Lakshmi Nivasa ಸೈಕೋ ಜಯಂತ್​ ಜೊತೆ ಶೂಟಿಂಗ್​ ಅನುಭವ ಹಂಚಿಕೊಂಡ ನಟಿ ಯಮುನಾ ಶ್ರೀನಿಧಿ ಹೇಳಿದ್ದೇನು

Published : May 08, 2026, 12:46 PM IST

'ಲಕ್ಷ್ಮೀ ನಿವಾಸ' ಧಾರಾವಾಹಿಯಲ್ಲಿ ಸೈಕೋ ಜಯಂತ್ ಪಾತ್ರಕ್ಕೆ ನಟ ದೀಪಕ್ ಸುಬ್ರಹ್ಮಣ್ಯ ಜೀವ ತುಂಬಿದ್ದಾರೆ. ಇದೀಗ ಧಾರಾವಾಹಿಗೆ ಹಿರಿಯ ನಟಿ ಯಮುನಾ ಶ್ರೀನಿಧಿ ಅನಾಮಿಕ ಮಹಿಳೆಯಾಗಿ ಎಂಟ್ರಿ ಕೊಟ್ಟಿದ್ದು, ಸಹನಟ ದೀಪಕ್ ಅವರ ನಟನೆ ಹಾಗೂ ಶಿಸ್ತಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

PREV
16
ಬೇಡಪ್ಪಾ ಇಂಥ ಗಂಡ

ನನ್ನ ಗಂಡ ತುಂಬಾ ಪ್ರೀತಿಸಬೇಕು, ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸಬೇಕು ಎಂದೆಲ್ಲಾ ಕನಸು ಕಂಡುಕೊಂಡಿರೋ ಹೆಣ್ಣುಮಕ್ಕಳು, ಅಯ್ಯಪ್ಪಾ ಇಂಥ ಗಂಡ ಬೇಡಪ್ಪಾ ಎನ್ನುವಂತೆ ಮಾಡಿದ್ದ ಲಕ್ಷ್ಮೀ ನಿವಾಸ ಸೀರಿಯಲ್​ ಜಯಂತ್​. ಪ್ರೀತಿಯ ಹೆಸರಿನಲ್ಲಿ, ಚಿನ್ನುಮರಿಗೆ ಆತ ಕೊಟ್ಟ ಟಾರ್ಚರ್​ ಆ ದೇವರಿಗೇ ಪ್ರೀತಿ ಎನ್ನುವಂತಿದೆ. ಇದೀಗ ಆತ ಸರಿದಾರಿಗೆ ಬಂದರೂ ಆತನ ಚಿನ್ನುಮರಿ ಅದನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇಲ್ಲವಾಗಿದೆ.

26
ಸೈಕೋ ಪಾತ್ರಕ್ಕೆ ಜೀವ ತುಂಬುತ್ತಿರುವ ನಟ

ಅಷ್ಟಕ್ಕೂ ವಿಭಿನ್ನ ರೀತಿಯ ಶೇಡ್​ನಲ್ಲಿ ಕಾಣಿಸಿಕೊಂಡು ಜಯಂತ್​ ಪಾತ್ರಕ್ಕೆ ಜೀವ ತುಂಬಿ, ಅತ್ಯದ್ಭುತವಾಗಿ ನಟಿಸುವ ಮೂಲಕ ಸೈಕೋಗಳೆಂದರೆ ಹೀಗೆಯೇ ಇರುತ್ತಾರೆ ಎಂದು ವಿಭಿನ್ನ ರೀತಿಯಲ್ಲಿ ಕಾಣಿಸಿಕೊಂಡವರು ನಟ ದೀಪಕ್​ ಸುಬ್ರಹ್ಮಣ್ಯ (Deepak Subramanya). ಇವರ ನಟನೆಗೆ ಮನಸೋಲದವರೇ ಇಲ್ಲ. ಇವರ ಪ್ರತಿ ಪ್ರೊಮೋ ವಾಹಿನಿ ಹಂಚಿಕೊಂಡಾಗಲೂ ಅವರ ನಟನೆಯನ್ನು ಹಾಡಿ ಹೊಗಳುವವರೇ ಎಲ್ಲಾ. ಅಷ್ಟೊಂದು ಪ್ರಭಾವ ಬೀರಿರುವ ನಟ ಇವರು. ಸಾಮಾನ್ಯವಾಗಿ ವಿಲನ್​ ರೋಲ್​ ಮಾಡುವವರಿಗೆ ಬೇರೆಯದ್ದೇ ರೀತಿಯ ಗೆಟಪ್​ ಇರುತ್ತದೆ. ಆದರೆ ಸೈಕೋ ಅಗಿ ಹೆಂಡತಿಯನ್ನು ಅತಿಯಾಗಿ ಪ್ರೀತಿಸಿ ಅದನ್ನು ವಿಲನ್​ ರೀತಿಯಲ್ಲಿ ತೋರಿಸಿದಾಗ ಅದರ ನಟನೆ ಕಷ್ಟವೇ. ಆದರೆ ಅದಕ್ಕೆ ಜೀವ ತುಂಬುತ್ತಿದ್ದಾರೆ ದೀಪಕ್​.

