Bigg Boss Kannada Season 12 Episode Update: ಬಿಗ್ ಬಾಸ್ ಕನ್ನಡ ಸೀಸನ್ 12 ಶೋನಲ್ಲಿ ವಿಲನ್ ಅಬ್ಬರ ಜೋರಾಗಿದೆ. ಕಾವ್ಯ ಶೈವ ಹಾಗೂ ಗಿಲ್ಲಿ ನಟನ ನಡುವೆ ಮನಸ್ತಾಪ ಶುರುವಾಗಿತ್ತು. ಈಗ ಕಾವ್ಯ ಶೈವ ಹಾಗೂ ರಕ್ಷಿತಾ ಮಧ್ಯೆ ಜಗಳ ಹತ್ತಿಕೊಂಡಿದೆ. ಇದಕ್ಕೆ ಕಾರಣ ಏನು?
ಕಾವ್ಯ ಶೈವ ಅವರು ಗಿಲ್ಲಿ ನಟ ಅವರನ್ನು ನಾಮಿನೇಟ್ ಮಾಡಿದ್ದರು. “ನಾನು ಎಷ್ಟೇ ಹೇಳಿದರೂ ಕೂಡ ಗಿಲ್ಲಿ ನಟ ನನ್ನನ್ನು ರೇಗಿಸುತ್ತಾರೆ, ಇದರಿಂದ ಏನೆಲ್ಲ ಸಮಸ್ಯೆ ಆಗುತ್ತದೆ ಎಂದು ಕೂಡ ಹೇಳಿದ್ದೇನೆ. ಆದರೆ ಅವರು ಕೇಳಲಿಲ್ಲ. ಮತ್ತೆ ಹೇಳಿದರೂ ಕೂಡ ಕ್ಷಮೆ ಕೇಳ್ತಾರೆ, ಆದರೆ ಗಂಭೀರತೆ ಏನೆಂದು ಗೊತ್ತಾಗಬೇಕು” ಎಂದು ಕಾರಣ ನೀಡಿ ನಾಮಿನೇಟ್ ಮಾಡಿದ್ದರು.
25
ರಕ್ಷಿತಾ ಶೆಟ್ಟಿ ಈ ಮನೆಯ ವಿಲನ್
ಅಂದಹಾಗೆ ಕಾವ್ಯ ಶೈವ ಅವರು ರಕ್ಷಿತಾ ಶೆಟ್ಟಿಗೆ ಈ ಮನೆಯ ವಿಲನ್ ಎಂಬ ಪಟ್ಟ ನೀಡಿದ್ದಾರೆ. ಈ ಮನೆಯ ವಿಲನ್ ಯಾರು ಎಂದು ಬಿಗ್ ಬಾಸ್ ಟಾಸ್ಕ್ ಕೊಟ್ಟಿದ್ದರು. ಅದಕ್ಕೆ ಸ್ಪರ್ಧಿಗಳು ಉತ್ತರ ಕೊಡಬೇಕಿತ್ತು. ಕಾವ್ಯ ಶೈವ ಅವರು ಗಿಲ್ಲಿ ನಟ, ರಕ್ಷಿತಾ ಶೆಟ್ಟಿಯನ್ನು ವಿಲನ್ ಎಂದು ಹೇಳಿದ್ದಾರೆ.
35
ರಕ್ಷಿತಾ ಕನ್ನಿಂಗ್ ಅನಿಸ್ತು
“ಒಂದೊಂದು ವ್ಯಕ್ತಿಗೆ ಒಂದೊಂದು ಫಾರ್ಮುಲಾ ಬಳಸ್ತಾರೆ. ಭಾಷೆ, ಪರ್ಸನಾಲಿಟಿ ಏನಿದೆ ಅದು ಅವಳ ತಂತ್ರವಾಗಿದೆ. ಕನ್ನಿಂಗ್ ಅನಿಸ್ತು, ವಾದವನ್ನು ಅರ್ಧ ಮಾಡಿ ಓಡಿ ಹೋಗೋದಿಲ್ಲ. ನಿನ್ನ ಥರ ನಾನು ಓವರ್ ಡ್ರಾಮಾಟಿಕ್ ಅಲ್ಲ” ಎಂದು ರಕ್ಷಿತಾ ಶೆಟ್ಟಿ ಅವರು ಕಾವ್ಯ ಶೈವಗೆ ಹೇಳಿದ್ದಾರೆ.
“ನೀವು ರಿಯಲ್ ಆಗಿ ಕನ್ನಿಂಗ್, ನೀವು ರಿಯಲ್ ಕಾವ್ಯ ಅಲ್ಲ” ಎಂದು ರಕ್ಷಿತಾ ಶೆಟ್ಟಿ ಹೇಳಿದ್ದಾರೆ. ಅಂದಹಾಗೆ ಇನ್ನು ಕೆಲವರು ರಕ್ಷಿತಾ ಶೆಟ್ಟಿಗೆ ವಿಲನ್ ಎಂಬ ಪಟ್ಟ ಕೊಟ್ಟಿದ್ದಾರೆ. ಉಳಿದವರು ಏನೇನು ಕಾರಣ ನೀಡಿದ್ದಾರೆ ಎನ್ನೋದು ಇಂದಿನ ಸಂಚಿಕೆಯಲ್ಲಿ ಗೊತ್ತಾಗಲಿದೆ.
55
ಪ್ರಿ ಪ್ರೊಡಕ್ಟ್ ಕಾವ್ಯ ಶೈವ
“ಗಿಲ್ಲಿ ನಟ ಅವರು ನನಗೆ ಪ್ರಿ ಪ್ರೊಡಕ್ಟ್, ಈ ಮನೆಯಲ್ಲಿ ನಾನು ಮೇಕಪ್ ಮಾಡಿಕೊಂಡು ಓಡಾಡ್ತೀನಿ, ಏನೂ ಮಾಡಿಲ್ಲ. ನಾನು ತುಂಬ ಲಕ್ಕಿ. ನಿನ್ನ ಜೊತೆ ನಾನು ಇರಬಾರದಿತ್ತು, ಒಂಟಿಯಾಗಿ ಹೋಗಬೇಕಿತ್ತು ಎಂದೆಲ್ಲ ಹೇಳಿದ್ದರು. ಇಷ್ಟು ದಿನ ಇದನ್ನೆಲ್ಲ ಮನಸ್ಸಿಲ್ಲಿಟ್ಟುಕೊಂಡು ಏನೂ ಹೇಳದೆ ಈಗ ಹೇಳುತ್ತಿದ್ದಾರೆ” ಎಂದು ಕಾವ್ಯ ಶೈವ ಕಾರಣ ನೀಡಿದ್ದಾರೆ ಎನ್ನಲಾಗಿದೆ.