Amruthadhaare ಮುಗಿಯತ್ತೆ ಎನ್ನುವಾಗ್ಲೇ ಭಾರಿ ಟ್ವಿಸ್ಟ್​: ಕೆಲಸ ಬಿಟ್ಟ ಗೌತಮ್​, ಭೂಮಿಕಾ ವಿರುದ್ಧ ತಿರುಗಿ ಬಿದ್ದ ಮಲ್ಲಿ!

Published : Feb 12, 2026, 01:56 PM IST

ಗೌತಮ್ ತನ್ನ ಸಾಮ್ರಾಜ್ಯವನ್ನು ಹೊಸದಾಗಿ ಕಟ್ಟಲು ಹೊರಟಿದ್ದರೆ, ಇತ್ತ ಮಲ್ಲಿಯು ಜೈದೇವ್ ಬಿಟ್ಟ ಪುಡಿ ರೌಡಿಯ ಪ್ರೇಮಪಾಶದಲ್ಲಿ ಬಿದ್ದಿದ್ದಾಳೆ. ಮಲ್ಲಿ ಮತ್ತೆ ಮೋಸ ಹೋಗಬಾರದೆಂದು ಅವಳ ಪ್ರಿಯಕರನ ಬಗ್ಗೆ ಪತ್ತೆ ಮಾಡಲು ಹೊರಟ ಭೂಮಿಕಾಳ ವಿರುದ್ಧವೇ ಮಲ್ಲಿ ತಿರುಗಿಬಿದ್ದಿದ್ದಾಳೆ.

PREV
17
ಅಮೃತಧಾರೆ ಟ್ವಿಸ್ಟ್​

ಅಮೃತಧಾರೆ ಸೀರಿಯಲ್​ (Amruthadhaare Serial) ಮುಗಿಯತ್ತೆ ಎಂದುಕೊಂಡವರೇ ಹೆಚ್ಚು. ಇದಕ್ಕೆ ಕಾರಣ, ಭೂಮಿಕಾ ಮತ್ತು ಗೌತಮ್​ ಒಂದಾಗಿದ್ದಾರೆ. ಮಲ್ಲಿಗೂ ಜೋಡಿ ಸಿಕ್ಕಿದೆ. ಜೈದೇವನನ್ನು ಮಟ್ಟ ಹಾಕಿದ್ರೆ ಅಲ್ಲಿಗೆ ಸೀರಿಯಲ್​ ಅಂತ್ಯ ಕಾಣಲಿದೆ ಎನ್ನಲಾಗಿತ್ತು.

27
ಸೀರಿಯಲ್​ ಮುಗಿಯಲ್ಲ

ಆದರೆ, ಯಾವುದೇ ಸೀರಿಯಲ್​ ಟಿಆರ್​ಪಿಯಲ್ಲಿ ಮೇಲಿನ ಮಟ್ಟದಲ್ಲಿ ಇರುವಾಗ ಅದನ್ನು ಹೇಗಾದರೂ ಸೈ ಎಳೆದುಕೊಂಡು ಹೋಗುವುದು ಮಾಮೂಲು. ಅದಕ್ಕೊಂದು ಉಪಕಥೆಯನ್ನೋ ಅಥವಾ ಇನ್ನೇನೋ ವಿಷ್ಯ ಸೇರಿಸಿ ಎಳೆಯುವುದು ಸರ್ವೇ ಸಾಮಾನ್ಯ. ಹಾಗೆಯೇ ಅಮೃತಧಾರೆಗೆ ಈಗ ಟ್ವಿಸ್ಟ್​ ನೀಡಲಾಗಿದೆ.

37
ಗೌತಮ್​ ರಾಜೀನಾಮೆ

ಒಂದೆಡೆ ಗೌತಮ್​, ತನ್ನ ಡ್ರೈವರ್​ ಕೆಲಸಕ್ಕೆ ರಾಜೀನಾಮೆ ಕೊಟ್ಟಿದ್ದು, ಅಮ್ಮನ ಮಾತಿನಂತೆ ಜೀರೋದಿಂದ ಸಾಮ್ರಾಜ್ಯ ಕಟ್ಟಲು ಹೊರಟಿದ್ದಾನೆ. ಮಲ್ಲಿಯ ಅಪಾರ ಆಸ್ತಿಯೂ ತನಗೆ ಬೇಡ ಎಂದಿರೋ ಗೌತಮ್​, ಸ್ವ ಪ್ರಯತ್ನದಿಂದ ಹೊಸ ಪ್ರಯತ್ನಕ್ಕೆ ಕೈಹಾಕುತ್ತಿದ್ದಾನೆ. ಆದ್ದರಿಂದ ಸೀರಿಯಲ್​ ಇನ್ನೂ ವರ್ಷಗಟ್ಟಲೆ ಹೋದರೂ ಅಚ್ಚರಿಯೇನಿಲ್ಲ.

47
ಪ್ರೇಮಕ್ಕೆ ಕಣ್ಣಿಲ್ಲ...

ಅದೇ ಇನ್ನೊಂದೆಡೆ, ಮಲ್ಲಿ ಭೂಮಿಕಾ ವಿರುದ್ಧವೇ ತಿರುಗಿ ಬಿದ್ದಿದ್ದಾಳೆ. ಪ್ರೇಮಕ್ಕೆ ಕಣ್ಣಿಲ್ಲ ಎನ್ನುವ ಮಾತಿದೆ. ಅದೇ ಈಗ ಪ್ರೇಮಕ್ಕೆ, ಕಣ್ಣು ಅಷ್ಟೇ ಅಲ್ಲ, ಮೂಗು, ಬಾಯಿ , ಕೈ-ಕಾಲು ಏನೂ ಇಲ್ಲ ಎಂದು ಹಾಸ್ಯದ ರೂಪದಲ್ಲಿ ಹೇಳುವುದೂ ಇದೆ. ಅದೇ ರೀತಿ ಸದ್ಯ ಮಲ್ಲಿಯ ಸ್ಥಿತಿಯಾಗಿದೆ.

57
ಪುಡಿ ರೌಡಿ ಮೇಲೆ ಲವ್​

ಜೈದೇವ್​ ಬಿಟ್ಟ ಪುಡಿ ರೌಡಿ, ಮಲ್ಲಿಯನ್ನು ಪ್ರೀತಿ ಮಾಡ್ತಾನೋ, ನಾಟಕ ಮಾಡ್ತಿದ್ದಾನೋ ಗೊತ್ತಿಲ್ಲ. ಆದರೆ, ಭೂಮಿಕಾಗೆ ಈಗ ಮಲ್ಲಿ ಲವ್​ನಲ್ಲಿ ಬಿದ್ದಿರೋ ಸಂಗತಿ ತಿಳಿದಿದೆ. ಮಲ್ಲಿಗೆ ಮತ್ತೊಂದು ಮದುವೆ ಮಾಡುವ ಆಸೆ ಅವಳಿಗೂ ಇದೆ. ಆದರೆ ಮಲ್ಲಿ ಮತ್ತೆ ಮೋಸ ಹೋಗಬಾರದು ಎನ್ನುವುದು ಅವಳ ಆಸೆ ಅಷ್ಟೇ.

67
ಭೂಮಿಕಾ ಪತ್ತೆದಾರಿಕೆ

ಇದಕ್ಕಾಗಿಯೇ ಮಲ್ಲಿ ಪ್ರೀತಿಸ್ತಿರೋ ಹುಡುಗ ಯಾರು ಎಂದು ನೋಡಲು ಆಕೆ ಪತ್ತೆದಾರಿಕೆ ಶುರುವಿಟ್ಟುಕೊಂಡಿದ್ದಾಳೆ. ಇದು ಮಲ್ಲಿಗೆ ತಿಳಿದು ಕೋಪಗೊಂಡಿದ್ದಾಳೆ. ಕೋಪದಿಂದ ಮನೆಗೆ ಬಂದ ಆಕೆ, ನಿಮಗೆ ಏನಾದರೂ ಕೇಳುವುದಿದ್ದರೆ ನನಗೇ ನೇರವಾಗಿ ಕೇಳಬಹುದಿತ್ತಲ್ಲ. ಹೀಗೆಲ್ಲಾ ಕದ್ದು ಮುಚ್ಚಿ ಬರುವ ಅಗತ್ಯ ಏನಿತ್ತು ಎಂದು ಜೋರು ದನಿಯಲ್ಲಿ ಭೂಮಿಕಾಳನ್ನು ಪ್ರಶ್ನಿಸಿದ್ದಾಳೆ.

77
ಮೂಡುತ್ತಾ ಬಿರುಕು?

ಅದಕ್ಕೆ ಭೂಮಿಕಾ, ಮಲ್ಲಿಗೆ ನೀನು ಇದಾಗಲೇ ಜೈದೇವನಿಂದ ಮೋಸ ಹೋಗಿರುವೆ. ಮತ್ತೆ ನಿನ್ನ ಜೀವನದಲ್ಲಿ ತಪ್ಪು ಆಗುವುದು ಇಷ್ಟವಲ್ಲ, ಅದಕ್ಕಾಗಿಯೇ ಎಂದಿದ್ದರೂ, ಮಲ್ಲಿಗೆ ಅದನ್ನು ಸಹಿಸಿಕೊಳ್ಳಲು ಆಗುತ್ತಿಲ್ಲ. ಆಕೆ ರೇಗಿ ಹೋಗಿ ಭೂಮಿಕಾ ವಿರುದ್ಧವೇ ತಿರುಗಿ ಬಿದ್ದಿದ್ದಾಳೆ. ಅವರಿಬ್ಬರ ನಡುವೆ ಬಿರುಕು ಮೂಡುತ್ತದೆಯೇ ಎನ್ನುವ ಪ್ರಶ್ನೆ ಕಾಡುತ್ತಿದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories