Amruthadhaare Serial ನೋಡಿ ರವಿಚಂದ್ರನ್‌ ಸೂಪರ್‌ ಹಿಟ್‌ ಸಿನಿಮಾ ನೆನಪಿಸಿಕೊಂಡ ವೀಕ್ಷಕರು! ಯಾವ ಸಿನಿಮಾ?

Published : Sep 16, 2025, 03:06 PM IST

Amruthadhaare Kannada Serial: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್‌ ದಿವಾನ್‌ ಹಾಗೂ ಆಕಾಶ್‌ ಭೇಟಿಯಾಗಿದೆ. ಗೌತಮ್ಗೆ ತನ್ನ ಮಗ ಆಕಾಶ್‌ ಇವನೇ ಅಂತಾಗಲೀ, ಆಕಾಶ್‌ಗೆ ಇವರೇ ತನ್ನ ಅಪ್ಪ ಅಂತಾಗಲೀ ಇನ್ನೂ ಗೊತ್ತಾಗಿಲ್ಲ. ಹೀಗಿರುವಾಗ ಅಪ್ಪ-ಮಗ ಪದೇ ಪದೇ ಭೇಟಿ ಆಗುತ್ತಿದ್ದಾರೆ. 

PREV
15
ಗೌತಮ್-ಆಕಾಶ್‌ ಐಸ್‌ಕ್ರೀಂ ನಂಟು

ಐಸ್‌ಕ್ರೀಂ ಪಾರ್ಲರ್‌ ಮುಂದೆ ಆಕಾಶ್‌ ನಿಂತಿದ್ದನು. ಅದೇ ಸಮಯಕ್ಕೆ ಗೌತಮ್‌ ಹಾಗೂ ಆನಂದ್‌ ಅಲ್ಲಿಗೆ ಬರುತ್ತಾರೆ. ಆಕಾಶ್‌ ಜೊತೆ ಅವರು ಪಾರ್ಲರ್‌ ಒಳಗಡೆ ಹೋಗುತ್ತಾರೆ. ಐಸ್‌ಕ್ರೀಂ ಒಳಗಡೆ ಏನಾದರೂ ಮಿಕ್ಸ್‌ ಮಾಡಿ ಕೊಡಲ್ವಾ ಅಂತ ಆಕಾಶ್‌ ಪ್ರಶ್ನೆ ಮಾಡ್ತಾನೆ. ಆನಂದ್‌ ಆಗ, ಏನೂ ಇಲ್ಲ ಕಣೋ ಎಂದು ಹೇಳುತ್ತಾನೆ. ಒಟ್ಟಿನಲ್ಲಿ ಹೀಗೆ ಎಪಿಸೋಡ್‌ ಪ್ರಸಾರ ಆಗುವುದು. ಈ ಪ್ರೋಮೋ ನೋಡಿ ವೀಕ್ಷಕರು ಸೋಶಿಯಲ್‌ ಮೀಡಿಯಾದಲ್ಲಿ ಕಾಮೆಂಟ್‌ ಮಾಡಿದ್ದಾರೆ.

25
ಕುಶಾಲನಗರಕ್ಕೆ ಬಂದ ಗೌತಮ್

ಶಕುಂತಲಾ ತನ್ನ ಮಗಳನ್ನು ಸಾಯಿಸಿದಳು, ಇದೇ ಮನೆಯಲ್ಲಿದ್ದರೆ ಮಗನಿಗೂ ಅಪಾಯ ಮಾಡ್ತಾಳೆ ಅಂತ ಭೂಮಿಕಾ ತನ್ನ ಮಗನನ್ನು ಕರೆದುಕೊಂಡು ಕುಶಾಲನಗರದಲ್ಲಿದ್ದಾಳೆ. ಅವಳು ಎಲ್ಲಿದ್ದಾಳೆ ಅಂತ ಯಾರಿಗೂ ಗೊತ್ತಿಲ್ಲ. ಶಕುಂತಲಾ ಬಣ್ಣ ಏನು ಅಂತ ಗೌತಮ್‌ಗೆ ಗೊತ್ತಾಯ್ತು. ಗೌತಮ್‌ ಈಗ ಭೂಮಿಕಾಳನ್ನು ಹುಡುಕಿಕೊಂಡು ಕುಶಾಲನಗರಕ್ಕೆ ಬಂದಿದ್ದಾನೆ. ಅಲ್ಲಿ ಆಕಾಶ್‌ ಹಾಗೂ ಗೌತಮ್‌ ಭೇಟಿಯಾಗಿದೆ.

35
ಸೋಶಿಯಲ್‌ ಮೀಡಿಯಾದಲ್ಲಿ ವೀಕ್ಷಕರು ಹೇಳಿದ್ದೇನು?
  • ಅಪ್ಪ ಮಗ ತಿನ್ನೋದರಲ್ಲಿ ಎತ್ತಿದ ಕೈ
  • ಒಂತರ ಮೊದಲು ಮಗನಿಗೆ ಪರಿಚಯ ಆಗಿ ನಂತರ ಅಮ್ಮನನ್ನು ಭೇಟಿಯಾಗುವ ಕ್ಷಣ
  • ಇದು ಯಾಕೋ ಮನೆ ದೇವ್ರು ಸಿನಿಮಾ ಥರ ಹೋಗ್ತಾ ಇದೆಯಲ್ಲ
  • ರೀಲ್ ಅಪ್ಪ ಮತ್ತು ರಿಯಲ್ ಅಪ್ಪ ಮಗನ ಜೊತೆ ಐಸ್ ಕ್ರೀಮ್ ತಿನ್ನೋದು
  • Real ಅಪ್ಪ reel ಅಪ್ಪ ಇಬರು ಒಂದೇ ಕಡೆ
  • ಅಪ್ಪ ಮಗ ಸರಿ ಇದೆ ಜೋಡಿ, ತಿನ್ನೋದ್ರಲ್ಲಿ ಮುಂದೆ, ಏನೇ ಆದ್ರೂ ತಿನ್ನೋದ್ ಮಾತ್ರ ನಿಲ್ಲಿಸಬಾರದು, ತಿಂತಾನೆ ಇರಬೇಕು
45
ಮುಂದೆ ಏನಾಗುವುದು?

ಈ ಸೀರಿಯಲ್‌ ಎಪಿಸೋಡ್‌ಗಳನ್ನು ನೋಡಿದ ವೀಕ್ಷಕರು, ಮನೆದೇವ್ರು ಸಿನಿಮಾ ನೆನಪಿಸಿಕೊಂಡಿದ್ದಾರೆ. ಗೌತಮ್‌ ದಿವಾನ್‌ ಹಾಗೂ ಭೂಮಿಕಾ ಭೇಟಿ ಆಗಲೂಬಹುದು. ಆಮೇಲೆ ಇವರಿಬ್ಬರು ಒಂದಾಗಿ ಶಕುಂತಲಾ-ಜಯದೇವ್‌ ವಿರುದ್ಧ ಹೋರಾಡಲೂಬಹುದು. ಜಯದೇವ್‌ ಈಗಾಗಲೇ 600 ಕೋಟಿ ರೂಪಾಯಿ ಸಾಲ ಮಾಡಿದ್ದಾನೆ. ಅದನ್ನು ಪರಿಹಾರ ಮಾಡೋಕೆ ಗೌತಮ್‌ ಬರಬೇಕಾಗಿ ಬರಬಹುದು. ಒಟ್ಟಿನಲ್ಲಿ ಮುಂಬರುವ ಎಪಿಸೋಡ್‌ಗಳು ಕುತೂಹಲದಿಂದ ಕೂಡಿವೆ.

55
ಆಕಾಶ್-ಭೂಮಿ ಕಾಂಬಿನೇಶನ್‌

ಆಕಾಶ್‌ ಪಾತ್ರದಲ್ಲಿ ದುಷ್ಯಂತ್‌ ಚಕ್ರವರ್ತಿ ಅವರು ನಟಿಸುತ್ತಿದ್ದಾರೆ. ನಟ ಸಿಲ್ಲಿಲಲ್ಲಿ ಆನಂದ್‌ ಅವರ ಮಗನೇ ದುಷ್ಯಂತ. ಒಟ್ಟಿನಲ್ಲಿ ಅಪ್ಪ-ಮಗ ಒಂದೇ ಧಾರಾವಾಹಿಯಲ್ಲಿ ನಟಿಸುತ್ತಿರೋದು ವೀಕ್ಷಕರಿಗೆ ಖುಷಿ ಕೊಟ್ಟಿದೆ. ಈಗ ಆಕಾಶ್‌ ಹಾಗೂ ಭೂಮಿ ಕಾಂಬಿನೇಶನ್‌ ಕೂಡ ಅನೇಕರಿಗೆ ಖುಷಿ ಕೊಟ್ಟಿದೆ. 

Read more Photos on
click me!

Recommended Stories