Amruthadhaare Serial: ಮಕ್ಕಳಾಗಲ್ಲ ಎಂದು ಕೊರಗಿದ ಅಪ್ಪಿ... ತುಳಸಿಗೆ ಆ ವಯಸ್ಸಲ್ಲೇ ಆಗಿದೆ ನಿಂಗೆ ಆಗಲ್ವಾ ಎಂದ ವೀಕ್ಷಕರು

Published : Sep 30, 2025, 11:47 AM IST

Amruthadhaare: ಅಮೃತಧಾರೆ ಧಾರಾವಾಹಿಯಲ್ಲಿ ಅಪ್ಪಿ ಮತ್ತು ಪಾರ್ಥ ಇಬ್ಬರು ವೈದ್ಯರ ಬಳಿ ಹೋಗಿದ್ದು, ಅಪ್ಪಿ ಮದುವೆಯಾಗಿ ಇಷ್ಟು ವರ್ಷಗಳಾದ್ರು ತನಗೆ ಮಕ್ಕಳಾಗಿಲ್ಲ ಎಂದು ಕೊರಗುತ್ತಿದ್ದಾರೆ. ಅಪ್ಪಿಯ ಕೊರಗಿಗೆ ವೀಕ್ಷಕರು ಹಲವು ರೀತಿಯಲ್ಲಿ ಸಮಾಧಾನ ಹೇಳಿದ್ದು, ತುಳಸಿಯ ಉದಾಹರಣೆಯನ್ನೂ ಕೊಟ್ಟಿದ್ದಾರೆ.

PREV
16
ಅಮೃತಧಾರೆ ಸೀರಿಯಲ್

ಅಮೃತಧಾರೆ ಧಾರಾವಾಹಿಯಲ್ಲಿ ಅಪೇಕ್ಷಾ ಮತ್ತು ಪಾರ್ಥ, ಮದುವೆಯಾಗಿ ಹಲವು ವರ್ಷಗಳು ಕಳೆದರೂ ಮಕ್ಕಳಾಗಿಲ್ಲ ಎನ್ನುವ ಕೊರಗಿನಿಂದ ಆಸ್ಪತ್ರೆಗೆ ಹೋಗಿ ಟೆಸ್ಟ್ ಮಾಡಿಸಿದ್ದಾರೆ. ಆದರೆ ಟೆಸ್ಟ್ ರಿಸಲ್ಟ್ ಬಂದಿದ್ದು, ತನಗೆ ಇನ್ನು ಮುಂದೆ ಮಕ್ಕಳಾಗಲ್ಲ ಎಂದು ಅಪೇಕ್ಷಾ ಕೊರಗುತ್ತಿದ್ದಾಳೆ.

26
ಪಾರ್ಥ ಸುಳ್ಳು ಹೇಳ್ತಿದ್ದಾನ?

ಅಪ್ಪಿಗೆ ಸಮಾಧಾನ ಮಾಡುತ್ತಿರುವ ಪಾರ್ಥ, ನೀವು ವರಿ ಮಾಡ್ಕೋಬೇಡಿ, ಎಲ್ಲಾನೂ ಸರಿ ಆಗುತ್ತೆ, ನಮಗೆ ಖಂಡಿತಾ ಮಕ್ಕಳಾಗುತ್ತೆ ಎನ್ನುತ್ತಿದ್ದಾನೆ. ಯಾಕ್ ಪಾರ್ಥ ಸುಳ್ಳು ಹೇಳ್ತಿದ್ದೀರಾ ಎಂದು ಕೇಳ್ತಿದ್ದಾಳೆ ಅಪ್ಪಿ. ರಿಪೋರ್ಟಲ್ಲಿ ನಮಗೆ ಮಕ್ಕಳಾಗಲ್ಲ ಅಂತ ಇದೆ, ಸುಮ್ನೆ ನನ್ನ ಸಮಾಧಾನಕ್ಕೆ ಈ ರೀತಿ ಸುಳ್ಳು ಹೇಳ್ಬೇಡಿ ಎನ್ನುತ್ತಾಳೆ.

36
ಸಮಾಧಾನ ಹೇಳಿದ ವೀಕ್ಷಕರು

ನಾನಿನ್ನು ಮಗುವಾಗ ಕನಸು ಕಾಣೋದಿಲ್ಲ, ಇದರಿಂದ ನೋವಾಗೋದೆ ಜಾಸ್ತಿ. ಕೆಲವು ಸತ್ಯವನ್ನು ಒಪ್ಪಿಕೊಳ್ಳಲೇಬೇಕು ಎಂದು ಕಣ್ಣೀರಿಡುತ್ತಿರುವ ಅಪ್ಪಿಗೆ ವೀಕ್ಷಕರು ಸಮಾಧಾನದ ನುಡಿಯನ್ನು ಹೇಳಿದ್ದು, ಪಾರ್ಥ- ಅಪ್ಪಿ ಇಬ್ಬರೂ ಬೇಸರ ಮಾಡಿಕೊಳ್ಳಬೇಡಿ, ಖಂಡಿತಾ ಮಗು ಆಗುತ್ತೆ ಎಂದಿದ್ದಾರೆ.

46
ತುಳಸಿ ಉದಾಹರಣೆ ಕೊಟ್ಟ ಜನ

ಕಾಮೆಂಟ್ ಸೆಕ್ಷನ್ ಪೂರ್ತಿ ಸಲಹೆಗಳೇ ಇದ್ದು, ಒಬ್ಬರಂತೂ ಕಾಮೆಂಟ್ ಮಾಡಿ ಅಪ್ಪಿ ಅಳೋದು ಯಾಕೆ, ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ತುಳಸಿಗೆ 60ನೇ ವಯಸ್ಸಿನಲ್ಲಿ ಮಗುವಾಗಿದೆ, ನಿಂಗೆ ಮಗುವಾಗೋದು ಕಷ್ಟಾನ ಅಪ್ಪಿ, ಖಂಡಿತಾ ಆಗುತ್ತೆ ಎಂದು ಹೇಳಿದ್ದಾರೆ.

56
ಭೂಮಿಕಾಗೆ ಮಾಡಿದ ನೋವು

ಭೂಮಿಕಾಗೇ ಎಷ್ಟು ನೋವು ಅವಮಾನ ಮಾಡಿದ್ದೆ, ಭೂಮಿಗೂ ಮಕ್ಕಳು ಆಗೋದಿಲ್ಲ ಅಂದಾಗ ಎಷ್ಟು ಕೇವಲವಾಗಿ ಮಾತಾಡಿದ್ದೆ, ಕರ್ಮ ರಿಟರ್ನ್ ಎನ್ನುವಂತೆ, ಈಗ ಆ ನೋವು ನಿನಗೆ ಕಾಡುತ್ತಿದೆ ಎನ್ನುತ್ತಿದ್ದಾರೆ ಜನ..

66
ಹೊಸ ಕಥೆ ಸೃಷ್ಟಿಸಿದ ವೀಕ್ಷಕರು

ಇನ್ನು ಹಲವು ವೀಕ್ಷಕರು ಹೊಸ ಕಥೆಯನ್ನೇ ಸೃಷ್ಟಿ ಮಾಡಿದ್ದು, ಅಪ್ಪಿ-ಪಾರ್ಥಗೆ ಮಕ್ಕಳಾಗಲ್ಲ, ಅವರು ಮಗುವನ್ನು ದತ್ತು ತೆಗೆದುಕೊಳ್ಳಲು ನಿರ್ಧರಿಸುತ್ತಾರೆ, ಆವಾಗ ಅವರಿಗೆ ಭೂಮಿಕಾ ಮಗಳೇ ಸಿಗುತ್ತೆ, ಅದೇ ಮಗುವನ್ನು ದತ್ತು ಸ್ವೀಕಾರ ಮಾಡ್ತಾರೆ ಎನ್ನುತ್ತಿದ್ದಾರೆ. ಮುಂದೆ ಏನಾಗುತ್ತೆ ಕಾದು ನೋಡಬೇಕು.

Read more Photos on
click me!

Recommended Stories