Amruthadhaare ಭೂಮಿಕಾಗೆ ಕ್ಯಾನ್ಸರ್​! ಚೆಕಪ್​ಗೆ ಹೋದಾಗ ಬಯಲಾಯ್ತು ಭಯಾನಕ ಸತ್ಯ- ಮುಂದೇನು

Published : Jul 09, 2026, 07:35 PM IST

ಅಮೃತಧಾರೆ ಧಾರಾವಾಹಿಯಲ್ಲಿ ಎಲ್ಲವೂ ಸುಖಾಂತ್ಯ ಕಾಣಲಿದೆ ಎನ್ನುವಾಗಲೇ ಕಥೆಗೆ ಅನಿರೀಕ್ಷಿತ ತಿರುವು ಸಿಕ್ಕಿದೆ. ಗೌತಮ್‌ಗೆ ಗಂಭೀರ ಕಾಯಿಲೆ ಇದೆ ಎಂದುಕೊಂಡರೆ, ವೈದ್ಯಕೀಯ ವರದಿಯಲ್ಲಿ ಭೂಮಿಕಾಗೆ ಬ್ರೆಸ್ಟ್ ಕ್ಯಾನ್ಸರ್ ಇರುವುದು ದೃಢಪಟ್ಟಿದೆ

PREV
16
ವೀಕ್ಷಕರು ಊಹಿಸಿಕೊಳ್ಳಲೂ ಸಾಧ್ಯವಿಲ್ಲ!

ಅಮೃತಧಾರೆ ಸೀರಿಯಲ್​ (Amruthadhaare Serial) ಇನ್ನೇನು ಮುಗಿಯತ್ತೆ ಎಂದುಕೊಂಡಾಗಲೇ ಯಾರೂ ಊಹಿಸದ ಘನಘೋರ ಸತ್ಯವೊಂದು ಬಯಲಾಗಿದೆ. ಬಹುಶಃ ಇದನ್ನು ವೀಕ್ಷಕರು ಕೂಡ ಸಹಿಸಿಕೊಳ್ಳಲು ಸಾಧ್ಯವೇ ಇಲ್ಲ ಎನ್ನುವ ರೀತಿಯಲ್ಲಿ ಸ್ಟೋರಿಗೆ ಟ್ವಿಸ್ಟ್​ ಕೊಡಲಾಗಿದೆ.

26
ತಲೆ ತಿರುಗಿ ಬಿದ್ದಿದ್ದ ಗೌತಮ್​

ಕಚೇರಿಯಲ್ಲಿ ತಲೆ ತಿರುಗಿ ಬಿದದ್ದು ಗೌತಮ್​. ಇದರಿಂದ ಎಲ್ಲರೂ ಆತಂಕಗೊಂಡಿದ್ದರು. ಇದನ್ನು ನೋಡಿದಾಗ ಗೌತಮ್​ಗೆ ಏನೋ ಗಂಭೀರ ಕಾಯಿಲೆ ಇರುವಂತೆ ತೋರಿಸಲಾಗಿತ್ತು. ಆದರೆ ಇಲ್ಲಿ ಆಗಿದ್ದೇ ಬೇರೆ.

36
ಆಗಿದ್ದೇ ಬೇರೆ

ವೈದ್ಯರು ಕರೆ ಮಾಡಿ, ಭೂಮಿಕಾ ಮತ್ತು ಗೌತಮ್​ಗೆ ಬರಲು ಹೇಳಿದ್ರು. ಆಗ ಭೂಮಿಕಾ, ಬ್ಲಡ್​ ಟೆಸ್ಟ್​ನಲ್ಲಿ ಗೌತಮ್​ಗೆ ಏನಾದ್ರೂ ಸಮಸ್ಯೆ ಇದೆಯಾ ಎಂದು ಆತಂಕಗೊಂಡಿದ್ದಳು. ಆದರೆ ಇಲ್ಲಿ ಆಗಿದ್ದೇ ಬೇರೆ.

