Amruthadhaare Serial: ಭೂಮಿಕಾ ಆಗ ಹಾಗೆ ಹೇಳಿ, ಈಗ ಹೀಗೆ ಹೇಳೋದ್ಯಾಕೆ? ಡೈರೆಕ್ಟರ್‌ ಸರ್‌, ಉತ್ತರ ಕೊಡಿ ಪ್ಲೀಸ್..!

Published : Jan 02, 2026, 01:33 PM IST

Amruthadhaare Kannada Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಹಾಗೂ ಗೌತಮ್‌ ಒಂದಾಗುತ್ತಾರೆ ಎನ್ನುವಷ್ಟರಲ್ಲಿ ಜಯದೇವ್‌ ಎಂಟ್ರಿ ಆಯ್ತು, ಈಗ ಭೂಮಿಕಾ ತೆಗೆದುಕೊಂಡ ನಿರ್ಧಾರಗಳ ಬಗ್ಗೆ ವೀಕ್ಷಕರಿಗೆ ಪ್ರಶ್ನೆ ಇದೆ. ಏನದು?  

PREV
16
ಅಂದ್ಕೊಂಡಿದ್ದೊಂದು, ಈಗ ಅಗ್ತಿರೋದು ಒಂದು

ಅಮೃತಧಾರೆ ಧಾರಾವಾಹಿಯಲ್ಲಿ ಹೀಗೆ ಆಗಬಹುದು ಎಂದು ವೀಕ್ಷಕರು ಅಂದುಕೊಳ್ಳುತ್ತಿರುವಾಗಲೃ, ಸೀರಿಯಲ್‌ ತಂಡವು ಇನ್ನೊಂದು ಟ್ವಿಸ್ಟ್‌ ಸಿಗುತ್ತಿದೆ. ಭೂಮಿಕಾ ವಿದೇಶಕ್ಕೆ ಹೋಗುತ್ತಾಳೆ ಎಂದುಕೊಳ್ಳುತ್ತಿರುವಾಗ, ಮಗು ವಿಷಯ ಹೊರಬಿದ್ದಿದೆ.

26
ವಿದೇಶಕ್ಕೆ ಹೋಗಲು ಹಣ ಕೊಡೋರು ಯಾರು?

ಆಸ್ತಿಗೋಸ್ಕರ ಜಯದೇವ್‌, ಆಕಾಶ್‌ನನ್ನು ಕಿಡ್ನ್ಯಾಪ್‌ ಮಾಡಿದ್ದನು. ಇದರಿಂದ ಬೇಸತ್ತ ಭೂಮಿಕಾ, ತನ್ನ ಮಗ ಆಕಾಶ್‌ ಜೊತೆ ವಿದೇಶಕ್ಕೆ ಹೊರಹೋಗುತ್ತಾಳೆ ಎನ್ನಲಾಗಿತ್ತು. ಟೀಚರ್‌ ಆಗಿದ್ದ ಭೂಮಿಗೆ ಮಗನನ್ನು ಓದಿಸೋದು, ಮನೆ ನಡೆಸೋದು, ಮಲ್ಲಿಗೆ ಓದೋಕೆ ಹಣ ನೀಡೋದು ಕಷ್ಟ ಆಗಿತ್ತು. ಈಗ ವಿದೇಶದಲ್ಲಿ ಮಗನನ್ನು ಓದಿಸೋದು, ತಾನು ಕೂಡ ಮನೆ ಮಾಡಿಕೊಂಡಿರೋದು ಸುಲಭವೇ? ಅಷ್ಟು ಸುಲಭಕ್ಕೆ ಭೂಮಿಗೆ ಅಲ್ಲಿ ಕೆಲಸ ಸಿಗುತ್ತಾ? ಇದನ್ನು ಸೀರಿಯಲ್‌ ತಂಡದವರು ಹೇಳಬೇಕು.

36
ಮಗಳ ಸತ್ಯ ಗೊತ್ತಾಯ್ತು

ಈಗ ಸೀರಿಯಲ್‌ನಲ್ಲಿ ತನ್ನ ಮಗಳು ಬದುಕಿದೆ ಎಂದು ಭೂಮಿಗೆ ಗೊತ್ತಾಗಿದೆ. ಭೂಮಿಯು ಮಲ್ಲಿ ಜೊತೆ ಮಾತನಾಡಿದ್ದು ಸಾಕಷ್ಟು ಗೊಂದಲಮಯವಾಗಿತ್ತು. ಮನೆಯಿಂದ ದೂರ ಇದ್ದರೆ ಮಾತ್ರ ನಿನ್ನವರು ಚೆನ್ನಾಗಿರುತ್ತಾರೆ ಎಂದು ಶಕುಂತಲಾ ಬ್ಲ್ಯಾಕ್‌ಮೇಲ್‌ ಮಾಡಿದ್ದಕ್ಕೆ ಭೂಮಿ ಇಷ್ಟುವರ್ಷಗಳಿಂದ ಎಲ್ಲರಿಂದ ದೂರ ಇದ್ದಳು ಎಂದು ತೋರಿಸಲಾಗಿತ್ತು. ಈಗ ಕಥೆ ಇನ್ನೊಂದು ಥರ ಹೋದಂತಿದೆ.

46
ತಪ್ಪಾಗಿ ತಿಳಿದುಕೊಂಡೆ

ಗೌತಮ್‌ ಇಷ್ಟು ವರ್ಷಗಳಿಂದ ಭೂಮಿಯನ್ನು ಹುಡುಕುತ್ತಿದ್ದನು, ಮಗಳನ್ನು ಹುಡುಕುತ್ತಿದ್ದನು ಎಂದು ಮಲ್ಲಿ ಹೇಳಿದ್ದಳು. ಆಗ ಭೂಮಿ, “ನಾನು ಯಾರದ್ದೋ ಮಾತು ಕೇಳಿಕೊಂಡು ಅವರನ್ನು ತಪ್ಪಾಗಿ ತಿಳಿದುಕೊಂಡೆ, ಅವರನ್ನು ದೂರ ಇಡಬಾರದಿತ್ತು. ನಾನು ಗೌತಮ್‌ ಅವರನ್ನು ಮಾತಾಡಿಸ್ತೀನಿ” ಎಂದು ಹೇಳಿದ್ದಾಳೆ.

56
ಭೂಮಿ ಮನಸ್ಸಿನಲ್ಲಿ ಏನಿತ್ತು?

ನಾನು ಮನೆಯಿಂದ ದೂರ ಇದ್ದರೆ ನನ್ನವರು ಚೆನ್ನಾಗಿರುತ್ತಾರೆ ಎಂದು ಭೂಮಿ ಅಂದುಕೊಂಡಿದ್ದಳಾ? ಇದು ತಪ್ಪು ತಿಳುವಳಿಕೆಯಾ? ಅಥವಾ ಗೌತಮ್‌ನಿಂದ ಮಗಳು ಕಳೆದುಹೋದಳು ಎಂಬ ಬೇಸರಕ್ಕೆ ದೂರ ಇದ್ದಳಾ? ಇದರಲ್ಲಿ ಸತ್ಯ ಯಾವುದು? ಪದೇ ಪದೇ ನನ್ನವರು ಚೆನ್ನಾಗಿರಬೇಕು ಎಂದು ಎಲ್ಲರಿಂದ ದೂರ ಇದ್ದೀನಿ ಅಂತ ಭೂಮಿ ಹೇಳುತ್ತಿದ್ದಿದ್ದು ಯಾಕೆ? ಒಟ್ಟಿನಲ್ಲಿ ಭೂಮಿಕಾ ಉದ್ದೇಶ ಏನಾಗಿತ್ತು ಎಂದು ಸೀರಿಯಲ್‌ ತಂಡ ಸ್ಪಷ್ಟನೆ ನೀಡಿದರೆ ಒಳ್ಳೆಯದು.

66
ನಾನು ಸಹಾಯ ಮಾಡ್ತೀನಿ: ಭೂಮಿ

ಈಗ ಭೂಮಿಯು, ಗೌತಮ್‌ ಬಳಿ ಬಂದು, “ನಮ್ಮ ಮಗು ಸತ್ತಿಲ್ಲ, ಬದುಕಿದೆ ಎಂದು ಹೇಳಬಹುದಿತ್ತು ಅಲ್ವಾ? ಎಷ್ಟು ದೊಡ್ಡ ಮನಸ್ಸು ನಿಮ್ಮದು. ನನಗೆ ನೋವು ಆಗಬಾರದು ಎಂದು ನೀವು ನೋವು ನುಂಗಿದಿರಿ. ನಿಮ್ಮನ್ನು ಅರ್ಥಮಾಡಿಕೊಳ್ಳಲಿಲ್ಲ, ನಿಮ್ಮನ್ನು ಹರ್ಟ್‌ ಮಾಡಿದೆ, ನೋವು ಕೊಟ್ಟೆ” ಎಂದು ಹೇಳಿದ್ದಾಳೆ.

ಆಗ ಗೌತಮ್‌ “ಆ ಮಗುವನ್ನು ನಾನು ಹುಡುಕಿ ನಿಮ್ಮ ಮುಂದೆ ನಿಲ್ಲಿಸುವೆ. ಇದು ಗ್ಯಾರಂಟಿ” ಎಂದಿದ್ದಾಳೆ. ಆಗ ಭೂಮಿ, “ನಾನು ನಿಮ್ಮ ಜೊತೆಗೆ ಇರುವೆ” ಎಂದು ಹೇಳಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories