Amruthadhaare Serial: ಅಮೃತಧಾರೆ ಧಾರಾವಾಹಿಯಲ್ಲಿ ಇದೀಗ ಮಾವ ಲಕ್ಷ್ಮೀಕಾಂತ ಸಂಪೂರ್ಣವಾಗಿ ಬದಲಾಗಿದ್ದಾರೆ. ತನ್ನನ್ನು ಕಡೆಗಣಿಸಿದ ತಂಗಿ ಶಕುಂತಲಾ ಮತ್ತು ಜೈದೇವ್ ಪ್ಲ್ಯಾನ್ ಗಳನ್ನು ಆನಂದ್ ಗೆ ತಿಳಿಸುತ್ತಿದ್ದಾರೆ. ಆದರೆ ವೀಕ್ಷಕರಿಗೆ ಇನ್ನೂ ಕೂಡ ಶಕುನಿ ಮಾವನ ಮೇಲೆ ಡೌಟ್.
ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಅಮೃತಧಾರೆ ಧಾರಾವಾಹಿಯಲ್ಲಿ ಇದೀಗ ಜೈಲಿನಿಂದ ಹೊರ ಬಂದ ಬಳಿಕ ಲಕ್ಷ್ಮೀ ಕಾಂತ ಸಂಪೂರ್ಣವಾಗಿ ಬದಲಾಗಿದ್ದಾರೆ. ಗೌತಮ್ ತನ್ನನ್ನು ಜೈಲಿನಿಂದ ಬಿಡಿಸಿದ್ದು, ಶಕುಂತಲಾ ಮತ್ತು ಜೈದೇವ್ ಜೈಲಿನ ಕಡೆ ಮುಖ ಮಾಡಿಯೂ ನೋಡಿಲ್ಲ ಎಂದು ತಿಳಿದ ಮೇಲಂತೂ ಮತ್ತಷ್ಟು ಬದಲಾಗಿದ್ದಾರೆ.
26
ಶಕುನಿ ಮಾವ ಲಕ್ಷ್ಮೀಕಾಂತ
ಅಲ್ಲಿಂದ ಇಲ್ಲಿಗೆ ಫಿಟ್ಟಿಂಗ್ ಇಡುತ್ತಾ, ಶಕುನಿಯಂತೆ ವರ್ತಿಸುತ್ತಿದ್ದ ಲಕ್ಕಿ ಲಕ್ಷ್ಮೀಕಾಂತ ಇದೀಗ ತನಗೆ ದ್ರೋಹ ಬಗೆದ ಅಕ್ಕನಿಗೆ ಮತ್ತು ಜೈಗೆ ಸರಿಯಾಗಿ ಬುದ್ದಿ ಕಲಿಸಲು, ಗೌತಮ್-ಭೂಮಿಕರನ್ನು ಅಪಾಯದಿಂದ ಕಾಪಾಡಲು ತನ್ನಿಂದ ಏನು ಸಾಧ್ಯವೋ ಅದೆಲ್ಲವನ್ನೂ ಮಾಡುತ್ತಿದ್ದಾರೆ.
36
ಆನಂದ್ ಮುಂದೆ ಲಕ್ಷ್ಮೀಕಾಂತ
ಇದೀಗ ಆನಂದ್ ನ ಭೇಟಿಯಾಗಿರುವ ಲಕ್ಷ್ಮೀ ಕಾಂತ, ಆನಂದ್ ಬಳಿ ಕ್ಷಮೆ ಕೇಳಿ, ತಾನು ಬದಲಾಗಿದ್ದೇನೆ ಎನ್ನುವುದನ್ನು ನಂಬಿಸಿ. ಮಲ್ಲಿಯನ್ನು ಜೈದೇವ್ ಬೆಂಗಳೂರಲ್ಲಿ ನೋಡಿರೋದಾಗಿಯೂ, ಆಕೆ ಸಿಕ್ಕರೆ ಭೂಮಿಕಾಳನ್ನು ಹಿಡಿಯುವುದಾಗಿಯೂ ಜೈದೇವ್ ಹೇಳಿರೋದಾಗಿ ಲಕ್ಷ್ಮೀಕಾಂತ ತಿಳಿಸಿದ್ದಾರೆ.
ಆರಂಭದಲ್ಲಿ ಲಕ್ಷ್ಮೀಕಾಂತ್ ಮಾತಿನ ಮೇಲೆ ಆನಂದ್ ಗೂ ನಂಬಿಕೆ ಬರೋದಿಲ್ಲ. ಆದರೆ ಲಕ್ಷ್ಮೀಕಾಂತ ಹೇಳಿರೋದನ್ನೆಲ್ಲಾ ಕೇಳಿದ ಮೇಲೆ, ತನ್ನ ತಪ್ಪಿನ ಅರಿವಾಗಿ ಕ್ಷಮಾಪಣೆ ಕೇಳಿದ ಮೇಲೆ ಆತನನ್ನು ನಂಬಿದ್ದಾನೆ ಆನಂದ್.
56
ಶಕುನಿ ಮಾವ ನಿಜವಾಗ್ಲೂ ಬದಲಾದ್ರ?
ಆದರೆ ಇದೀಗ ವೀಕ್ಷಕರಿಗೆ ಸಣ್ಣದೊಂದು ಸಂಶಯ ಮೂಡಿದೆ. ಈ ಶಕುನಿ ಮಾವ ನಿಜಕ್ಕೂ ಬದಲಾಗಿದ್ದಾರ? ಅಥವಾ ಬದಲಾಗಿರೋ ಥರ ನಾಟಕ ಮಾಡ್ತಿದ್ದಾರೆಯೇ? ಎನ್ನುವ ಡೌಟ್ ಇದೆ. ಕಾರಣ, ಮಲ್ಲಿ ಎಲ್ಲಿದ್ದಾಳೆ ಎಲ್ಲಿದ್ದಾಳೆ ಎಂದು ಪದೇ ಪದೇ ಲಕ್ಷ್ಮೀಕಾಂತ್ ಕೇಳುತ್ತಿರೋದು.
66
ಮಲ್ಲಿ, ಭೂಮಿಕಾ ಸಿಕ್ಕ ಮೇಲೆ ಉಲ್ಟಾ ಹೊಡಿತಾರ ಮಾವ
ಈಗ ಮಲ್ಲಿ ಭೂಮಿ ಬಗ್ಗೆ ಆತಂಕ ವ್ಯಕ್ತಪಡಿಸುವ ಲಕ್ಷ್ಮೀಕಾಂತ ಅವರು ಸಿಕ್ಕಿದ ಮೇಲೆ ಬದಲಾಗುತ್ತಾರಾ? ನೇರವಾಗಿ ಜೈದೇವ್ ಮುಂದೆ ತಂದು ನಿಲ್ಲಿಸುವ ಚಾನ್ಸ್ ಕೂಡ ಇದೆ ಎನ್ನುತ್ತಿದ್ದಾರೆ ವೀಕ್ಷಕರು. ಇನ್ನೂ ಕೆಲವರು ಖಂಡಿತಾ ಲಕ್ಷ್ಮೀಕಾಂತ್ ಒಳ್ಳೆಯವರಾಗಿದ್ದಾರೆ ಎನ್ನುತ್ತಿದ್ದಾರೆ. ಒಟ್ಟಲ್ಲಿ ಲಕ್ಷ್ಮೀಕಾಂತ್ ಬಗ್ಗೆ ತಿಳಿಯಲು ಮುಂದಿನ ಎಪಿಸೋಡ್ ಕಾದು ನೋಡಬೇಕು.