ರೀಲ್ಸ್ ಮಾಡುವಾಗ ಕಾಲು ಜಾರಿ ಬಿದ್ದ ವೈಷ್ಣವಿ ಗೌಡ… ಮುಂದೇನಾಯ್ತು? Video Viral

Published : Jul 09, 2026, 06:49 PM IST

ಕನ್ನಡ ಕಿರುತೆರೆ ನಟಿ ವೈಷ್ಣವಿ ಗೌಡ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಒಂದು ಪುಟ್ಟ ರೀಲ್ಸ್ ಶೇರ್ ಮಾಡಿ, ಅದಕ್ಕೊಂದು ಫನ್ನಿಯಾದ ಕ್ಯಾಪ್ಶನ್ ಕೊಟ್ಟಿದ್ದು, ಫ್ಯಾನ್ಸ್ ಅದನ್ನು ನೋಡಿ ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ, ಅಷ್ಟೇ ಅಲ್ಲ…. ಇಂತ ವಿಡಿಯೋ ಹಾಕೋದಕ್ಕೆ ಮೀಟರ್ ಬೇಕು ಮೀಟರ್ ಎಂದಿದ್ದಾರೆ.

PREV
15
ವೈಷ್ಣವಿ ಗೌಡ

ಕನ್ನಡ ಕಿರುತೆರೆ ನಟಿ ವೈಷ್ಣವಿ ಗೌಡ ಕನ್ನಡಿಗರನ್ನು ತಮ್ಮ ನಟನೆಯ ಮೂಲಕ ಸೆಳೆದಿದ್ದಾರೆ. ಅಗ್ನಿಸಾಕ್ಷಿಯ ಸನ್ನಿಧಿಯಾಗಿ, ಸೀತಾ ರಾಮದ ಸೀತೆಯಾಗಿ ಜನಮನದಲ್ಲಿ ಭದ್ರವಾಗಿ ನೆಲೆ ನಿಂತಿದ್ದಾರೆ. ಇದರ ಜೊತೆಗೆ ನಟಿ ಸೋಶಿಯಲ್ ಮೀಡಿಯಾದಲ್ಲಿ ಶೇರ್ ಮಾಡುವ ವಿಡಿಯೋ, ಫೋಟೊಗಳ ಮೂಲಕವೂ ಸುದ್ದಿಯಲ್ಲಿರುತ್ತಾರೆ.

25
ಹೊಸ ವಿಡೀಯೋ ವೈರಲ್

ಇದೀಗ ವೈಷ್ಣವಿ ಗೌಡ ತಮ್ಮ ಇನ್’ಸ್ಟಾಗ್ರಾಂನಲ್ಲಿ ಶೇರ್ ಮಾಡಿರುವಂತಹ ಒಂದು ಪುಟ್ಟ ರೀಲ್ಸ್ ಹಾಗೂ ನಟಿ ಅದಕ್ಕೆ ಬರೆದಿರುವ ಕ್ಯಾಪ್ಶನ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಅಷ್ಟಕ್ಕೂ ನಟಿ ಶೇರ್ ಮಾಡಿರುವ ವಿಡಿಯೋದಲ್ಲಿ ಅಂತದ್ದೇನಿದೆ ಅಂತೀರಾ? ಏನು ಇಲ್ಲ ಅಂತಾನೆ ಹೇಳಬಹುದು, ಅದು ಕೇವಲ 5-6 ಸೆಕೆಂಡುಗಳ ವಿಡಿಯೋ ಅಷ್ಟೇ.

35
ವಿಡಿಯೋದಲ್ಲಿ ಏನಿದೆ?

ವಿಡೀಯೋದಲ್ಲಿ ವೈಷ್ಣವಿ ಗೌಡ ಸೀರೆಯುಟ್ಟು, ಏನೋ ರೀಲ್ಸ್ ಮಾಡಲು ಹೋಗಿ ಕಾಲು ಜಾರಿ ನೆಲಕ್ಕೆ ಬಿದ್ದಿರುವುದು ಕಾಣಿಸುತ್ತಿದೆ. ಇದರ ಜೊತೆಗೆ ನಟಿ ‘ಒಲಿಂಪಿಕ್ ನಲ್ಲಿ ಬೀಳುವ ಕಾಂಪಿಟೀಶನ್ ಇದ್ರೆ, ನಾನು ಅಕ್ಸಿಡೆಂಟ್ ಆಗಿ ಆಯ್ಕೆ ಆಗುತ್ತಿದ್ದೆ. (If falling was an Olympic sport, I’d accidentally qualify) ಎಂದು ತಮಾಷೆಯಾಗಿ ಬರೆದುಕೊಂಡಿದ್ದಾರೆ.

45
ವಿಡಿಯೋ ನೋಡಿ ಫ್ಯಾನ್ಸ್ ಏನಂದ್ರು?

ನಟ ಸ್ಮೈಲ್ ಗುರು ರಕ್ಷಿತ್ ಕಾಮೆಂಟ್ ಮಾಡಿ ಇದನ್ನ ಶೇರ್ ಮಾಡೋದಕ್ಕೂ ಮೀಟ್ರು ಬೇಕು ಮೀಟರ್ ಎಂದಿದ್ದಾರೆ. ಈ ಡೈಲಾಗ್ ನ್ನು ವೈಷ್ಣವಿ ಬಿಗ್ ಬಾಸ್ ಮನೆಯಲ್ಲಿ ಹೇಳಿದ್ದರು. ಇನ್ನು ಇತರ ಅಭಿಮಾನಿಗಳು ಸ್ಮೈಲ್ ಇಮೋಜಿಗಳಿಂದ ಕಾಮೆಂಟ್ ಬಾಕ್ಸ್ ತುಂಬಿಸಿದ್ದು, ಅಲ್ಲದೇ, ಜೋಪಾನ, ಹುಷಾರಾಗಿದ್ದೀರಿ ಅಲ್ವಾ? ಅಂಗೇ ಹಾಗಬೇಕು ಅಲ್ಲೂ ಮುರಿಯಬೇಕು ಗೌಡ್ರು ಹುಡುಗ ಬಿಟ್ಟು ಹೋದೆ ಅಲ್ವಾ ಅದಿಕ್ಕೆ ಅಂತಾನೂ ಕಾಮೆಂಟ್ ಮಾಡಿದ್ದಾರೆ.

55
ವೈಷ್ಣವಿ ಗೌಡ ಮುಂದಿನ ಸೀರಿಯಲ್ ಯಾವುದು?

‘ಸೀತಾ ರಾಮ’ ಸೀರಿಯಲ್ ಬಳಿಕ ಕೊಂಚ ಬ್ರೇಕ್ ತೆಗೆದುಕೊಂಡಿದ್ದ ವೈಷ್ಣವಿ ಗೌಡ, ಇದೀಗ ಉದಯ ಟಿವಿಯಲ್ಲಿ ‘ಗೆಳತಿ ಗಾಯತ್ರಿ’ ಎನ್ನುವ ಹೊಚ್ಚ ಹೊಸ ಧಾರಾವಾಹಿ ಮೂಲಕ ಮತ್ತೆ ಕಿರುತೆರೆಗೆ ಎಂಟ್ರಿ ಕೊಡುತ್ತಿದ್ದಾರೆ. ಈಗಾಗಲೇ ಪ್ರೊಮೋ ಬಿಡುಗಡೆಯಾಗಿದ್ದು, ಅಭಿಮಾನಿಗಳು ನಟಿಯನ್ನು ಮತ್ತೆ ತೆರೆ ಮೇಲೆ ನೋಡಿ ಖುಷಿಪಟ್ಟಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories