Ole Hudga Pratham: ಇಂದು ಚುನಾವಣೆ ಫಲಿತಾಂಶದ ಕಾವು ಏರಿದೆ. ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿಯ ಭದ್ರಕೋಟೆಯನ್ನು ಬಿಜೆಪಿ ಪಕ್ಷವು ಧ್ವಂಸ ಮಾಡಲಿದೆಯಾ? ಹೀಗಿರುವಾಗ ಮಮತಾ ಬ್ಯಾನರ್ಜಿ ಸೋಲಲಿ ಎಂದು ಬಿಗ್ ಬಾಸ್ ಕನ್ನಡ ಸೀಸನ್ 4 ವಿಜೇತ, ನಟ ಒಳ್ಳೆ ಹುಡುಗ ಪ್ರಥಮ್ ಬಯಸುತ್ತಿದ್ದಾರೆ.
ಪಶ್ಚಿಮ ಬಂಗಾಳ ಸೋಲಲಿ ಎಂದು ಒಳ್ಳೆ ಹುಡುಗ ಪ್ರಥಮ್ ಅವರು ಸೋಶಿಯಲ್ ಮೀಡಿಯಾ ಪೋಸ್ಟ್ ಹಂಚಿಕೊಂಡಿದ್ದಾರೆ. ಇದು ಅಚ್ಚರಿ ತಂದಿದೆ. ಸಾಮಾನ್ಯವಾಗಿ ಪಕ್ಷದ ಬಗ್ಗೆ ಅಥವಾ ರಾಜಕಾರಣಿ ಬಗ್ಗೆ, ಚುನಾವಣೆ ಬಗ್ಗೆ ಸೆಲೆಬ್ರಿಟಿಗಳು ಸೋಶಿಯಲ್ ಮೀಡಿಯಾದಲ್ಲಿ ಮಾತನಾಡೋದಿಲ್ಲ. ಆದರೆ ಪ್ರಥಮ್ ಮಾತ್ರ ನೇರವಾಗಿ ಒಪನ್ ಆಗಿ ಮಾತನಾಡಿದ್ದಾರೆ.
24
ಸಿನಿಮಾಕ್ಕೆ ಕೂಡ ಹರಕೆ ಹೊತ್ತಿರಲಿಲ್ಲ
“ನನಗೆ ಇಂತಹ ಮಕ್ಕಳಾಗ್ಬೇಕು, ನನ್ನ ಸಿನಿಮಾ ಗೆಲ್ಲಬೇಕು ಅಂತ ಯಾವತ್ತು ಹರಕೆ ಹೊತ್ತವನಲ್ಲ!
ಆದರೆ ಪಶ್ಚಿಮ ಬಂಗಾಳದಲ್ಲಿ ಏನಾದ್ರೂ ಮಮತಾ ಬ್ಯಾನರ್ಜಿ ಪಕ್ಷ ಸೋತ್ರೆ ನೂರು ಜನರ ಅಭಿವೃದ್ಧಿಗೆ ಶಕ್ತಿಮೀರಿ ಶ್ರಮಿಸುವೆ! ಸಮಾಜದಲ್ಲಿ ನನ್ನ ಗುರುತಿಗೆ ಸಿಗುವವರು ಕಷ್ಟದಲ್ಲಿದ್ದವರ ಶಕ್ತಿಮೀರಿ ಜೊತೆ ನಿಲ್ತೀನಿ ಅಂತ ಈಶ್ವರನಲ್ಲಿ ಪ್ರಾರ್ಥಿಸುವೆ” ಎಂದು ಅವರು ಹೇಳಿದ್ದಾರೆ.
34
ಮಮತಾ ಬ್ಯಾನರ್ಜಿ ಸೋಲಲಿ
“ನಾನು ರಾಜಕೀಯದಿಂದ ದೂರ. ನನ್ನ ದೇಶ ಬಾಂಗ್ಲಾ ವಲಸಿಗರಿಂದ ಮುಕ್ತರಾಗಬೇಕು.
ನನ್ನ ದೇಶ ಚೆನ್ನಾಗಿರಬೇಕು. ಇದೊಂದೇ ಈಶ್ವರನಲ್ಲಿ ಬೇಡಿಕೆ! ಈ ಬಾರಿ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಪಕ್ಷ ಸೋಲಲಿ..! ನಮ್ಮವರು ಚೆನ್ನಾಗಿರ್ಲಿ. ಖಂಡಿತಾ ಕಷ್ಟದಲ್ಲಿದ್ದವರ ಶಕ್ತಿ ಮೀರಿ ಸಹಾಯ ಮಾಡ್ತೀನಿ” ಎಂದು ಹೇಳಿದ್ದಾರೆ.
ಆರ್ಥಿಕ ಕಾರಣ, ಧಾರ್ಮಿಕವಾಗಿ ಕಿರುಕುಳ ಕೊಟ್ಟಿರೋದು, ನೈಸರ್ಗಿಕ ವಿಕೋಪಗಳಿಂದ ಬಾಂಗ್ಲಾದೇಶದಿಂದ ಭಾರತಕ್ಕೆ ಅನೇಕರು ವಲಸೆ ಬಂದಿದ್ದಾರೆ. ಭಾರತ, ಬಾಂಗ್ಲಾದೇಶದ ನಡುವೆ ನುಸುಳಲು ಸುಲಭವಾದ ಗಡಿ ಇದೆ. ಹೀಗಾಗಿ ಅಕ್ರಮ ವಲಸೆಯನ್ನು ತಡೆಯುವುದು ದೊಡ್ಡ ಟಾಸ್ಕ್ ಆಗಿದೆ. ಇನ್ನೊಂದು ಕಡೆ ಅಸ್ಸಾಂ, ಪಶ್ಚಿಮ ಬಂಗಾಳದಂತಹ ಗಡಿ ರಾಜ್ಯಗಳ ಜನರ ಮೇಲೆ ಪ್ರಭಾವ ಬೀರಿದೆ ಎನ್ನಲಾಗಿದೆ. ಬಾಂಗ್ಲಾದೇಶದವರ ಸಂಸ್ಕೃತಿ, ಸಂಪ್ರದಾಯವು ಪಶ್ಚಿಮ ಬಂಗಾಳದಂತೆಯೇ ಇದೆ. ಇನ್ನೊಂದು ಕಡೆ ಇಲ್ಲಿಗೆ ಬಂದವರು ಕೃಷಿ ಮುಂತಾದ ಕೆಲಸಗಳನ್ನು ಮಾಡಿ ಇಲ್ಲಿಯೇ ಗಟ್ಟಿ ಆಗ್ತಾರೆ, ಚುನಾವಣೆಯಲ್ಲಿ ಭಾಗಿ ಆಗ್ತಾರೆ, ಇದು ವೋಟ್ ಬ್ಯಾಂಕ್ ರಾಜಕೀಯ ಆಗಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.