‘Amruthadhaare’ ಸಿನಿಮಾದಂತೆ ಧಾರಾವಾಹಿಯಲ್ಲೂ ನಾಯಕಿಯ ದುರಂತ ಅಂತ್ಯವಾಗುತ್ತಾ?

Published : Jul 10, 2026, 11:16 AM IST

Amruthadhaare: ರಮ್ಯಾ ಮತ್ತು ಧ್ಯಾನ್ ಅಭಿನಯದ ‘ಅಮೃತಧಾರೆ’ ಸಿನಿಮಾ ಜನರ ಅಚ್ಚುಮೆಚ್ಚು, ಈ ಸಿನಿಮಾದಲ್ಲಿ ನಾಯಕಿ ಕ್ಯಾನ್ಸರ್ ಗೆ ತುತ್ತಾಗುತ್ತಾಳೆ. ಇದೀಗ ‘ಅಮೃತಧಾರೆ’ ಧಾರಾವಾಹಿಯಲ್ಲೂ ನಾಯಕಿ ಭೂಮಿಕಾ ಅದೇ ಪರಿಸ್ಥಿತಿಯಲ್ಲಿದ್ದು, ಸಿನಿಮಾದಂತೆ ಧಾರಾವಾಹಿಯನ್ನು ಪಾತ್ರದ ಅಂತ್ಯವಾಗುತ್ತಾ?

PREV
16
ಅಮೃತಧಾರೆ ಧಾರಾವಾಹಿ

ಅಮೃತಧಾರೆ ಧಾರಾವಾಹಿಯಲ್ಲಿ ಇದೀಗ ಮಹಾ ತಿರುವು ಸಿಕ್ಕಿದ್ದು, ಇನ್ನೇನು ಎಲ್ಲವೂ ಸರಿಯಾಗುತ್ತಿದೆ ಎನ್ನುವಾಗಲೇ ನಾಯಕಿ ಭೂಮಿಕಾಗೆ ‘ಸ್ತನ ಕ್ಯಾನ್ಸರ್’ ಇರುವುದು ಪತ್ತೆಯಾಗಿದೆ. ಹಾಗಾದ್ರೆ ಒಲವ ಅಮೃತಧಾರೆ ಬೇಸರದಲ್ಲಿ ಅಂತ್ಯವಾಗುತ್ತಾ? ಅಮೃತಧಾರೆ ಸಿನಿಮಾದಲ್ಲಿ ನಾಯಕಿಯ ಅಂತ್ಯವಾಗುವಂತೆ ಇಲ್ಲೂ ಸಹ ನಾಯಕಿ ಕ್ಯಾನ್ಸರ್ ಗೆ ಬಲಿಯಾಗುತ್ತಾಳ?

26
ಅಮೃತಧಾರೆ ಸಿನಿಮಾ

2005ರಲ್ಲಿ ಬಿಡುಗಡೆಯಾದ ಚಂದನವನದ ಜನಪ್ರಿಯ ಸಿನಿಮಾ ‘ಅಮೃತಧಾರೆ’. ರಮ್ಯಾ ಮತ್ತು ಧ್ಯಾನ್ ನಟಿಸಿರುವ ಈ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈ ಚಿತ್ರದಲ್ಲಿ ನಾಯಕಿ ಅಮೃತಾ ಬ್ರೈನ್ ಕ್ಯಾನ್ಸರ್ ಗೆ ತುತ್ತಾಗಿರುತ್ತಾಳೆ. ಆಕೆ ಇನ್ನು ಬದುಕುವುದೇ ಇಲ್ಲ ಎಂದು ವೈದ್ಯರು ಹೇಳಿರುತ್ತಾರೆ. ಹಾಗಾಗಿ ನಾಯಕ, ತನ್ನ ಕನಸಿನ ಮನೆ ಅಮೃತಧಾರೆಯನ್ನೇ ಮಾರಿ, ನಾಯಕಿಯ ಎಲ್ಲಾ ಆಸೆಗಳನ್ನು ಒಂದೊಂದಾಗಿ ಈಡೇರಿಸುತ್ತಾ ಸಾಗುತ್ತಾನೆ.

36
ತಾಜಮಹಲಿನಲ್ಲಿ ಸಿನಿಮಾ ಅಂತ್ಯ

ಅಮೃತಧಾರೆ ಸಿನಿಮಾದಲ್ಲಿ ಕೊನೆಯದಾಗಿ ನಾಯಕಿಯನ್ನು ಪೂರ್ತಿಯಾಗಿ ರೆಡಿ ಮಾಡಿ, ಆಕೆ ಆಸೆಪಟ್ಟಂತೆ, ತಾಜ್ ಮಹಲ್ ನೊಡೋದಕ್ಕೆ ಕರೆದುಕೊಂಡು ಹೋಗುತ್ತಾನೆ ಪತಿ ಪುರು. ಕೊನೆಗೆ ಅಮೃತಾ, ನೀನು ಶಹಜಾನ್ ಗಿಂತ ಗ್ರೇಟ್, ನಾನು ನಿನ್ನನ್ನು ಬಿಟ್ಟು ಎಲ್ಲೂ ಹೋಗಲ್ಲ, ನಿನ್ನೊಳಗೆ ನಾನಿರುತ್ತೇನೆ, ನನ್ನೊಳಗೆ ನೀನಿರುವೆ ಎನ್ನುತ್ತಾ ಕಣ್ಣು ಮುಚ್ಚುತ್ತಾಳೆ. ಸಿನಿಮಾದಲ್ಲಿ ನಾಯಕಿ ಸತ್ತಿದ್ದಾಳೋ, ಇಲ್ಲವೋ ಎನ್ನುವುದನ್ನು ನಿರ್ದೇಶಕರು ವೀಕ್ಷಕರಿಗೆ ಬಿಟ್ಟಿದ್ದಾರೆ. ಆದರೆ ಸಿನಿಮಾ ನೋಡಿದರೆ, ಅದುವೇ ನಾಯಕಿಯ ಕೊನೆ ಎಂದೇ ಹೇಳಬಹುದು. ಇದೀಗ ಕನ್ನಡ ಸೀರಿಯಲ್ ಅಮೃತಧಾರೆಯಲ್ಲೂ ಹಾಗೆಯೇ ಆಗುತ್ತಾ?

46
ವೈದ್ಯರು ಹೇಳಿದ್ದೇನು?

ಭೂಮಿಕಾ ಮತ್ತು ಗೌತಮ್ ಇಬ್ಬರೂ ಬ್ಲಡ್ ಟೆಸ್ಟ್ ಮಾಡಲು ಕೊಟ್ಟಿದ್ದರು. ರುಟೀನ್​ ಚೆಕಪ್​ ಮಾಡಿಸಿಕೊಂಡಿದ್ದರು ದಂಪತಿ. ಗೌತಮ್ ಗೆ ಏನಾದರೂ ಆಗಿರುವ ಭಯದಲ್ಲಿದ್ದ ಭೂಮಿಕಾಗೆ, ಬ್ರೆಸ್ಟ್​ ಕ್ಯಾನ್ಸರ್​ ಇರುವುದು ತನಗೆ ಎನ್ನುವ ಶಾಕಿಂಗ್ ಸತ್ಯ ತಿಳಿದು ಬಂದಿದೆ. ಕ್ಯಾನ್ಸರ್ ಈಗ ಯಾವ ಹಂತದಲ್ಲಿದೆ? ಅದನ್ನು ಶೀಘ್ರದಲ್ಲೇ ಗುಣಪಡಿಸಬಹುದೇ ಅನ್ನೋದು ಇನ್ನಷ್ಟೇ ಗೊತ್ತಾಗಬೇಕಿದೆ.

56
ವೀಕ್ಷಕರು ಶಾಕ್

ಸೀರಿಯಲ್ ಪ್ರೊಮೋ ಬಿಡುಗಡೆಯಾಗಿದ್ದು, ಧಾರಾವಾಹಿಯ ಶಾಕಿಂಗ್ ಟ್ವಿಸ್ಟ್ ನೋಡಿ ವೀಕ್ಷಕರು ಶಾಕ್ ಆಗಿದ್ದಾರೆ. ಎಲ್ಲವೂ ಹ್ಯಾಪಿ ಎಂಡಿಂಗ್ ಆಗುತ್ತಿದೆ ಎನ್ನುವಷ್ಟರಲ್ಲಿ, ಶಾಕಿಂಗ್ ಸುದ್ದಿ ಕೊಟ್ಟಿದ್ದೀರಿ. ನಮ್ಮ ಹೃದಯವೇ ಒಡೆದು ಹೋಯಿತು ಎಂದಿದ್ದಾರೆ ಹಲವರು. ಇನ್ನೂ ಕೆಲವರು, ಈ ರೀತಿ ಟ್ವಿಸ್ಟ್ ಕೊಟ್ಟು, ಇಂತಹ ಸಂದರ್ಭದಲ್ಲಿ ಗಂಡ ಹೆಂಡತಿ ಜೊತೆಯಾಗಿ ನಿಂತು ಯಾವ ರೀತಿ ಸಮಸ್ಯೆಯನ್ನು ಎದುರಿಸುತ್ತಾರೆ ಎನ್ನುವುದನ್ನು ತೋರಿಸಿದರೆ ತುಂಬಾನೆ ಉತ್ತಮ ಎಂದು ಸಲಹೆ ನೀಡಿದ್ದಾರೆ.

66
ಮತ್ತೊಂದು ದುರಂತ ಅಂತ್ಯದ ಅಮೃತಧಾರೆಯಾಗುತ್ತಾ?

ಅಮೃತಧಾರೆ ಸಿನಿಮಾ ಮತ್ತು ಧಾರಾವಾಹಿ ಎರಡರಲ್ಲೂ ಸಹ ಪತ್ನಿಯರ ಸಂತೋಷಕ್ಕಾಗಿ ಎಲ್ಲವನ್ನೂ ಮಾಡುವ ಗಂಡಂದಿರು. ಪತ್ನಿಯ ಕನಸುಗಳಿಗೆ ನೆರವಾಗುವ ಗಂಡಂದಿರು ಇರುವ ಕಥೆ. ಎರಡೂ ಕಥೆಗಳಲ್ಲಿ ಕೊಂಚ ಸಾಮ್ಯಥೆ ಇದೆ. ಹಾಗಾಗಿ, ಅಮೃತಧಾರೆ ಸಿನಿಮಾದಂತೆ, ಇಲ್ಲೂ ಟ್ರಾಜಿಕ್ ಎಂಡಿಂಗ್ ಆಗುತ್ತಾ? ಕಾದು ನೋಡಬೇಕು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories