Bigg Boss Kannada 12 : ಧ್ರುವಂತ್, ಗಿಲ್ಲಿ ನಟನಿಗೆ ಕ್ಷಮೆ ಕೇಳಿ ಹೊಸ ವರ್ಷದ ಶುಭಾಷಯ ಹೇಳಿದ್ದಾರೆ. ಗಿಲ್ಲಿ ಕ್ಷಮಿಸಿದ್ರೂ ವೀಕ್ಷಕರು ಮನಸ್ಸು ಬದಲಿಸಿದಂತಿದೆ. ಧ್ರುವಂತ್ ವೋಟ್ ಬೇರೆಯವರ ಪಾಲಾಗುವ ಸಾಧ್ಯತೆ ದಟ್ಟವಾಗಿದೆ.
ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಗಳ ಮಧ್ಯೆ ಜಗಳ ಸಾಮಾನ್ಯ. ಗಿಲ್ಲಿ ಹಾಗೂ ಅಶ್ವಿನಿ ಗೌಡ ಇಬ್ಬರ ಮಧ್ಯೆ ಆಗಾಗ ಗಲಾಟೆ ನಡೆಯುತ್ತಿರುತ್ತೆ. ಧ್ರುವಂತ್ ಕೂಡ ಗಿಲ್ಲಿ ಜೊತೆ ಜಗಳ ಮಾಡ್ತಿರುತ್ತಾರೆ. ಈ ಬಾರಿ ಅಶ್ವಿನಿ ಗೌಡ ಹಾಗೂ ಧ್ರುವಂತ್ ಇಬ್ಬರೂ ಗಿಲ್ಲಿ ಜೊತೆ ಕಿತ್ತಾಡಿಕೊಂಡಿದ್ದಾರೆ. ಕ್ಯಾಪ್ಟನ್ಸಿ ಟಾಸ್ಕ್ ಸಂದರ್ಭದಲ್ಲಿ, ಸಾಂಗ್ ಬರೆಯುವ ವೇಳೆಯೂ ಇಬ್ಬರ ಮಧ್ಯೆ ಕಿತ್ತಾಟ ನಡೆದಿದೆ.
27
ಗಿಲ್ಲಿ ಕ್ಷಮೆ ಕೇಳಿದ ಧ್ರುವಂತ
ಎಲ್ಲರ ಜೊತೆ ಜಗಳ ಆಡಿ ನಂತ್ರ ಮತ್ತೆ ಮಾತನಾಡೋದು ಧ್ರುವಂತ ಸ್ವಭಾವ. ರಕ್ಷಿತಾ ಇದಕ್ಕೆ ಉತ್ತಮ ನಿದರ್ಶನ. ಆಗಾಗ ರಕ್ಷಿತಾ ಜೊತೆ ಜಗಳ ಆಡುವ ಧ್ರುವಂತ್, ರಕ್ಷಿತಾ ಸ್ವಭಾವ ನನಗೆ ಇಷ್ಟ ಎನ್ನುತ್ತಿರುತ್ತಾರೆ. ಈಗ ಗಿಲ್ಲಿ ಜೊತೆ ಕಿತ್ತಾಡಿ ಕ್ಷಮೆ ಕೇಳಿದ್ದಾರೆ.
37
ಹೊಸ ವರ್ಷಕ್ಕೆ ಶುಭಕೋರಿದ ಧ್ರುವಂತ್
ಗಿಲ್ಲಿಗೆ ಧ್ರುವಂತ್ ಹೊಸ ವರ್ಷದ ಶುಭಾಷಯ ಹೇಳಿದ್ದಾರೆ. ಆ ನಂತ್ರ ಜಗಳವನ್ನು ನೆನಪಿಟ್ಟುಕೊಳ್ಬೇಡಿ. ಹೊಸ ವರ್ಷಕ್ಕೆ ಅದನ್ನು ಕೊಂಡೊಯ್ಯೋದು ಬೇಡ, ನನ್ನನ್ನು ಕ್ಷಮಿಸಿ, ಲವ್ ಯು ಚಿನ್ನ ಅಂತ ತಬ್ಬಿಕೊಂಡಿದ್ದಾರೆ. ಅಷ್ಟೇ ಅಲ್ಲ ಗಿಲ್ಲಿ ನನ್ನ ಡಾರ್ಲಿಂಗ್, ನನಗೆ ಅವ್ರ ಜೊತೆ ಜಗಳ ಆಡುವ ಹಕ್ಕಿದೆ ಎಂದಿದ್ದಾರೆ.
ಗಿಲ್ಲಿ ಕೂಡ ಧ್ರುವಂತ್ ಗೆ ಪ್ರತಿಕ್ರಿಯೆ ನೀಡಿದ್ದಾರೆ. ಹೊಸ ವರ್ಷಕ್ಕೆ ಶುಭ ಕೋರಿದ ಗಿಲ್ಲಿ, ನಿನ್ನೆ – ಮೊನ್ನೆಯದಲ್ಲ ಡಚಕ್ ಅಷ್ಟೇ ಎಂದ ಧ್ರುವಂತ್ ಗೆ ಡಚಕ್ ಎಂದಿದ್ದಾರೆ. ಹೊಸ ವರ್ಷಕ್ಕೆ ಹೊಸದು. ಏನೂ ಬೇಸರ ಇಲ್ಲ ಎಂದಿದ್ದಾರೆ. ಅಲ್ಲೇ ಇದ್ದ ರಘು, ಎಲ್ಲ ಬಿಟ್ಟು ಮುಂದೆ ಹೋಗೋಣ ಅಂತ ಇಬ್ಬರಿಗೂ ಹೇಳಿದ್ದಾರೆ.
57
ವೀಕ್ಷಕರು ಗರಂ
ಬಿಗ್ ಬಾಸ್ ಕನ್ನಡ ಸೀಸನ್ 12 ಶೋವನ್ನು ಕಣ್ಣಲ್ಲಿ ಕಣ್ಣಿಟ್ಟು ವೀಕ್ಷಿಸೋರ ಸಂಖ್ಯೆ ಹೆಚ್ಚಿದೆ. ಬಹುತೇಕ ವೀಕ್ಷಕರ ಅಚ್ಚುಮೆಚ್ಚು ಗಿಲ್ಲಿ. ಧ್ರುವಂತ್ ಹಾಗೂ ಅಶ್ವಿನಿ, ಗಿಲ್ಲಿ ಜೊತೆ ಜಗಳವಾಡಿದ ವಿಡಿಯೋ ನೋಡಿ ಗಿಲ್ಲಿ ಫ್ಯಾನ್ಸ್ ಕೋಪಗೊಂಡಿದ್ರು. ಈಗ ಧ್ರುವಂತ್ ಕ್ಷಮೆ ಕೇಳಿದ್ದು ಫ್ಯಾನ್ಸ್ ಮಾತ್ರ ಒಪ್ಪಿಕೊಳ್ತಿಲ್ಲ.
67
ಗಿಲ್ಲಿ ಕ್ಷಮಿಸಿದ್ರೂ ಫ್ಯಾನ್ಸ್ ಕ್ಷಮಿಸಲ್ವ?
ಗಿಲ್ಲಿ ಜೊತೆ ಜಗಳವಾಡಿದ್ದು ಧ್ರುವಂತ್ ಗೆ ಮುಳುವಾಗುವ ಸಾಧ್ಯತೆ ಇದೆ. ಸೋಶಿಯಲ್ ಮೀಡಿಯಾದಲ್ಲಿ ವೀಕ್ಷಕರು, ಧ್ರುವಂತ್ ಕ್ಷಮಿಸೋದಿಲ್ಲ ಎನ್ನುವ ಕಮೆಂಟ್ ಹಾಕ್ತಿದ್ದಾರೆ. ಅಷ್ಟೇ ಅಲ್ಲ ವೋಟ್ ಬದಲಿಸಿರೋದಾಗಿ ಅನೇಕರು ಹೇಳಿಕೊಂಡಿದ್ದಾರೆ. ಇಷ್ಟು ದಿನ ಧ್ರುವಂತ್ ಗೆ ಮತ ಹಾಕ್ತಿದ್ದ ಫ್ಯಾನ್ಸ್ ಈಗ ಮತ ಬದಲಿಸಿದ್ದಾರಂತೆ. ಅಶ್ವಿನಿ ಜೊತೆ ಸೇರಿ ಗಿಲ್ಲಿ ಜೊತೆ ಜಗಳ ಆಡಿದ್ದಕ್ಕೆ ನಮ್ಮ ಮತ ನಿಮಗಿಲ್ಲ, ನಾವು ಸ್ಪಂದನಾಗೆ ವೋಟು ಹಾಕಿದ್ದೇವೆ ಎನ್ನುವ ಕಮೆಂಟ್ ಗಳು ಬರ್ತಿವೆ.
77
ಈ ವಾರದ ನಾಮಿನೇಷನ್
ಈ ವಾರ ಭಿನ್ನವಾಗಿ ನಾಮಿನೇಷನ್ ಹಾಗೂ ಕ್ಯಾಪ್ಟನ್ ಟಾಸ್ಕ್ ನಡೆದಿದೆ. ಧ್ರುವಂತ್, ಧನುಷ್, ಸ್ಪಂದನಾ ಹಾಗೂ ರಾಶಿಕಾ ನಾಮಿನೇಟ್ ಆಗಿದ್ದಾರೆ. ಕ್ಯಾಪ್ಟನ್ ಪಟ್ಟಕ್ಕೆ ಅಶ್ವಿನಿ ಹಾಗೂ ಧನುಷ್ ಮಧ್ಯೆ ಕೊನೆ ಸ್ಪರ್ಧೆ ನಡೆದಿದ್ದು, ಧನುಷ್ ವಿನ್ ಆಗಿದ್ದಾರೆ. ಆದ್ರೆ ಆಟದಲ್ಲಿ ಎಲ್ಲೋ ತಪ್ಪಾಗಿರೋದನ್ನು ಬಿಗ್ ಬಾಸ್ ಪತ್ತೆ ಹಚ್ಚಿ ಹೊಸ ಟ್ವಿಸ್ಟ್ ನೀಡಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.