Bigg Boss Kannada: ನೀನ್ಯಾಕೆ ಎಲ್ಲರ ಪೇಮೆಂಟ್‌ ತಗೋತಿದ್ಯಾ? ಗಿಲ್ಲಿ ನಟನಿಗೆ ಡ್ರಿಲ್‌ ಮಾಡಿದ ಉಗ್ರಂ ಮಂಜು!

Published : Nov 26, 2025, 07:24 AM IST

BBK 12 Updates: ಬಿಗ್‌ ಬಾಸ್‌ ಮನೆಗೆ ಸೀಸನ್‌ 11 ಸ್ಪರ್ಧಿಗಳು, ಅತಿಥಿಗಳಾಗಿ ಎಂಟ್ರಿ ಕೊಟ್ಟಿದ್ದಾರೆ, ಆ ವೇಳೆ ಗಿಲ್ಲಿ ನಟನ ಕಾಮಿಡಿಯು ಅತಿರೇಕ ಆಗಿದೆ, ಲಿಮಿಟ್‌ ಮೀರಿದೆ ಎಂದು ಎಲ್ಲರಿಗೂ ಅನಿಸಿದೆ. ಆ ವೇಳೆ ರಜತ್‌, ಮಂಜು ಅವರು ತಿರುಗೇಟು ಕೊಟ್ಟಿದ್ದಾರೆ. ಹಾಗಾದರೆ ಅಂಥ ಪದಗಳು ಏನು ಮಾತಾಡಿದ್ರು? 

PREV
16
ಹೊಸ ಟಾಸ್ಕ್‌ ಕೊಟ್ಟ ಬಿಗ್‌ ಬಾಸ್‌

ಮ್ಯಾಕ್ಸ್‌ ಮಂಜು ಅವರು ಬ್ಯಾಚುಲರ್‌ ಪಾರ್ಟಿ ಮಾಡಲು ಬಿಗ್‌ ಬಾಸ್‌ ಮನೆಗೆ ಬಂದಿದ್ದಾರೆ ಎಂದು ಬಿಗ್‌ ಬಾಸ್‌ ಹೇಳಿದ್ದರು. ಉಳಿದಂತೆ ಸ್ಪರ್ಧಿಗಳು ಸಪ್ಲೈಯರ್‌ ಆಗಿದ್ದರು. ಹೀಗಾಗಿ ಅವರು ಅತಿಥಿಗಳ ಬೇಡಿಕೆಯಂತೆ ಸೇವೆ ನೀಡಬೇಕಿತ್ತು.

26
ಬೇಡಿಕೆಯಂತೆ ಸೇವೆ ನೀಡಬೇಕು

ಮ್ಯಾಕ್ಸ್‌ ಮಂಜು ಅವರು ಬ್ಯಾಚುಲರ್‌ ಪಾರ್ಟಿ ಮಾಡಲು ಬಿಗ್‌ ಬಾಸ್‌ ಮನೆಗೆ ಬಂದಿದ್ದಾರೆ ಎಂದು ಬಿಗ್‌ ಬಾಸ್‌ ಹೇಳಿದ್ದರು. ಉಳಿದಂತೆ ಸ್ಪರ್ಧಿಗಳು ಸಪ್ಲೈಯರ್‌ ಆಗಿದ್ದರು. ಹೀಗಾಗಿ ಅವರು ಅತಿಥಿಗಳ ಬೇಡಿಕೆಯಂತೆ ಸೇವೆ ನೀಡಬೇಕಿತ್ತು.

36
ಬಿಟ್ಟಿ ಊಟ ಮಾಡಲು ಬಂದಿದ್ದೀರಾ?

ಎಲ್ಲರೂ ನಾವು ಮಂಜು ಬ್ಯಾಚುಲರ್‌ ಪಾರ್ಟಿಗೆ ಬಂದಿದ್ದಾರೆ ಎಂದು ಹೇಳಿದ್ದರು. ಆಗ ಗಿಲ್ಲಿ ನಟ ಅವರು, “ಬಿಟ್ಟಿ ಊಟ ಮಾಡಲು ಬಂದಿದ್ದೀರಾ?” ಎಂದು ಹೇಳಿದ್ದರು. ಇದು ರಜತ್‌ಗೆ ಸಿಟ್ಟು ತರಿಸಿದೆ.

46
ನನ್ನ ಹತ್ರ ಮಾತನಾಡಬೇಡ

“ಮಾತುಗಳು ಕರೆಕ್ಟ್‌ ಆಗಿ ಬರಲಿ, ಎಲ್ರ ಹತ್ರ ಮಾತನಾಡಿದಂತೆ ನನ್ನ ಹತ್ರ ಮಾತನಾಡಬೇಡ, ನೀನು ಬಿಟ್ಟಿ ಊಟ ಕೊಡ್ತಿದ್ಯಾ? ನೀನು ಬಿಟ್ಟಿ ಊಟ ತಿನ್ನುತ್ತಿದ್ಯಾ?” ಎಂದು ರಜತ್‌ ಅವರು ಕೂಗಾಡಿದ್ದಾರೆ. “ನಾವು ಮರ್ಯಾದೆ ಕೊಡುತ್ತಿದ್ದೇವೆ. ನೋಡಿಕೊಂಡು ಮಾತಾಡಿ” ಎಂದು ತ್ರಿವಿಕ್ರಮ್‌ ಹೇಳಿದ್ದಾರೆ.

56
ಕೆಟ್ಟ ಕೋಪ ಬರುತ್ತದೆ

ಮತ್ತೆ ಈ ಬಗ್ಗೆ ತ್ರಿವಿಕ್ರಮ್‌ ಜೊತೆ ಮಾತನಾಡಿದ ರಜತ್‌ ಅವರು, “ಬಿಟ್ಟಿ ಊಟ ತಿನ್ನೋಕೆ ಬಂದಿದ್ದೀರಾ ಎಂದು ಕೇಳಿದೆ, ತಮಾಷೆ ಮಾಡಬೇಕು, ಆದರೆ ಲಿಮಿಟ್‌ ಮೀರಬಾರದು” ಎಂದಿದ್ದಾರೆ. ‘ಪುಕ್ಸಟ್ಟೆ ಮಾತಾಡೋಕೆ ನಾವು ಬಂದಿಲ್ಲ, ನನ್ನ ಹತ್ರ ಮಾತಾಡಬೇಡ, ಕೆಟ್ಟ ಕೋಪ ಬರುತ್ತದೆ, ಕೈ ಮುಗಿದು ಹೇಳಲಾ? ನಿಮ್ಮ ಹತ್ರ ಮಾತಾಡೋ ಯೋಗ್ಯತೆ ಇಲ್ಲ” ಎಂದು ಮಂಜು ಹೇಳಿದ್ದಾರೆ.

66
ಬಿಟ್ಟಿ ಊಟ ಅಂದೆ

“ನೀವು ನಮ್ಮ ಅಣ್ಣನ ಜನ್ಮದಿನ ಅಂದ್ರಿ. ನನ್ನ ಅಣ್ಣನ ಪಾರ್ಟಿಗೆ ಎಲ್ಲರೂ ಬಂದಿದ್ದೀರಿ ಅಂದ್ರಿ, ನಾನು ಕ್ಯಾರೆಕ್ಟರ್‌ನಲ್ಲಿದ್ದುಕೊಂಡು ಬಿಟ್ಟಿ ಊಟ ಅಂದೆ” ಎಂದು ಗಿಲ್ಲಿ ನಟ ಸಮಜಾಯಿಷಿ ನೀಡಿ ಪದೇ ಪದೇ ಕ್ಷಮೆ ಕೇಳಿದ್ದಾರೆ. ಆಮೇಲೆ ಮಂಜು ಅವರು, “ಪರ್ಸನಲ್‌ ಆಗಿ ಹೋಗಬೇಡ, ತಮಾಷೆ ಮಾಡು, ಹರ್ಟ್‌ ಆಗೋ ಥರ ಮಾತಾಡಬೇಡ” ಎಂದಿದ್ದಾರೆ.

Read more Photos on
click me!

Recommended Stories