Amruthadhaare Serial Update: ಎಲ್ಲರ ಬದುಕು ಬದಲಾಯಿಸುವಂಥ ಪತ್ರ ಗೌತಮ್‌ ಕೈಗೆ ಬಂತು! ಅದರಲ್ಲಿ ಏನಿದೆ?

Published : Jan 08, 2026, 07:17 AM IST

Amruthadhaare Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌, ಭೂಮಿಕಾ ಈಗ ಮಗಳನ್ನು ಹುಡುಕುವ ಯತ್ನದಲ್ಲಿದ್ದಾರೆ. ಇದಕ್ಕೆ ಮಕ್ಕಳು ಕೂಡ ಸಾಥ್‌ ಕೂಡ ನೀಡುತ್ತಿದ್ದಾರೆ. ಈ ಮಧ್ಯೆ ಗೌತಮ್‌ಗೆ ಒಂದು ಪತ್ರ ಸಿಕ್ಕಿದೆ. 

PREV
15
ಎಲ್ಲ ಸತ್ಯ ಗೊತ್ತಾಯ್ತು

ಗೌತಮ್‌ ಹಾಗೂ ಭೂಮಿ ತಮ್ಮ ಕೆಲಸಕ್ಕೆ ಬ್ರೇಕ್‌ ಹಾಕಿ, ಅಂದು ಹುಟ್ಟುತ್ತಲೇ ಕಳವಾದ ಮಗಳನ್ನು ಹುಡುಕುವ ಯತ್ನದಲ್ಲಿದ್ದಾರೆ. ಎಲ್ಲರಿಗೂ ಎಲ್ಲ ಸತ್ಯವೂ ಗೊತ್ತಾಗಿದೆ, ಯಾವಾಗ ಈ ಜೋಡಿ ಒಂದಾಗಲಿದೆಯೋ ಏನೋ!

25
ಲೆಟರ್‌ ಬಿಸಾಕಿದಳು

ಗೌತಮ್‌ಗೋಸ್ಕರ ಭೂಮಿ ಲವ್‌ ಲೆಟರ್‌ ಬರೆದಿದ್ದಾಳೆ. ಆ ಲೆಟರ್‌ ಜೊತೆಗೆ ಅವಳು ಪೊಲೀಸ್‌ ಸ್ಟೇಶನ್‌ಗೆ ಹೋಗಿದ್ದಳು. ಅಲ್ಲಿ ಬೇಕು ಅಂತಲೇ ಲೆಟರ್‌ನ್ನು ಬ್ಯಾಗ್‌ನಿಂದ ಬಿಸಾಕಿದ್ದಾಳೆ. ಆ ಪತ್ರವನ್ನು ಗೌತಮ್‌ ನೋಡಿದ್ದಾನೆ. ಅದನ್ನು ಅವನು ಓದಿದ್ದಾನೆ.

35
ಆ ಪತ್ರದಲ್ಲಿ ಏನಿದೆ?

ಆ ಪತ್ರದಲ್ಲಿ ಭೂಮಿಕಾ,  “ನಾನು ನಿಮ್ಮನ್ನು ಎಷ್ಟು ಪ್ರೀತಿಸ್ತಿದೀನಿ, ನಿಮಗೋಸ್ಕರ ಎಷ್ಟು ಹಂಬಲಿಸುತ್ತಿದ್ದೇನೆ, ನಾನು, ನೀವು, ಅಪ್ಪು, ಮಿಂಚು ಎಲ್ಲರೂ ಒಟ್ಟಿಗೆ ಬದುಕಬೇಕು, ಖುಷಿಯಾಗಿರಬೇಕು ಎಂಬ ಆಸೆಯಿದೆ” ಎಂದಿದ್ದಾಳೆ.

45
ಪ್ರೀತಿ ಹೇಳಿಕೊಂಡ ಭೂಮಿಕಾ

ಇನ್ನೊಂದು ಕಡೆ ಈ ಪತ್ರವನ್ನು ಓದಿ ಗೌತಮ್‌ ಖುಷಿಯಾಗುತ್ತಾನೆ, ಆಮೇಲೆ ಅವನು ಏನು ಮಾಡುತ್ತಾನೆ ಎಂದು ಕಾದು ನೋಡಬೇಕಿದೆ. ಇಷ್ಟು ಬೇಗ ಭೂಮಿ, ತನ್ನ ಪ್ರೀತಿಯನ್ನು ಗೌತಮ್‌ಗೆ ಹೇಳಿಕೊಂಡಿದ್ದಾಳೆ. ಹೀಗಾಗಿ ಮುಂದೆ ಏನಾಗಲಿದೆ ಎಂದು ಕಾದು ನೋಡಬೇಕಿದೆ.

55
ಗೌತಮ್‌ ಏನು ಮಾಡುತ್ತಾನೆ?

ಗೌತಮ್‌ ಈಗ ಭೂಮಿ ಪ್ರೀತಿಯನ್ನು ಒಪ್ಪದೆ ಸತಾಯಿಸುವ ಸಾಧ್ಯತೆ ಕೂಡ ಇದೆ. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಭಾರೀ ಕುತೂಹಲದಿಂದ ಕೂಡಿದೆ. ಇನ್ನು ಜಯದೇವ್‌ ಇವರ ಪ್ರೀತಿಗೆ ಕೊಳ್ಳಿ ಇಡಲೂಬಹುದು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories