ಆ ರೀತಿ ಮಾತ್ರ ತೋರಿಸ್ಬೇಡಿ, ಸಿಡಿದೆದ್ದ Amruthadhaare Serial ವೀಕ್ಷಕರು! ವಿಜ್ಞಾನ ಏನು ಹೇಳುತ್ತೆ?

Published : Feb 24, 2026, 08:31 AM IST

Amruthadhaare Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಹಾಗೂ ಸುನಿಗೆ ಮದುವೆ ಮಾಡಲು ಮನೆಯಲ್ಲಿ ತಯಾರಿ ನಡೆಯುತ್ತಿದೆ. ಸುನಿಗಿಂತ ಮಲ್ಲಿ ಐದು ವರ್ಷ ದೊಡ್ಡವಳು. ಇದು ಭೂಮಿಕಾಗೆ ಇಷ್ಟ ಆಗ್ತಿಲ್ಲ. ಆದರೆ ಗೌತಮ್‌ ಮಾತ್ರ ತೊಂದರೆ ಇಲ್ಲ ಎಂದು ಹೇಳುತ್ತಿದ್ದಾನೆ. 

PREV
14
ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ

ಈ ವಯಸ್ಸಿನ ವಿಚಾರವಾಗಿ ವೀಕ್ಷಕರ ವಲಯದಲ್ಲಿ ಒಂದಿಷ್ಟು ಚರ್ಚೆಗಳು ಆಗಿವೆ. ಕೆಲವರು ವಯಸ್ಸು ಮುಖ್ಯ ಅಲ್ಲ, ಪ್ರೀತಿ ಮುಖ್ಯ ಎಂದರೆ, ಇನ್ನೂ ಕೆಲವರು ಈ ರೀತಿ ತೋರಿಸಿ, ಉಳಿದವರು ಕೂಡ ಹೀಗೆ ಮಾಡೋ ಥರ ಮಾಡಬೇಡಿ ಎಂದಿದ್ದಾರೆ.

24
ವೈಜ್ಞಾನಿಕವಾಗಿ ಏನು ಹೇಳಲಾಗುತ್ತದೆ?

ಹೆಣ್ಣು 11 ಅಥವಾ 12ನೇ ವಯಸ್ಸಿಗೆ ಪ್ರಬುದ್ಧರಾದರೆ, ಗಂಡು 16, 17ನೇ ವಯಸ್ಸಿಗೆ ಪ್ರಬುದ್ಧಳಾಗ್ತಾಳೆ. ಹೀಗಾಗಿ ದಾಂಪತ್ಯದಲ್ಲಿ ಸಮಸ್ಯೆ ಆಗುವುದು. ಅಂದಹಾಗೆ ಮಹಿಳೆಗೆ 50 ವರ್ಷಕ್ಕೆ ಸಂತಾನೋತ್ಪತ್ತಿ ಶಕ್ತಿ ಮುಗಿದು ಹೋದರೆ, ಗಂಡಿಗೆ 70ನೇ ವಯಸ್ಸಿಗೆ ತನಕ ಇರುವುದು. ವಯಸ್ಸಿನಲ್ಲಿ ಪ್ರೀತಿಸಿ ಮದುವೆಯಾದರೆ ಈ ರೀತಿ ಸಮಸ್ಯೆ ಆಗದೆ ಇರಬಹುದು.

34
ವೀಕ್ಷಕರು ಏನಂತಾರೆ?

ಅಯ್ಯೋ ಮಲ್ಲಿ ಆ ಹುಡುಗ ಚಿಕ್ಕವನು ನಿನಿಗೆ ಸೆಟ್ ಆಗಲ್ಲ. ದಯವಿಟ್ಟು ಬೇಡಾ ಅಂತಾ ಹೇಳು ಮಲ್ಲಿ ಒಳ್ಳೇ ಅಕ್ಕ ತಮ್ಮ ತರ ಇದ್ದೀರಾ ನಿಮ್ಮ ಜೋಡಿ ಆಗಿ ನೋಡೋಕೆ ತುಂಬಾ ಕಷ್ಟ ಆಗುತ್ತೆ.

ಡುಮ್ಮು ಸರ್ ಹೇಳ್ತಾ ಇರೋದು ನಮ್ಮ ಸಿನಿಮಾ ಇಂಡಸ್ಟ್ರಿನಲ್ಲಿ ಮತ್ತೆ ಕ್ರಿಕೆಟ್ ಇಂಡಸ್ಟ್ರಿನಲ್ಲಿ ತುಂಬಾ ಸಹಜವಾಗಿ ನಡೆದಿದೆ.

ಪ್ರೀತಿಗೆ ವಯಸ್ಸು ಅಷ್ಟು ಮುಖ್ಯ ಅಲ್ಲ. ಮನಸ್ಸು ಒಪ್ಪಿದ್ರೆ, ಅರ್ಥ ಮಾಡಿಕೊಂಡ್ರೆ ಅದೇ ಸಾಕು. ಆದರೆ ಜೀವನದ ರಿಯಾಲಿಟಿ ಕೂಡ ಸ್ವಲ್ಪ ಯೋಚಿಸಬೇಕು.

44
ಉದಾಹರಣೆಗಳು

ನಿಕ್‌ ಜೋನಾಸ್‌ ಹಾಗೂ ಪ್ರಿಯಾಂಕಾ ಚೋಪ್ರಾ ಮದುವೆಯಾಗಿದ್ದಾರೆ. ನಿಕ್‌ಗಿಂತ ಪ್ರಿಯಾಂಕಾ ಹತ್ತು ವರ್ಷ ದೊಡ್ಡವರು. ಇನ್ನು ಯಶ್‌ಗಿಂತ ರಾಧಿಕಾ ಪಂಡಿತ್‌ ಅವರು ಎರಡು ವರ್ಷ ದೊಡ್ಡವರು. ಸಚಿನ್‌ ತೆಂಡುಲ್ಕರ್‌ಗಿಂತ ಅಂಜಲಿ ಎರಡು ವರ್ಷ ದೊಡ್ಡವರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories