‘Lakshmi Nivasa’ ರೋಚಕ ತಿರುವು… ವಿಶ್ವನ ಹೀರೋ ಮಾಡಿ, ಜಯಂತ್-ಸಿದ್ಧೇಗೌಡ್ರನ್ನ ಸೈಡ್ ಮಾಡಿದ್ರಾ ಡೈರೆಕ್ಟರ್?

Published : Mar 21, 2026, 03:30 PM IST

‘Lakshmi Nivasa’ ಧಾರಾವಾಹಿ ಇದೀಗ ರೋಚಕ ಘಟ್ಟವನ್ನು ತಲುಪಿದೆ. ಇಲ್ಲಿವರೆಗೆ ಜಾಹ್ನವಿ ಸತ್ತಿದ್ದಾಳೆ ಎಂದುಕೊಂಡಿದ್ದ ಲಕ್ಷ್ಮೀ ನಿವಾಸದ ಮುಂದೆ ಶಾಕಿಂಗ್ ಸುದ್ದಿ ಅನಾವರಣ ಆಗಲಿದೆ. ಕೊನೆಗೂ ಜಾನು ತಾನು ಎಷ್ಟು ಸ್ಟ್ರಾಂಗ್ ಆಗಿದ್ದೇನೆ ಅನ್ನೋದನ್ನು ತೋರಿಸಿಯೇ ಬಿಟಿದ್ದಾಳೆ. 

PREV
16
ಲಕ್ಷ್ಮೀ ನಿವಾಸ

ಲಕ್ಷ್ಮೀ ನಿವಾಸ ಧಾರಾವಾಹಿ ಇಷ್ಟು ದಿನ ನಿಧಾನ ಗತಿಯಲ್ಲಿ ಸಾಗುತ್ತಿತ್ತು ಎಂದು ವೀಕ್ಷಕರು ದೂರು ನೀಡುತ್ತಿದ್ದರು. ಅದನ್ನರಿತ ನಿರ್ದೇಶಕರು ಇದೀಗ ಧಾರಾವಾಹಿಯಲ್ಲಿ ರೋಚಕ ತಿರುವನ್ನಿಟ್ಟಿದ್ದು, ಇದಿಗ ರಿಲೀಸ್ ಆಗಿರುವ ಪ್ರೊಮೋದಲ್ಲಿ ಜಾಹ್ನವಿಯ ಸಾಹಸ ಪ್ರದರ್ಶನ ಆಗಿದೆ.

26
ಏನಾಗ್ತಿದೆ ಧಾರಾವಾಹಿಯಲ್ಲಿ

ಒಂದು ಕಡೆ ಲಕ್ಷ್ಮೀ ಮತ್ತು ಶ್ರೀನಿವಾಸರ ಷಷ್ಟಿಪೂರ್ತಿ ಸಮಾರಂಭ ನಡೆಯುತ್ತಿದೆ. ಅದಕ್ಕೆ ಲಕ್ಷ್ಮೀ ತಂದೆ ಕೂಡ ಬಂದಿದ್ದಾರೆ. ಇನ್ನೊಂದೆಡೆ ಜಯಂತ್ ಕಣ್ಣು ತಪ್ಪಿಸಿ, ವಿಶ್ವ ಜಾಹ್ನವಿಯನ್ನು ಲಕ್ಷ್ಮೀ ಕಣ್ಣ ಮುಂದೆ ತರಲು ಪ್ಲ್ಯಾನ್ ಮಾಡಿದ್ದಾರೆ. ಆದರೆ ಇದೀಗ ದೊಡ್ಡ ತಿರುವು ಸಿಕ್ಕಿದೆ.

36
ರೌಡಿಗಳ ಮುಂದೆ ವಿಶ್ವನ ಶಕ್ತಿ ಪ್ರದರ್ಶನ

ವಿಶ್ವ ತನ್ನ ಜಾನುಳನ್ನು ಅಡಗಿಸಿಟ್ಟಿದ್ದಾನೆ ಎಂದು ತಿಳಿದಿರುವ ಜಯಂತ್, ಹೇಗಾದರೂ ಅವನಿಂದ ಜಾನೂನ ಮರಳಿ ಪಡೆಯಬೇಕೆಂದು ಪಣತೊಟ್ಟು, ರೌಡಿಗಳನ್ನು ಛೂ ಬಿಟ್ಟಿದ್ದಾನೆ. ಆದರೆ ವಿಶ್ವ ರೌಡಿಗಳ ಹೆಡೆಮುರಿ ಕಟ್ಟಲು ತಯಾರಾಗಿ, ಭರ್ಜರಿ ಫೈಟ್ ನೀಡಿದ್ದಾನೆ.

46
ರುದ್ರಾವತಾರ ತಾಳಿದ ಜಾಹ್ನವಿ

ಇಲ್ಲಿವರೆಗೆ ಸೈಲೆಂಟ್ ಆಗಿದ್ದ ಜಾಹ್ನವಿ, ವಿಶ್ವನ ತಲೆಗೆ ಏಟು ಬೀಳುತ್ತಿದ್ದಂತೆ, ಸೊಂಟಕ್ಕೆ ಸೆರಗು ಸಿಕ್ಕಿಸಿ, ಕೋಲನ್ನು ಕೈಯಲ್ಲಿ ಹಿಡಿದು,ರೌಡಿಗಳ ವಿರುದ್ಧ ಹೋರಾಟಕ್ಕೆ ನಿಂತಿದ್ದಾಳೆ. ಇದನ್ನು ನೋಡಿ ವೀಕ್ಷಕರು ಮಾತ್ರ ಸಿಕ್ಕಾಪಟ್ಟೆ ಬೇಜಾರ್ ಆಗಿದ್ದಾರೆ. ಜೊತೆಗೆ ಜಯಂತನಿಗೆ ಬೆಂಬಲ ಸೂಚಿಸಿದ್ದಾರೆ.

56
ಏನ್ ಹೇಳ್ತಿದ್ದಾರೆ ವೀಕ್ಷಕರು?

ಜಾಹ್ನವಿಯ ಈ ದಿಟ್ಟ ನಡೆ ಜಯಂತ್ ನ ಮನಸ್ಥಿತಿ ತಿಳಿದು ಸರಿ ಮಾಡುವುದರಲ್ಲಿ ಇದ್ದಿದ್ದರೆ ಒಳ್ಳೆಯದಿತ್ತು, ಹೌದು ಅಷ್ಟು love ಮಾಡೋ ಗಂಡನ ಜಾನೂ ಪ್ರೀತಿಯಿಂದ ಬದಲಾಯಿಸಬಹುದು ಇತ್ತು. ನಿಜ ಜೀವನದಲ್ಲಿ ಎಷ್ಟೋ ಅಮಾಯಕ ಹೆಣ್ಣುಮಕ್ಕಳನ್ನ ಮದುವೆ ಆದವರು, ಹೊಡೆದು, ಬಡಿದು, ಚಿತ್ರ ಹಿಂಸೆ ಕೊಟ್ಟೂ ಆದರೂ ಹೆಣ್ಣು ಮಕ್ಕಳು ಯಾರಿಗೂ ಹೇಳದೇ ಜೀವನ ಮಾಡುತ್ತಾರೆ. ಧೈರ್ಯವಾಗಿ ಸಮಸ್ಯೆಗೆ ಪರಿಹಾರ ಹುಡುಕಿಕೊಂಡು ಹೋಗುತ್ತಾರೆ. ಜಯಂತ ಅತಿ ಪ್ರೀತಿ ಮಾಡಿದಕ್ಕೆ 1 ವರ್ಷ ವಿಶ್ವನ ಮನೇಲಿ ಇದ್ದು, ಏನೋ ಭಾರಿ ಚಿತ್ರಹಿಂಸೆ ತರ ಹೇಳಿ ಜಾನೂ ಹೇಳಿದಳು. ಇನ್ನ ಜಯಂತ್ ಇದ್ರೆ ಇನ್ನ ಏನು ರಾಧಾಂತ ಮಾಡ್ತಿದ್ಲೂ ಎಂದು ಜಾನು ವಿರುದ್ಧವೇ ಕಿಡಿ ಕಾರಿದ್ದಾರೆ.

66
ವಿಶ್ವನನ್ನು ಹೀರೋ ಮಾಡ್ತಾರ?

ಈ ಸೀರಿಯಲ್ ಅಲ್ಲಿ ಹೀರೋಗಳಿಗೆ ಬೆಲೆ ಇಲ್ಲ. ಈ ಸೀರಿಯಲ್ ನೋಡಿ ಎಲ್ಲರಿಗೂ ಸಾಕಾಗಿದೆ. ಯಾವಾಗಲೂ ಇದೇ ಆಯ್ತು. ಜಾನ್ವಿ ಜಯಂತ್ ಈಗಲೂ ಒಂದಾಗಲ್ಲ ಅನ್ಸುತ್ತೆ .ಬರೀ ಇದೆ ಆಯ್ತು. ಯಾವಾಗಲೂ ಜಯಂತನಿಗೆ ಮೋಸ. ಗಂಡ ಹೆಂಡತಿ ಒಂದಾಗ್ಲಿಕೆ ಬಿಡುವುದೇ ಇಲ್ಲ. ಈ ವಿಶ್ವ ಗಂಡ ಹೆಂಡತಿ ಮಧ್ಯೆ ಹುಳಿ ಹಿಂಡಿಲ್ಲ ಅಂದ್ರೆ ಈ ಡೈರೆಕ್ಟರ್ ಗೆ ನಿದ್ದೆ ಬರಲ್ಲ ಅನ್ಸುತ್ತೆ ಎಂದರೆ ಮತ್ತೊಬ್ಬರು, ವಿಶ್ವನ್ನ ಹೀರೋ ಮಾಡಲು ಹೋಗಿ ಜಯಂತ್, ಸಿದ್ಧೇಗೌಡ್ರಿಗೆ ಮೋಸ ಮಾಡ್ತಿದ್ದಾರೆ ಎಂದಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories