ನಾಳೆನೇ ಮದ್ವೆಯಾಗೋಣ ಎಂದು ಭಾವಿ ಪತಿಗೆ ಫೇಕ್​ಕಾಲ್​: ಜೈದೇವ್​ ಉತ್ತರ ಕೇಳಿ ನಾಚಿ ನೀರಾಗೋದ ನಟಿ

Published : Apr 02, 2026, 12:53 PM IST

ಅಮೃತಧಾರೆ ಸೀರಿಯಲ್‌ನಲ್ಲಿ ಮೋಸ ಮಾಡಿದ ಜೈದೇವ್ ಪಾತ್ರಧಾರಿ ರಾಣವ್ ಗೌಡ ಅವರನ್ನೇ ನಟಿ ರಾಧಾ ಭಗವತಿ ನಿಜ ಜೀವನದಲ್ಲಿ ಮದುವೆಯಾಗುತ್ತಿದ್ದಾರೆ. ಇವರಿಬ್ಬರ ನಿಶ್ಚಿತಾರ್ಥ ನಡೆದಿದ್ದು, ಸಂದರ್ಶನವೊಂದರಲ್ಲಿ ರಾಧಾ ಮಾಡಿದ ಪ್ರಾಂಕ್ ಕಾಲ್‌ಗೆ ರಾಣವ್ ನೀಡಿದ ತಮಾಷೆಯ ಉತ್ತರ ಎಲ್ಲರ ಗಮನ ಸೆಳೆದಿದೆ.

PREV
16
ಮೋಸ ಮಾಡಿದ ಜೈದೇವ್​ ಜೊತೆ ಲವ್​

ಅಮೃತಧಾರೆಯಲ್ಲಿ ಪೆದ್ದು ಮಲ್ಲಿಯಾಗಿ ಎಲ್ಲರ ಮನಸ್ಸನ್ನು ಗೆದ್ದು ಇದೀಗ ಭಾರ್ಗವಿ ಎಲ್​ಎಲ್​ಬಿಯಲ್ಲಿ ಭಾರ್ಗವಿ ಆಗಿ ಮಿಂಚುತ್ತಿರೋ ನಟಿ ರಾಧಾ ಭಗವತಿ. Amurthadhaare Serialನಲ್ಲಿ ಮೋಸ ಮಾಡಿ ಪ್ರೆಗ್ನೆಂಟ್​ ಮಾಡಿದ ಜೈದೇವ್​ನನ್ನೇ ರಿಯಲ್​ ಲೈಫ್​ನಲ್ಲಿ ಮದ್ವೆಯಾಗ್ತಿದ್ದಾರೆ ನಟಿ ರಾಧಾ.

26
ರಾಧಾ-ರಾಣವ್​ ಎಂಗೇಜ್​ಮೆಂಟ್​

ರಾಧಾ ಅವರು, ಜೈದೇವ್​ ಉರ್ಫ್​ ರಾಣವ್​ ಗೌಡ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ. ಇದಾಗಲೇ ಇವರಿಬ್ಬರೂ ಲವ್​ ಮಾಡಿ, ಎಂಗೇಜ್​ಮೆಂಟ್ ಕೂಡ ಆಗಿದ್ದು, ಮದುವೆಯ ಡೇಟ್​ ಫಿಕ್ಸ್​ ಆಗಿದೆ. ಅದಿನ್ನೂ ಸಾರ್ವಜನಿಕವಾಗಿ ರಿವೀಲ್ ಆಗಬೇಕಿದೆಯಷ್ಟೇ.

36
ಭಾವಿ ಪತಿಗೆ ಫೇಕ್​ ಕಾಲ್​

ಮದುವೆಯ ಡೇಟ್​ ಫಿಕ್ಸ್​ ಆಗುವ ಮೊದಲೇ, ಭಾವಿ ಪತಿಗೆ ಸಂದರ್ಶನದಲ್ಲಿ ಫೇಕ್​ಕಾಲ್​ ಮಾಡಿ, ಎಲ್ಲರೆದುರೇ ಗುಟ್ಟನ್ನು ರಿವೀಲ್​ ಮಾಡಿಬಿಟ್ಟಿದ್ದಾರೆ ನಟಿ ರಾಧಾ.

46
ನಾಳೆನೇ ಮದ್ವೆ

speedpluskarnataka ಎನ್ನುವ ಚಾನೆಲ್​ಗೆ ಸಂದರ್ಶನದ ವೇಳೆ, ಆ್ಯಂಕರ್​ ಸುಮ್ಮನೇ ರಾಣವ್​ ಅವರಿಗೆ ಕಾಲ್ ಮಾಡಿ ನಾಳೆನೇ ಮದುವೆಯಾಗೋಣ ಎಂದು ಹೇಳಿ, ಏನು ಹೇಳ್ತಾರೆ ನೋಡೋಣ ಎಂದಾಗ ರಾಧಾ ಅವರು ಕಾಲ್​ ಮಾಡಿ, ಡೇಟ್​ ಇನ್ನೂ ಫಿಕ್ಸ್​ ಆಗಬೇಕಿದೆ. ಅದಕ್ಕೂ ಮುನ್ನ ನಾಳೆನೇ ಮದ್ವೆಯಾಗೋಣ್ವಾ ಎಂದು ಕೇಳಿದ್ದಾರೆ.

56
ಕಿಲಾಡಿ ರಾಣವ್​

ಅಷ್ಟಕ್ಕೂ ರಾಣವ್​ ಅವರಿಗೆ ಇದು ಫೇಕ್​ ಎನ್ನೋದು ತಿಳಿದಿದೆ. ಅವರು ಕೂಡಲೇ ಅಷ್ಟೇ ತಮಾಷೆಯಲ್ಲಿ ನಾಳೆ ಯಾಕೆ, ನಾನು ಇವತ್ತೇ ಆಗಲು ರೆಡಿ, ನೀವು ಮನಸ್ಸು ಮಾಡಬೇಕಷ್ಟೇ ಎಂದಾಗ ನಟಿ ಒಂದೇ ಸಲಕ್ಕೆ ಗಲಿಬಿಲಿಯಾಗಿದ್ದಾರೆ.

66
ಇವತ್ತೇ ಆಗೋಣ ಎಂದ ನಟ

ಆ ಬಳಿಕ, ಅಲ್ಲಿದ್ದವರು ಹೇಳಿಕೊಟ್ಟಂತೆ, ಇವತ್ತು ಮುಹೂರ್ತ ಇಲ್ಲ, ನಾಳೆ ಆಗೋಣ ಎಂದಾಗ, ರಾಣವ್​ ಅವರು ಸುಮ್ಮನಿರದೇ ಲವ್​ ಮಾಡಿ ಓಡಿ ಹೋಗೋರೆಲ್ಲಾ ಮುಹೂರ್ತ, ಗಿಹೂರ್ತ ನೋಡ್ತಾರೆ ಇಲ್ವಲ್ಲಾ, ನಾವೂ ಇವತ್ತೇ ಆಗಿಬಿಡೋಣ ಎಂದು ರಾಧಾ ಅವರನ್ನೇ ಫೂಲ್​ ಮಾಡಿದ್ದಾರೆ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories