Lakshmi Nivasa Serial: ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ಹೀರೋ ಸಿದ್ದೇಗೌಡ್ರ ತಾಯಿ ರೇಣುಕಾ ಪಾತ್ರದಲ್ಲಿ ಅಂಜಲಿ ನಟಿಸುತ್ತಿದ್ದಾರೆ. ರೇಣುಕಾ ಪಾತ್ರದ ಮೇಲೆ ಅವರಿಗೆ ಅಸಮಾಧಾನ ಇದೆಯಂತೆ. ಈ ಬಗ್ಗೆ ಅವರು ಇತ್ತೀಚೆಗೆ ಮಾಧ್ಯಮದ ಜೊತೆ ಮಾತನಾಡಿದ್ದಾರೆ.
“ಆರಂಭದಲ್ಲಿ ಲಕ್ಷ್ಮೀ ನಿವಾಸ ಧಾರಾವಾಹಿಯಲ್ಲಿ ನನ್ನ ಪಾತ್ರದ ಬಗ್ಗೆ ಬೇರೆ ಹೇಳಿದ್ದರು. ಈ ಮಟ್ಟಕ್ಕೆ ಹೇಳಿರಲಿಲ್ಲ. ನಿರ್ಮಲಾ ಚೆನ್ನಪ್ಪ ಅವರು ಬೇರೆ ಥರ ಹೇಳಿದ್ದರು. ಮೊದಲೇ ಪಾತ್ರ ಹೇಗಿದೆ ಅಂತ ಹೇಳಿಬಿಡಿ, ನೀವು ಪಾತ್ರ ಹೇಳಿದಾಗ ಕಲಾವಿದರು ಇಷ್ಟ ಆದರೆ ಒಪ್ಕೋತಾರೆ. ಯಾವ ಮನೆಯವರು ಅಥವಾ ಕಲಾವಿದರು ಇದ್ದಾರೆ ಅಂತ ನೋಡಿ ಅದರ ಮೇಲೆ ಕಥೆ ಬರೆಯುತ್ತಾರೆ, ಆಗ ಬೇರೆ ಪಾತ್ರಕ್ಕೆ ಹೊಡೆತ ಬೀಳತ್ತೆ ಅಂತ ಯೋಚನೆ ಮಾಡೋದಿಲ್ಲ” ಎಂದು ಅಂಜಲಿ ಹೇಳಿದ್ದಾರೆ.
25
ರೇಣುಕಾಗೆ ಯಾಕೆ ಅಷ್ಟು ದ್ವೇಷ?
“ಕಲಾವಿದರು, ಪ್ರೊಡಕ್ಷನ್, ಸಂಭಾವನೆ ಸಮಸ್ಯೆ ಅಂತ ಒಂದಿಷ್ಟು ಸಮಸ್ಯೆ ಇರುತ್ತದೆ. ಹೀಗಾಗಿ ಪಾತ್ರದ ಬಗ್ಗೆ ನೆಗೆಟಿವ್ ಬರೆದುಕೊಂಡು ಹೋಗುತ್ತಾರೆ. ಈ ವಿಚಾರಕ್ಕೆ ವೈಮನಸ್ಸು ಆಗುತ್ತದೆ. ನೀಲು ಪಾತ್ರಕ್ಕೆ ಹಳೇ ದ್ವೇಷ ಇದೆಯಂತೆ. ರೇಣುಕಾಗೆ ಯಾಕೆ ಸೊಸೆ ಮೇಲೆ ಅಷ್ಟು ದ್ವೇಷ ಇರುತ್ತದೆ ಅಂತ ಕೇಳಿದ್ದೆ.ತುಂಬ ಇಷ್ಟಪಡುವ ಮಗ, ಅವನಿಗಿಂತ ದೊಡ್ಡವಳನ್ನು ಮದುವೆ ಆದ ಅಂತ ರೇಣುಕಾಗೆ ಸಿಟ್ಟಾಗಿತ್ತು. ಆದರೆ ಇಷ್ಟು ದ್ವೇಷ ಯಾಕೆ ಅಂತ ನಾನು ಕೇಳಿದ್ದೆ” ಎಂದು ಅಂಜಲಿ ಹೇಳಿದ್ದಾರೆ.
35
ಪಾತ್ರದ ಶೇಡ್ ಬದಲಾಗತ್ತೆ
“ಪಾತ್ರದ ವಿಚಾರವಾಗಿ ನಾನು ವಾದ ಮಾಡ್ತೀನಿ, ಮುಂದಿನ ದಿನಗಳಲ್ಲಿ ಈ ಪಾತ್ರದ ಕಥೆಯನ್ನು ಚೇಂಜ್ ಮಾಡ್ತೀನಿ ಅಂತ ವಾಹಿನಿಯವರು ಭರವಸೆ ಕೊಟ್ಟಿದ್ದಾರೆ” ನಾನು ನಟಿಸಿರುವ ಎಲ್ಲ ಧಾರಾವಾಹಿ ಸೆಟ್‌ಗಳು ನನ್ನ ಕುಟುಂಬದ ಥರ ಇವೆ. ನಿಜಕ್ಕೂ ಇಂಥ ಬಳಗವನ್ನು ಪಡೆಯಲು ಖುಷಿ ಆಗುವುದು” ಎಂದು ಅಂಜಲಿ ಹೇಳಿದ್ದಾರೆ.
ಅಂದಹಾಗೆ ಅಂಜಲಿ ಅವರು ನಟಿ ಮಾನಸಾ ಮನೋಹರ್ ಜೊತೆಗೆ ರೀಲ್ಸ್ ಮಾಡಿ ಫೇಮಸ್ ಆಗಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಈ ರೀಲ್ಸ್‌ಗಳು ಭಾರೀ ವೈರಲ್ ಆಗಿದ್ದುಂಟು.
55
ನಾಲ್ಕು ಧಾರಾವಾಹಿಗಳಲ್ಲಿ ನಟನೆ
ಅಂದಹಾಗೆ ಅಂಜಲಿ ಅವರು ಸದ್ಯ ಕನ್ನಡದ ನಾಲ್ಕು ಧಾರಾವಾಹಿಗಳಲ್ಲಿ ತಾಯಿ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಸಿನಿಮಾಗಳಲ್ಲಿ ನಟಿಸುತ್ತಿದ್ದ ಅಂಜಲಿ ಈಗ ಕಿರುತೆರೆಯಲ್ಲಿ ಬ್ಯುಸಿ ಆಗಿದ್ದಾರೆ.