46
ನಿಭಾಯಿಸುವುದನ್ನು ತೋರಿಸ್ತಾರಾ?

ರುಟೀನ್​ ಚೆಕಪ್​ ಮಾಡಿಸಿಕೊಂಡಿದ್ದರು ದಂಪತಿ. ಈ ವೇಳೆ ಭೂಮಿಕಾ ಬ್ರೆಸ್ಟ್​ ಕ್ಯಾನ್ಸರ್​ ಇರುವುದು ತಿಳಿದಿದೆ. ಅಷ್ಟಕ್ಕೂ ಈಗಿನ ಕಾಲದಲ್ಲಿ ಬ್ರೆಸ್ಟ್​ ಕ್ಯಾನ್ಸರ್​ ಎನ್ನುವುದು ಸರ್ವೇ ಸಾಮಾನ್ಯ ಎನ್ನುವಂತಾಗಿದೆ. ಇದನ್ನೇ ಸೀರಿಯಲ್​ನಲ್ಲಿಯೂ ತಂದಿದ್ದು, ಅದನ್ನು ಹೇಗೆ ನಿಭಾಯಿಸಬೇಕು ಎಂದು ಹೇಳುವುದನ್ನು ಸೀರಿಯಲ್​​ ಕಲಿಸುವಂತೆ ಕಾಣುತ್ತಿದೆ. ಹಾಗೆ ಆಗಲಿ ಎನ್ನುವುದೇ ವೀಕ್ಷಕರ ಆಸೆ ಕೂಡ.

56
ನುಂಗಲಾಗದ ತುತ್ತು

ಅದೇನೇಇದ್ದರೂ ಸದ್ಯ, ಭೂಮಿಕಾ ಮತ್ತು ಗೌತಮ್​ ಸ್ಥಿತಿ ಯಾರಿಗೂ ಬೇಡವಾಗಿದೆ. ಈಗಷ್ಟೇ ಎಲ್ಲವೂ ಚೆನ್ನಾಗಿ ದಿ ಎಂಡ್​ ಆಗಿದೆ ಎಂದುಕೊಳ್ಳುವಾಗಲೇ ಇಂಥದ್ದೊಂದು ಟ್ವಿಸ್ಟ್​ ಕೊಟ್ಟಿದ್ದು, ವೀಕ್ಷಕರಿಗೆ ನುಂಗಲಾಗದ ತುತ್ತಾಗಿದೆ. ಮೊದಲಿನಿಂದಲೂ ಕಷ್ಟ ನೋಡಿಯೇ ಬಂದ ಜೋಡಿಗೆ ಯಾಕೆ ಬರೀ ಕಷ್ಟವೇ ಬರುತ್ತದೆ ಎಂದು ಬೇಸರ ಮಾಡಿಕೊಳ್ಳುತ್ತಿದ್ದಾರೆ.

66
ವೀಕ್ಷಕರ ಅನಿಸಿಕೆ ಏನು?

ಒಟ್ಟಿನಲ್ಲಿ ಒಂದೆಡೆ ಶಕುಂತಲಾ ಮತ್ತು ಜೈದೇವ್​ ಒಟ್ಟಾಗಿ ಗೌತಮ್​ ಸಾಮ್ರಾಜ್ಯದ ಮೇಲೆ ಕಣ್ಣು ಹಾಕಿದ್ದರೆ, ಅದೇ ಇನ್ನೊಂದೆಡೆ ಭೂಮಿಕಾ ಲೈಫ್​ನಲ್ಲಿ ಈ ರೀತಿಯ ಟ್ವಿಸ್ಟ್​ ಕೊಡಲಾಗಿದೆ. ವೀಕ್ಷಕರು ಇದನ್ನು ಹೇಗೆ ತೆಗೆದುಕೊಳ್ಳುತ್ತಾರೋ ಕಾದು ನೋಡಬೇಕಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories