Amruthadhaare Serial Episode: ಅಮೃತಧಾರೆ ಧಾರಾವಾಹಿಯಲ್ಲಿ ಗೌತಮ್ ಹಾಗೂ ಭೂಮಿಕಾ ಇಡೀ ಕುಟುಂಬ ಸಮೇತ ಹಳೆ ಮನೆಗೆ ಕಾಲಿಟ್ಟಿದ್ದಾರೆ. ಅಲ್ಲಿ ವಿಶೇಷವಾದ ಪೂಜೆ ಮಾಡಲಾಗುತ್ತಿದೆ. ಈ ಪೂಜೆಗೆ ಮಿಂಚು ಕೂಡ ಕೂತಿದ್ದಳು. ಇದನ್ನು ಪುರೋಹಿತರು ವಿರೋಧಿಸಿದ್ದರು.
ಗೌತಮ್‌ಗೆ ಮಿಂಚು ಎಂಬ ಹುಡುಗಿ ಅಚಾನಕ್ ಆಗಿ ಸಿಕ್ಕಿದ್ದಳು. ಇವಳನ್ನೇ ಅವನು ಸ್ವಂತ ಮಗಳೆಂದು ಸಾಕುತ್ತಿದ್ದಾನೆ. ಎಲ್ಲರೂ ಅವಳನ್ನು ಆ ಮನೆಯ ಮೊಮ್ಮಗಳು ಎಂದೇ ನಂಬಿದ್ದಾರೆ. ಗೌತಮ್ ಮಗಳನ್ನು ಜಯದೇವ್ ಕಿಡ್ನ್ಯಾಪ್ ಮಾಡಿ, ಕಾಡಿನಲ್ಲಿ ಬಿಸಾಕಿದ್ದನು. ಇದುವರೆಗೂ ಅವನಿಗೆ ಮಗಳು ಸಿಕ್ಕಿಲ್ಲ.
26
ಗೌತಮ್ ಮಗಳು ಬದುಕಿದ್ದಾಳೆ
ಒಂದು ಕಡೆ ಜ್ಯೋತಿಷಿಯಿಂದ ಮಗಳು ಬದುಕಿದ್ದಾಳೆ ಎನ್ನೋದು ಗೌತಮ್ ದಂಪತಿಗೆ ಗೊತ್ತಾಗಿದೆ. ಮತ್ತೆ ಹಳೆ ಮನೆಗೆ ಕಾಲಿಟ್ಟಿರುವ ಈ ಜೋಡಿ, ಆದಷ್ಟು ಬೇಗ ಮಗಳನ್ನು ಹುಡುಕುವ ಪ್ರಯತ್ನ ಮಾಡಬಹುದು. ಈಗ ಜಯದೇವ್ ಮನೆಯಿಂದ ಹೊರಬಿದ್ದಿದ್ದಾನೆ, ದಿಯಾ ಕೂಡ ಅವನ ದುಡ್ಡನ್ನು ತಗೊಂಡು ಎಸ್ಕೇಪ್ ಆಗಿದ್ದಾಳೆ. ಒಟ್ಟಿನಲ್ಲಿ ಮಗಳನ್ನು ಹುಡುಕೋದು ಈಗ ಇರುವ ಟಾಸ್ಕ್ ಆಗಿದೆ.
36
ಮಿಂಚು ನಿಜವಾದ ತಂದೆ-ತಾಯಿ ಯಾರು?
ಮಿಂಚು ಅಸಲಿ ತಂದೆ-ತಾಯಿ ಯಾರು? ಎನ್ನುವುದು ಸದ್ಯಕ್ಕಿರುವ ಕುತೂಹಲ ಆಗಿದೆ. ಮಿಂಚು ಕುಟುಂಬದ ಹಿನ್ನಲೆ ಬಗ್ಗೆ ಬೇಗ ತಿಳಿಸಿ ಎಂದು ಕೆಲ ವೀಕ್ಷಕರು ಸೋಶಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡುತ್ತಿದ್ದಾರೆ.
ಪೂಜೆಗೆ ಗೌತಮ್ ದಿವಾನ್, ಭೂಮಿಕಾ ಹಾಗೂ ಅವರಿಬ್ಬರ ಮಕ್ಕಳು ಕೂರಲಿದ್ದಾರೆ ಎಂದು ಪುರೋಹಿತರ ಬಳಿ ಹೇಳಲಾಗಿದೆ. ಆಗ ಮಿಂಚು ಸಾಕು ಮಗಳು ಎನ್ನೋದು ಗೊತ್ತಾಗಿದೆ. ಈ ಪೂಜೆಗೆ ಮನೆಯ ವಾರಸದಾರರು ಮಾತ್ರ ಕೂರಬೇಕು ಎಂದು ಪುರೋಹಿತರು ಹೇಳಿದ್ದಾರೆ. ಇದನ್ನು ಕೇಳಿ ಎಲ್ಲರಿಗೂ ಬೇಸರ ಆಗಿದೆ. ಮಿಂಚು ಕೂಡ ಅಲ್ಲಿಂದ ಎದ್ದು ಹೋಗಿದ್ದಾಳೆ. ಈ ವಿಷಯ ಭೂಮಿ, ಗೌತಮ್‌ಗೆ ಗೊತ್ತಾಗಿದೆ.
56
ಮಗು ಮನಸ್ಸು ನೋಯಿಸೋದಿಲ್ಲ ಎಂದ ಗೌತಮ್
“ಶಾಸ್ತ್ರದ ಬಗ್ಗೆ ನನಗೆ ಗೊತ್ತಿಲ್ಲ. ಮಗುವಿನ ಮನಸ್ಸನ್ನು ನೋಯಿಸಬೇಕು ಎನ್ನೋದು ಯಾವುದಾದರೂ ಶಾಸ್ತ್ರದಲ್ಲಿದೆಯಾ? ಮಕ್ಕಳು ದೇವರ ಸಮಾನ, ಎಲ್ಲರೂ ಒಂದೇ. ನಮ್ಮ ಭಾವನೆಗಳನ್ನು ಗೌರವಿಸಿ. ಇವಳು ನಮ್ಮ ಮಗಳು, ನಮಗೋಸ್ಕರ ಅವಳಿದ್ದಾಳೆ, ಅವಳಿಗೋಸ್ಕರ ನಾವಿದ್ದೇವೆ. ಯಾರೂ ಮಿಂಚು ಬಗ್ಗೆ ಏನೂ ಮಾತನಾಡಬೇಡಿ. ಮಕ್ಕಳ ಜೊತೆಗೆ ಕೂತು ಪೂಜೆ ಮಾಡಿದರೆ ಒಳ್ಳೆಯದಾಗುತ್ತದೆ ಎಂದು ನಂಬಿದ್ದೇವೆ” ಎಂದು ಗೌತಮ್ ಹೇಳಿದ್ದಾನೆ.
66
ಕೆಲ ಪ್ರೇಕ್ಷಕರು ಬೇಸರ
ಇದನ್ನು ನೋಡಿ ವೀಕ್ಷಕರು ಬೇಸರ ಆಗಿದ್ದಾರೆ. ಗೌತಮ್, ಭೂಮಿಕಾ ಕಳೆದು ಹೋಗಿರುವ ಅವರ ಮಗಳನ್ನು ಈ ಹೆಣ್ಣು ಮಗುವಿನ ರೂಪದಲ್ಲಿ ನೋಡಿಕೊಳ್ಳುತ್ತಿದ್ದಾರೆ ದೇವರಿಗೆ ಇಲ್ಲದ ಮೂಡನಂಬಿಕೆ ಪೂಜಾರಿಗೆ ಏಕೆ? ಎಂದು ಕೆಲವರು ಹೇಳುತ್ತಿದ್ದಾರೆ. ಇದು ಧಾರಾವಾಹಿ ಮಾತ್ರ, ಧಾರಾವಾಹಿಯಲ್ಲಿ ಮಾತ್ರ ಈ ರೀತಿ ತೋರಿಸಲಾಗಿದೆ ಅಷ್ಟೇ, ಧಾರಾವಾಹಿಯಲ್ಲಿ ಮಾತ್ರ ಈ ರೀತಿ ಸ್ಕ್ರಿಪ್ಟ್ ಬರೆಯಲಾಗಿದೆ ಅಷ್ಟೇ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.