Amruthadhaare Kannada Serial Episode Update: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಮಗಳು ಸಿಗಬೇಕು ಎನ್ನುವಷ್ಟರಲ್ಲಿ ಜಯದೇವ್ ಎಂಟ್ರಿಯಾಗಿದೆ. ದಿಯಾ ಮನೆಯಲ್ಲಿ ಮನೆ ಕೆಲಸ ಮಾಡುತ್ತಿರುವ ಅವನು ಗೌತಮ್ ಎದುರು ಮಾತ್ರ ಸೋಲಲು ರೆಡಿ ಇಲ್ಲ. ಈಗ ಬೇರೆ ಕಥೆ ಶುರುವಾಗಿದೆ.
ಗೌತಮ್ ಹಾಗೂ ಭೂಮಿಕಾಳ ಮಗಳನ್ನು ಜಯದೇವ್ ಕಿಡ್ನ್ಯಾಪ್ ಮಾಡಿ ಕಾಡಿನಲ್ಲಿ ಬಿಸಾಕಿದ್ದನು. ಈಗ ಜಯದೇವ್‌ಗೆ ಯಾವ ಆಸ್ತಿಯೂ ಇಲ್ಲ, ನೆಲೆಯೂ ಇಲ್ಲ. ಹೀಗಾಗಿ ಅವನು ದಿಯಾ ಮನೆಯಲ್ಲಿ ಜೀತದಾಳಿನ ಥರ ಬಿದ್ದಿದ್ದಾನೆ. ಅಲ್ಲಿ ಲಕ್ಷ್ಮೀಕಾಂತ್ ಮಾವ, ಪಾರ್ಥ ಬಂದು ಹೇಳಿದರೂ ಕೂಡ ಅವನು ಮಾತ್ರ ಅಲ್ಲಿಯೇ ಇರ್ತೀನಿ ಎಂದು ಹೇಳಿದ್ದನು.
24
ಜಯದೇವ್ ಮುಂದೆ ಏನ್ ಮಾಡ್ತಾನೆ?
ಅಖಿಲಾಂಡೇಶ್ವರಿ ಈಗ ಗೌತಮ್‌ಗೆ ಫೋನ್ ಮಾಡಿ, ಮಗಳು ಎಲ್ಲಿದ್ದಾಳೆ ಎಂದು ಹೇಳುವ ಪ್ರಯತ್ನ ಮಾಡಿದ್ದಳು. ಆದರೆ ಆಗ ಗೌತಮ್ ಫೋನ್ ಬ್ಯುಸಿ ಬರುತ್ತಿತ್ತು. ಹೀಗಾಗಿ ಲಕ್ಷ್ಮೀಕಾಂತ್ ಮಾವ ಫೋನ್ ರಿಸೀವ್ ಮಾಡಿ, ಅಡ್ರೆಸ್ ಬರೆದಿಟ್ಟುಕೊಂಡಿದ್ದಾನೆ. ಇದನ್ನು ಆ ಆಫೀಸ್‌ನಲ್ಲಿರುವವರೊಬ್ಬರು ನೋಡಿ, ಜಯದೇವ್‌ಗೆ ವಿಷಯ ತಿಳಿಸಿದ್ದಾರೆ. ಜಯದೇವ್ ಮುಂದೆ ಏನು ಮಾಡಲಿದ್ದಾನೆ ಎಂದು ಕಾದು ನೋಡಬೇಕಿದೆ.
34
ಗೌತಮ್ ಜೀವಕ್ಕೆ ಅಪಾಯ?
ಜಯದೇವ್‌ಗೆ ಮಾತ್ರ ಬುದ್ಧಿ ಬರೋದಿಲ್ಲ. ಗೌತಮ್ ಮಗಳ ವಿಷಯ ಗೊತ್ತಾದಬಳಿಕ ಅವನು ಏನಾದರೊಂದು ತೊಂದರೆ ಕೊಟ್ಟೇ ಕೊಡುತ್ತಾನೆ. ಮಗಳ ಕಾಪಾಡುವಾಗ ಗೌತಮ್ ಜೀವಕ್ಕೆ ಸಮಸ್ಯೆ ಬರಬಹುದು. ಒಟ್ಟಿನಲ್ಲಿ ಮುಂದಿನ ದಿನಗಳಲ್ಲಿ ಏನಾಗಲಿದೆ ಎಂದು ಕಾದು ನೋಡಬೇಕಿದೆ. ಎಲ್ಲವೂ ಚೆನ್ನಾಗಿದೆ, ಮಗಳು ಸಿಗುತ್ತಾಳೆ ಎನ್ನುವಾಗಲೇ ಈ ರೀತಿ ಆಗಿರೋದು ವೀಕ್ಷಕರಿಗೆ ಬೇಸರ ತಂದಿದೆ.
ಸೀರಿಯಲ್ ಮುಗಿಸೋದೆ ಬೆಟರ್ ಈ ಜೇಡಿದು ಮತ್ತೆ ಆ ಕಿತ್ತೊಗಿರೊ ಡೈಲಾಗು ಆಟಿಟ್ಯೂಡ್ ನೋಡೋ ಕರ್ಮ ನಮಿಗ್ ಬೇಡ ರೀ ಸ್ವಾಮಿ
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.