃತಧಾರೆ’ ನಟಿ

Published : Mar 21, 2026, 05:51 PM IST

ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ದಿವಾನ್ ತಂಗಿ ಸುಧಾ ಪಾತ್ರದಲ್ಲಿ ನಟಿಸಿದ ನಟಿ ‘ಮೇಘಾ ಶೆಣೈ’, ಇದೀಗ ಮದುವೆಯಾಗುತ್ತಿದ್ದಂತೆ, ನಟನೆಯಿಂದ ದೂರ ಸರಿದು ಹೊಸ ಬ್ಯುಸಿನೆಸ್ ಶುರು ಮಾಡಿದ್ದಾರೆ. ಈ ಕುರಿತು ನಟಿ ತಮ್ಮ ಸೋಶಿಯಲ್ ಮಿಡೀಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. 

PREV
16
ಅಮೃತಧಾರೆ ಧಾರಾವಾಹಿ

ಜೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ ‘ಅಮೃತಧಾರೆ’ ಧಾರಾವಾಹಿಯಲ್ಲಿ ಗೌತಮ್ ದಿವಾನ್ ಮುದ್ದಿನ ತಂಗಿ ಸುಧಾ ಪಾತ್ರದಲ್ಲಿ ಮೇಘಾ ಶೆಣೈ ನಟಿಸುತ್ತಿದ್ದರು. ಸೀರಿಯಲ್ ಲೀಪ್ ತೆಗೆದುಕೊಳ್ಳುತ್ತಿದ್ದಂತೆ, ಆ ಪಾತ್ರಗಳನ್ನು ಮತ್ತೆ ತೋರಿಸಲೇ ಇಲ್ಲ. ಇದೀಗ ನಟಿ ಮೇಘಾ ಶೆಣೈ ಹೊಸ ಬ್ಯುಸಿನೆಸ್ ಶುರು ಮಾಡಿದ್ದಾರೆ.

26
ಹೊಸ ಹೆಜ್ಜೆ ಇಟ್ಟ ಮೇಘಾ ಶೆಣೈ

ಮೇಘಾ ಶೆಣೈ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಳಿಕ, ಸೀರಿಯಲ್ ನಿಂದ ದೂರ ಉಳಿದಿದ್ದರು. ಇದೀಗ ನಟಿ ತಮ್ಮದೇ ಆದ ಹೊಸ ಪಯಾಣವನ್ನು ಆರಂಭಿಸಿದ್ದಾರೆ. ಹೌದು ತಮ್ಮ ಹುಟ್ಟುಹಬ್ಬದ ದಿನವೇ ಮೇಘಾ ನವಜಾತ ಶಿಶುಗಳ ಆರೈಕೆಗಾಗಿ ಹೊಸ ಉದ್ಯಮವನ್ನು ಆರಂಭಿಸಿದ್ದು ಈ ಕುರಿತು ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

36
ಮೈ ಫಸ್ಟ್ ಸ್ಪಾ ಆರಂಭಿಸಿದ ಮೇಘಾ ಶೆಣೈ

ನನ್ನ ಹುಟ್ಟುಹಬ್ಬದಂದು, ನನ್ನ ಹೊಸ ಉದ್ಯಮ "ಮೈ ಫಸ್ಟ್ ಸ್ಪಾ" @my_first_spa01 ಅನ್ನು ಪ್ರಾರಂಭಿಸುವುದಾಗಿ ಘೋಷಿಸಲು ನನಗೆ ಸಂತೋಷವಾಗಿದೆ. ನವಜಾತ ಶಿಶುಗಳ ಆರೈಕೆ ಮತ್ತು ಪ್ರಸವಾನಂತರದ ಬೆಂಬಲಕ್ಕಾಗಿ ಮೀಸಲಾದ ಮನೆ ಸೇವೆ ಇದಾಗಿದೆ ಎಂದಿದ್ದಾರೆ ಮೇಘಾ ಶೆಣೈ.

46
ತಾಯಿ ಮತ್ತು ಮಗುವಿನ ಆರೈಕೆ

ಹೊಸ ತಾಯಂದಿರು ತಮ್ಮ ಶಿಶುಗಳಿಗೆ ಸೌಮ್ಯವಾದ ಸ್ಪಾ ಮತ್ತು ಆರೈಕೆಯನ್ನು ಒದಗಿಸುವಾಗ ತಮ್ಮನ್ನು ತಾವು ನೋಡಿಕೊಳ್ಳಲು ಸಹಾಯ ಮಾಡುತ್ತಾರೆ. ನವಜಾತ ಶಿಶುಗಳ ಆರೈಕೆ ಮತ್ತು ಸ್ನಾನದ ತಂತ್ರಗಳ ಕುರಿತು ತಜ್ಞರ ಮಾರ್ಗದರ್ಶನದೊಂದಿಗೆ ತಾಯ್ತನವನ್ನು ಸುಲಭಗೊಳಿಸುವುದು ಇದರ ಉದ್ದೇಶವಾಗಿದೆ ಎಂದು ತಮ್ಮ ಸ್ಪಾ ಬಗ್ಗೆ ನಟಿ ತಿಳಿಸಿದ್ದಾರೆ.

56
ಮತ್ತೆ ಧಾರಾವಾಹಿಯಲ್ಲಿ ನಟಿಸಲ್ವಾ?

ಮೇಘಾ ಶೆಣೈ ಹೊಸ ಹೆಜ್ಜೆಗೆ ಶುಭಾಶಯಗಳ ಮಹಾಪೂರ ಹರಿದು ಬಂದಿದೆ. ಆದರೆ ನಟಿ ಮತ್ತೆ ನಟನೆ ಮಾಡೋದಿಲ್ವಾ ಅನ್ನೋದು ತಿಳಿದು ಬಂದಿಲ್ಲ. ಅಮೃತಧಾರೆ ಧಾರಾವಾಹಿಯಲ್ಲಿ ಮತ್ತೆ ಗೌತಮ್ ದಿವಾನ್ ತಂಗಿ ಸುಧಾಳನ್ನು ತೋರಿಸುತ್ತಾರೋ? ಮೇಘಾ ಅವರೇ ಮತ್ತೆ ಬರುತ್ತಾರೋ ಅನ್ನೋದನ್ನು ಕಾದು ನೋಡಬೇಕಷ್ಟೇ.

66
ಮೇಘಾ ಶೆಣೈ ನಟಿಸಿದ ಧಾರಾವಾಹಿಗಳು

ಸುಧಾ ಪಾತ್ರದಲ್ಲಿ ನಟಿಸುತ್ತಿರುವ ನಟಿ ಮೇಘಾ ಶೆಣೈ ಈ ಹಿಂದೆ ಹಲವು ಸೀರಿಯಲ್ ಗಳಿಗೆ ಬಣ್ಣ ಹಚ್ಚಿದ್ದಾರೆ. ಸುಂದರಿ , ಜನುಮದ ಜೋಡಿ, ಕಾವೇರಿ, ಮಹಾದೇವಿ, ರಕ್ಷಾಬಂಧನ, ಆರತಿಗೊಬ್ಬ ಕೀರ್ತಿಗೊಬ್ಬ, ಜೀವ ಹೂವಾಗಿದೆ ಧಾರಾವಾಹಿಯಲ್ಲಿ ನಟಿಸಿದ್ದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories