Amruthadhaare Serial: ವೀಕ್ಷಕರ ಆಸೆಗೆ ಸಮಾಧಿ ಕಟ್ಟಿದ ಭೂಮಿಕಾ; ನಿಜಕ್ಕೂ ತಲೆ ಇಲ್ವಾ? ಹೀಗೆ ಮಾಡೋದು ಸರಿನಾ?

Published : Nov 26, 2025, 08:15 AM IST

Amruthadhaare Serial Episode Update: ಅಮೃತಧಾರೆ ಧಾರಾವಾಹಿಯಲ್ಲಿ ಆಕಾಶ್‌ಗೆ ಗೌತಮ್‌ ತನ್ನ ಅಪ್ಪ ಎನ್ನೋ ಸತ್ಯ ಗೊತ್ತಾಗಿದೆ. ಇವರಿಬ್ಬರು ಇನ್ನಷ್ಟು ಹತ್ತಿರ ಆಗಿದ್ದಾರೆ. ಇದರ ಮೇಲೆ ಭೂಮಿ ಕಣ್ಣು ಬಿದ್ದಿದೆ. ಅದು ವೀಕ್ಷಕರಿಗೂ ಬೇಸರ ತಂದಿದೆ. ಹಾಗಾದರೆ ಮುಂದೆ ಏನಾಗುವುದು?

PREV
15
ತವರು ಮನೆಯವ್ರಿಗೆ ಗೊತ್ತೇ ಇಲ್ಲ

ಶಕುಂತಲಾ ಹೇಳಿದಂತೆ, ನಾನು ಗೌತಮ್‌ ಹಾಗೂ ಅವರ ಮನೆಯಿಂದ ದೂರ ಇದ್ದರೆ ಮಾತ್ರ ನನ್ನವರು ಚೆನ್ನಾಗಿ ಇರ್ತಾರೆ ಎಂದು ಭೂಮಿ ಹೆದರಿಕೊಂಡು ಎಲ್ಲರಿಂದ ದೂರ ಇದ್ದಾಳೆ. ಇದು ಗೌತಮ್‌ಗಾಗಲೀ, ಭೂಮಿ ತವರು ಮನೆಯವರಿಗೆ ಗೊತ್ತೇ ಇಲ್ಲ.

25
ವೀಕ್ಷಕರಿಗೆ ಬೇಸರ ಆಯ್ತು

ಆಕಾಶ್‌ ಹಾಗೂ ಮಿಂಚುಗೆ ಭೂಮಿ-ಗೌತಮ್‌ ಗಂಡ ಹೆಂಡತಿ ಎನ್ನೋದು ಗೊತ್ತಿದೆ. ಇದನ್ನು ಇವರು ಎಲ್ಲಿಯೂ ಹೇಳದೆ, ಈ ಜೋಡಿಯನ್ನು ಒಂದು ಮಾಡಬೇಕು ಎಂದು ಪಣ ತೊಟ್ಟಿದೆ. ಇದು ಯಾರಿಗೂ ಗೊತ್ತೇ ಇಲ್ಲ. ಹೀಗಿರುವಾಗ ಭೂಮಿ ವೀಕ್ಷಕರಿಗೆ ಬೇಸರ ಆಗುವಂತೆ ನಡೆದುಕೊಂಡಿದ್ದಾಳೆ.

35
ದ್ವೇಷ ಮಾಡೋಕೆ ಶುರು ಮಾಡ್ತಾನೆ

ಇತ್ತೀಚೆಗೆ ಗೌತಮ್‌ ಜೊತೆ ಆಕಾಶ್‌ ಕ್ಲೋಸ್‌ ಆಗಿರೋದು, ಅವರ ಮನೆಯಲ್ಲಿ ಊಟ-ತಿಂಡಿ ಮಾಡೋದು, ನಿದ್ದೆ ಮಾಡೋದು ಭೂಮಿಗೆ ಬೇಸರ ತಂದಿದೆ. ನಾಳೆ ಸತ್ಯ ಗೊತ್ತಾದರೆ ನನ್ನ ಮಗ ನನ್ನಿಂದ ದೂರ ಆಗ್ತಾನೆ, ನನ್ನನ್ನು ದ್ವೇಷ ಮಾಡೋಕೆ ಶುರು ಮಾಡ್ತಾನೆ ಎಂದು ಅವಳಿಗೆ ಭಯ ಆಗಿದೆ. ಹೀಗಾಗಿ ಅವಳು ಒಂದು ನಿರ್ಧಾರಕ್ಕೆ ಬಂದಿದ್ದಾಳೆ.

45
ನನ್ನನ್ನು ದ್ವೇಷ ಮಾಡ್ತಾನೆ

ಗೌತಮ್‌ ಬಳಿ ಈ ಬಗ್ಗೆ ಮಾತನಾಡಿರೋ ಭೂಮಿ, “ನೀವು, ಆಕಾಶ್‌ ಹತ್ತಿರ ಆಗ್ತಿದ್ದೀರಾ, ನೀವೆ ಅವನ ತಂದೆ ಎಂದು ಆಕಾಶ್‌ಗೆ ಗೊತ್ತಾದರೆ, ಅವನು ನನ್ನನ್ನು ದ್ವೇಷ ಮಾಡ್ತಾನೆ, ಅವನಿಂದ ದೂರ ಇರಿ” ಎಂದು ಹೇಳಿದ್ದಾಳೆ. ಇದು ಗೌತಮ್‌ ಮನಸ್ಸಿಗೆ ಬೇಸರ ತಂದಿದೆ.

55
ತನ್ನ ಮಗ ತನ್ನಿಂದ ದೂರ ಇರಬೇಕು

ತನ್ನ ಮಗ ತನ್ನಿಂದ ದೂರ ಇರಬೇಕು ಎಂದು ಗೌತಮ್‌, ಆಕಾಶ್‌ಗೆ ಬೇಸರ ತರೋ ಹಾಗೆ ನಡೆದುಕೊಳ್ಳಬಹುದು ಅಥವಾ ಅವಾಯ್ಡ್‌ ಮಾಡಬಹುದು. ಇದು ಅಪ್ಪು ಅಲಿಯಾಸ್‌ ಆಕಾಶ್‌ಗೆ ಬೇಸರ ತರಿಸಬಹುದು, ಅವನು ತಂದೆಯನ್ನು ತಪ್ಪಾಗಿ ತಿಳಿದುಕೊಂಡರೂ ಕೂಡ ಆಶ್ಚರ್ಯ ಇಲ್ಲ.

Read more Photos on
click me!

Recommended Stories