36
ಅನಾಮಿಕ ಮಹಿಳೆ

ಇದೀಗ ಲಕ್ಷ್ಮೀ ನಿವಾಸ ಸೀರಿಯಲ್​ ರೋಚಕ ಹಂತ ತಲುಪಿದ್ದು, ಜಾಹ್ನವಿ ಏನೋ ಮನೆಗೆ ಬಂದಿದ್ದಾಳೆ.ಆದರೆ ಅನಾಮಿಕ ಮಹಿಳೆಯ ಎಂಟ್ರಿ ಆಗಿದೆ. ಯಾರೀಕೆ ಎನ್ನುವ ಕುತೂಹಲ ಕೆರಳಿಸುತ್ತಿದೆ. ಈ ಅನಾಮಿಕ ಮಹಿಳೆಯರ ರೂಪದಲ್ಲಿ ಕಾಣಿಸಿಕೊಳ್ಳುತ್ತಿರುವವರು ಹಿರಿಯ ನಟಿ ಯಮುನಾ ಶ್ರೀನಿಧಿ.

46
ದೀಪಕ್​ ಜೊತೆಗಿನ ಕೆಲಸ

ಈಗ ಅವರು ಪೋಸ್ಟ್​ ಒಂದನ್ನು ಮಾಡಿದ್ದು, ಲಕ್ಷ್ಮೀ ನಿವಾಸದ ಸೀರಿಯಲ್​ನಲ್ಲಿ ತಮ್ಮ ಪಾತ್ರ ಹಾಗೂ ಸೈಕೋ ಜಯಂತ್ ಪಾತ್ರಧಾರಿ ದೀಪಕ್​ ಅವರ ಜೊತೆಗೆ ಕೆಲಸ ಮಾಡುತ್ತಿರುವ ರೋಚಕ ಅನುಭವವನ್ನು ತೆರೆದಿಟ್ಟಿದ್ದಾರೆ.

56
ಅರ್ಥಪೂರ್ಣ ಕಲಿಕೆಯ ಅನುಭವ

ಜೀ ಕನ್ನಡದಲ್ಲಿ "ಲಕ್ಷ್ಮಿನಿವಾಸ" ಸರಣಿಯ ಪ್ರಮುಖ ಕಲಾವಿದ ದೀಪಕ್ ಸುಬ್ರಹ್ಮಣ್ಯ ಅವರೊಂದಿಗೆ ಕೆಲಸ ಮಾಡುವುದು ನನಗೆ ಅರ್ಥಪೂರ್ಣ ಕಲಿಕೆಯ ಅನುಭವವಾಗಿದೆ. ನಾನು ಯಾವಾಗಲೂ ಅವರ ಅದ್ಭುತ ನಟನೆಯ ಅಭಿಮಾನಿಯಾಗಿದ್ದೆ, ಆದರೆ ಅವರೊಂದಿಗೆ ಕೆಲಸ ಮಾಡಿದ ನಂತರ, ನಾನು ಅವರ ಶಿಸ್ತು, ಅವರ ಸರಳತೆ, ಪ್ರತಿ ದೃಶ್ಯ ಮತ್ತು ಪ್ರತಿ ಸಂಭಾಷಣೆಗೆ ಅವರು ಆಳವನ್ನು ಸೇರಿಸುವ ರೀತಿ, ಪ್ರತಿ ಕ್ಷಣವನ್ನು ಉನ್ನತೀಕರಿಸುವ ಅವರ ಬದ್ಧತೆ, ಈ ಸೀರಿಯಲ್​ಗೆ ಅವರ ಕೊಡುಗೆ ಮತ್ತು ಅವರು ತಮ್ಮ ಸಹ-ಕಲಾವಿದರಿಗೆ ತೋರಿಸುವ ಗೌರವ ಮತ್ತು ಪ್ರೋತ್ಸಾಹ ನಿಜವಾಗಿಯೂ ಅಪರೂಪ ಮತ್ತು ಸ್ಪೂರ್ತಿದಾಯಕವಾಗಿದೆ ಎಂದು ದೀಪಕ್​ ಅವರನ್ನು ನಟಿ ಹಾಡಿ ಹೊಗಳಿದ್ದಾರೆ.

66
ಪ್ರೇರಣಾದಾಯಕ

ಹಿಂದೆ ನಾನು ಅವರ ಅದ್ಭುತ ಅಭಿನಯದ ಅಭಿಮಾನಿಯಾಗಿದ್ದೆ. ಆದರೆ ಅವರ ಜೊತೆ ಕೆಲಸ ಮಾಡಲು ಪ್ರಾರಂಭಿಸಿದ ನಂತರ, ಅವರ ಕೆಲಸದ ನೈತಿಕತೆ, ಪ್ರತಿಯೊಂದು ದೃಶ್ಯ ಮತ್ತು ಸಂಭಾಷಣೆಗೆ ಅವರು ನೀಡುವ ಮೌಲ್ಯ— ಇವೆಲ್ಲವೂ ಅವರನ್ನು ಇನ್ನಷ್ಟು ಗೌರವದಿಂದ ಮೆಚ್ಚುವಂತೆ ಮಾಡಿವೆ. ಪ್ರತಿ ದೃಶ್ಯವನ್ನು ಇನ್ನಷ್ಟು ಉತ್ತಮಗೊಳಿಸಲು ಅವರ ತೊಡಗಿಸಿಕೊಳ್ಳುವಿಕೆ ಇವೆಲ್ಲವೂ ನಿಜವಾಗಿಯೂ ಪ್ರೇರಣಾದಾಯಕವಾಗಿವೆ ಎಂದು ನಟಿ ಬರೆದುಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories