5 ವರ್ಷದ ಹಿಂದೆಯೇ ಮದುವೆಯಾಗಿರೋ Nanda Gokula Serial ಪ್ರಿಯಾ; ರಿಯಲ್‌ ಪತಿ ಯಾರು?

Published : Feb 12, 2026, 12:12 PM IST

Nanda Gokula Kannada Serial Priya: ನಂದಗೋಕುಲ ಧಾರಾವಾಹಿಯಲ್ಲಿ ಪ್ರಿಯಾ ಪಾತ್ರದಿಂದ ಇಡೀ ಮನೆಗೆ ಸಮಸ್ಯೆ ಆಗುವ ಎಲ್ಲ ಲಕ್ಷಣ ಕಾಣುತ್ತಿದೆ. ನಂದಕುಮಾರ್‌ ಆರಿಸಿದ ಈ ಸೊಸೆಯು ಮನೆಗೆ ಕೊಳ್ಳಿ ಇಡುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಪ್ರಿಯಾ ಪಾತ್ರಧಾರಿ ಯಾರು?

PREV
18
ಪ್ರಿಯಾ ಪಾತ್ರಧಾರಿ ಯಾರು?

ಪ್ರಿಯಾ ಪಾತ್ರಧಾರಿಯ ರಿಯಲ್‌ ಹೆಸರು ಅರ್ಪಿತಾ ಗೌಡ. ಅರ್ಪಿತಾ ಗೌಡ ಅವರು ಈ ಹಿಂದೆಯೂ ಕೆಲ ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಶಿವಮೊಗ್ಗದ ಕುವೆಂಪು ಯನಿವರ್ಸಿಟಿಯಲ್ಲಿ ಅವರು ಓದಿದ್ದಾರೆ.

28
ಸತ್ಯ ಧಾರಾವಾಹಿಯಲ್ಲಿ ನಟನೆ

ಅರ್ಪಿತಾ ಗೌಡ ಅವರು ಈ ಹಿಂದೆ ಸತ್ಯ ಧಾರಾವಾಹಿಯಲ್ಲಿ ಸತ್ಯ ಪಾತ್ರಧಾರಿಯ ಜೊತೆಗೆ ಇರುವಂಥ ಪಾತ್ರ ಮಾಡಿದ್ದರು. ಕಾನ್‌ಸ್ಟೇಬಲ್‌ ಪಾತ್ರದಲ್ಲಿ ಅವರು ಕಾಣಿಸಿದ್ದರು.

38
ನೂರು ಜನ್ಮಕೂ ಧಾರಾವಾಹಿ

ನಟ ಧನುಷ್‌ ಗೌಡ ನಟನೆಯ ನೂರು ಜನ್ಮಕೂ ಧಾರಾವಾಹಿಯಲ್ಲಿ ಕೂಡ ಅರ್ಪಿತಾ ಗೌಡ ನಟಿಸಿದ್ದರು. ಈ ಸೀರಿಯಲ್‌ ಅಷ್ಟು ದಿನಗಳ ಕಾಲ ಪ್ರಸಾರ ಆಗಿರಲಿಲ್ಲ.

48
ಪೋಷಕ ಪಾತ್ರ

ಪ್ರಿಯಾ ಅವರು ಇಲ್ಲಿಯವರೆಗೆ ಪೋಷಕ ಪಾತ್ರಗಳಲ್ಲಿ ಹೆಚ್ಚಾಗಿ ನಟಿಸಿದ್ದಾರೆ. ಆದರೆ ನಂದಗೋಲಕುಲ ಧಾರಾವಾಹಿ ಇವರಿಗೆ ಜನಪ್ರಿಯತೆ ತಂದುಕೊಟ್ಟಿದೆ.

58
ಮದುವೆ ಆಗಿದೆ

ಅರ್ಪಿತಾ ಗೌಡ ಅವರು ಮದುವೆಯಾಗಿ ಐದು ವರ್ಷ ಕಳೆದಿದೆ. ಹೌದು, ಈ ಬಗ್ಗೆ ಅವರು ಸೋಶಿಯಲ್‌ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.

68
ಅರ್ಪಿತಾ ಗೌಡ ಪತಿ ಯಾರು?

ಅರ್ಪಿತಾ ಗೌಡ ಅವರ ಪತಿ ಹೆಸರು ಹೇಮಂತ್‌ ಶ್ರೀನಿವಾಸ್.‌ ಇವರ ವೃತ್ತಿ ಏನು? ಎಲ್ಲಿಯವರು ಎಂಬ ಬಗ್ಗೆ ಮಾಹಿತಿ ಇಲ್ಲ.

78
ಸಿನಿಮಾಗಳಲ್ಲಿ ನಟನೆ

ಮನ ಮಂಥನ, ವಿಜಯರಥ ಎನ್ನುವ ಸಿನಿಮಾಗಳಲ್ಲಿ ಕೂಡ ಅವರು ನಟಿಸಿದ್ದಾರೆ.

88
ಪಾತ್ರ ಹೇಗೆ ಸಾಗಲಿದೆ?

ನಂದಗೋಕುಲ ಧಾರಾವಾಹಿಯಲ್ಲಿ ಪ್ರಿಯಾ ಪಾತ್ರವನ್ನು ನೆಗೆಟಿವ್‌ ಮಾಡಬೇಡಿ, ಸಂಸಾರ ಹಾಳು ಮಾಡೋ ಸೊಸೆ ಬೇಡ ಎಂದು ವೀಕ್ಷಕರು ಕಾಮೆಂಟ್‌ ಮಾಡುತ್ತಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories