'ರಾಮಾಚಾರಿ’ ಧಾರಾವಾಹಿಯಲ್ಲಿ ಚಾರು ಪಾತ್ರದ ಮೂಲಕ ಜನಪ್ರಿಯತೆ ಪಡೆದ ಹಾಗೂ ಸದ್ಯ ‘ಕೃಷ್ಣ ರುಕ್ಕು’ ಧಾರಾವಾಹಿಯಲ್ಲಿ ನಟಿಸುತ್ತಿರುವ ನಟಿ ಮೌನ ಗುಡ್ಡೆಮನೆ ‘ಲವ್ ಪಂಚ್’ ಸಿರೀಸ್ ನಲ್ಲಿ ಬಿಕಿನಿ ಧರಿಸಿ ಬೋಲ್ಡ್ ಅವತಾರದಲ್ಲಿ ಕಾಣಿಸಿಕೊಂಡು ಟ್ರೋಲ್ ಗಳಿಗೆ ಆಹಾರವಾಗಿದ್ದಾರೆ.
ಕನ್ನಡ ಕಿರುತೆರೆಯ ಸುಂದರಿ ಮೌನ ಗುಡ್ಡೆಮನೆ. ರಾಮಾಚಾರಿ ಧಾರಾವಾಹಿಯಲ್ಲಿ ಚಾರು ಪಾತ್ರದ ಮೂಲಕ ಮನೆಮಾತಾಗಿರುವ ಮೌನ ಗುಡ್ಡೆಮನೆ, ಆರಂಭದಲ್ಲಿ ತಮ್ಮ ಬೋಲ್ಡ್ ಮತ್ತು ಅಹಂಕಾರದ ಪಾತ್ರ, ನಂತರದಲ್ಲಿ ಸಾಂಪ್ರದಾಯಸ್ಥ ಹುಡುಗಿಯ ಪಾತ್ರದಲ್ಲಿ ಮಿಂಚಿದ್ದರು.
26
ಕೃಷ್ಣ ರುಕ್ಕು ಧಾರಾವಾಹಿ ನಾಯಕಿ
ರಾಮಾಚಾರಿ ಧಾರಾವಾಹಿ ಮುಗಿಯುತ್ತಿದ್ದಂತೆ ಮೌನ ಗುಡ್ಡೆಮನೆ ಜೀ ಕನ್ನಡ ವಾಹಿನಿಯ ‘ಕೃಷ್ಣ ರುಕ್ಕು’ ಧಾರಾವಾಹಿಯಲ್ಲಿ ನಾಯಕಿ ರುಕ್ಕು ಆಗಿ ನಟಿಸುವ ಅವಕಾಶ ಪಡೆದರು. ಇದರಲ್ಲಿ ಪೂರ್ತಿಯಾಗಿ ಸಂಪ್ರದಾಯಸ್ಥ ಮನೆಮಗಳಾಗಿ ನಟಿಸುತ್ತಿದ್ದಾರೆ.
36
ಲವ್ ಪಂಚ್ ನಲ್ಲಿ ಮೌನ ನಾಯಕಿ
ಇದೀಗ ಮೌನ ಮತ್ತು ಶರತ್ ಪದ್ಮನಾಭ್ ಇಬ್ಬರು ಜೊತೆಯಾಗಿ ಇತ್ತೀಚೆಗೆ ಹೃದಯಾಘಾತದಿಂದ ಮರಣವನ್ನಪ್ಪಿದ ನಟ, ನಿರ್ದೇಶಕ ದಿಲೀಪ್ ರಾಜ್ ನಿರ್ದೇಶನ ಮಾಡಿರುವ ಬುಲ್ಲೆಟ್ ಮೈಕ್ರೋ ಸೀರೀಸ್ ‘ಲವ್ ಪಂಚ್’ನಲ್ಲಿ ಮುಖ್ಯಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ.
ಈ ಸೀರೀಸ್ ನಲ್ಲಿ ಮೌನ ಗುಡ್ಡೆಮನೆ ಸಿಕ್ಕಾಪಟ್ಟೆ ಬೋಲ್ಡ್ ಅವತಾರದಲ್ಲಿ ನಟಿಸುತ್ತಿದ್ದಾರೆ. ಶ್ರೀಮಂತ ಮನೆತನದ ಹುಡುಗಿಯಾಗಿ, ತುಂಬಾನೆ ಬೋಲ್ಡ್ ಎನಿಸುವಂತಹ ಮಿನಿ ಡ್ರೆಸ್ ಗಳಲ್ಲಿ ಮೌನ ನಟಿಸಿದ್ದು, ಇದೀಗ ಲವ್ ಪಂಚ್ ಪ್ರೊಮೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ.
56
ಬಿಕಿನಿ ಧರಿಸಿದ ಮೌನ ಗುಡ್ಡೆಮನೆ
ನಿಜ ಜೀವನದಲ್ಲಿ ಮೌನ ಗುಡ್ಡೆಮನೆ ತುಂಬಾನೆ ಬೋಲ್ಡ್. ಆದರೆ ಸೀರಿಯಲ್ ಗಳಲ್ಲಿ ಅವರು ಸಂಪ್ರದಾಯಸ್ಥ ಪಾತ್ರಗಳಲ್ಲೇ ಕಾಣಿಸಿಕೊಂಡವರು. ಇದೀಗ ಲವ್ ಪಂಚ್ ಸರಣಿಯಲ್ಲಿ ಬಿಕಿನಿ ತೊಟ್ಟು ಸ್ವಿಮ್ಮಿಂಗ್ ಮಾಡುತ್ತಾ, ಸೋಶಿಯಲ್ ಮೀಡೀಯಾದಲ್ಲಿ ಟೆಂಪ್ರೇಚರ್ ಹೆಚ್ಚಿಸಿದ್ದಾರೆ. ಆ ಮೂಲಕ ಇವರು ನಿಜವಾಗಿಯೂ ನಮ್ಮ ಕಿರುತೆರೆಯ ರುಕ್ಕುನೇನಾ ಎನ್ನುವಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದಾರೆ.
66
ಟ್ರೋಲ್ ಗಳಿಗೆ ಆಹಾರವಾದ ಮೌನ ಗುಡ್ಡೆಮನೆ
ಮೌನ ಗುಡ್ಡೆಮನೆ ಬಿಕಿನಿ ಅವತಾರ ನೋಡಿ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ. ಇದೆಲ್ಲಾ ಬೇಕಿತ್ತಾ ಎಂದು ಕೇಳುತ್ತಿದ್ದಾರೆ. ಸಿನಿಮಾ, ಸೀರಿಯಲ್ ಗೆ ಬರುತ್ತಿದ್ದಂತೆ, ಯಾಕೆ ಈ ನಟಿಯರು ಈ ಥರ ಎಲ್ಲಾ ಡ್ರೆಸ್ ಮಾಡೋದು, ಮೌನ ನಿಮ್ಮನ್ನು ಈ ರೀತಿ ನೋಡಲು ಇಷ್ಟಪಡುತ್ತಿಲ್ಲ, ನಿಮ್ಮ ಮೇಲೆ ಅಭಿಮಾನ ಇದೆ ಅದನ್ನು ಉಳಿಸಿಕೊಳ್ಳಿ ಎಂದು ಜನ ಕಾಮೆಂಟ್ ಮಾಡುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.