Karna Serial: ಬೆಟ್ಟದ ತುದಿಯಲ್ಲಿ ಕೊನೆಗೂ ಸತ್ಯದ ಅನಾವರಣ: ನಿತ್ಯಾಗೆ ಶಾಕ್​- ನಿಧಿ ಮುಂದಿನ ನಡೆ ಏನು?

Published : Dec 03, 2025, 06:02 PM IST

‘ಕರ್ಣ’ ಧಾರಾವಾಹಿಯಲ್ಲಿ ನಿತ್ಯಾ ಗರ್ಭಿಣಿ ಎನ್ನುವ ಸತ್ಯ ಆಕಸ್ಮಿಕವಾಗಿ ನಿಧಿಗೆ ತಿಳಿದು ಆಘಾತಗೊಂಡಿದ್ದಾಳೆ. ತನ್ನ ಬಳಿ ಸತ್ಯ ಮುಚ್ಚಿಟ್ಟ ಅಕ್ಕ ನಿತ್ಯಾ ಹಾಗೂ ಕರ್ಣನನ್ನು ಪ್ರಶ್ನಿಸಿದಾಗ ಅವರಿಬ್ಬರೂ ತಬ್ಬಿಬ್ಬಾಗಿದ್ದಾರೆ. ಈ ಸತ್ಯ ಬಯಲಾದ ನಂತರ, ಮುಂದೇನು ಎಂದು ವೀಕ್ಷಕರು ಕಾಯುತ್ತಿದ್ದಾರೆ.

PREV
17
ನಿತ್ಯಾಳ ಸತ್ಯ ಅನಾವರಣ

ಕರ್ಣ ಸೀರಿಯಲ್​ (Karna Serial)ನಲ್ಲಿ ಸದ್ಯ ಸತ್ಯದ ಅನಾವರಣ ಆಗುವ ಟೈಮ್​ ಬಂದಿದೆ. ಅಕ್ಕ ಎನ್ನುವುದಕ್ಕಿಂತಲೂ ಹೆಚ್ಚಾಗಿ ನಿತ್ಯಾಳನ್ನು ಅಮ್ಮ ಎಂದೇ ತಿಳಿದುಕೊಂಡಿರೋ ನಿಧಿಗೆ ಸತ್ಯ ತಿಳಿದು ಶಾಕ್​ ಆಗಿದೆ.

27
ಸತ್ಯ ತಿಳಿದ ನಿಧಿ

ಆಸ್ಪತ್ರೆಗೆ ಚೆಕಪ್​ಗೆ ಕರ್ಣ ಮತ್ತು ನಿತ್ಯಾ ಹೋದ ಸಂದರ್ಭದಲ್ಲಿ ವೈದ್ಯೆ ಮಾತನಾಡುವುದನ್ನು, ನಿತ್ಯಾ ಗರ್ಭಿಣಿ ಎನ್ನುವ ಸತ್ಯವನ್ನು ಮರೆಯಲ್ಲಿ ನಿಂತ ನಿಧಿಗೆ ತಿಳಿದಿದೆ. ಸತ್ಯ ಮುಚ್ಚಿಟ್ಟಿದ್ದರಿಂದ ಅವಳಿಗೆ ಅಕ್ಕನ ಮೇಲೆ ಸಿಕ್ಕಾಪಟ್ಟೆ ಕೋಪ ಬಂದಿದೆ.

37
ಅಕ್ಕನನ್ನು ಪ್ರಶ್ನಿಸಿದ ನಿಧಿ

ಕರ್ಣ ಮತ್ತು ನಿತ್ಯಾಳನ್ನು ಬೆಟ್ಟದ ಮೇಲೆ ಕರೆಸಿಕೊಂಡಿರುವ ನಿಧಿ ಇದೀಗ ಅಕ್ಕನನ್ನು ಪ್ರಶ್ನೆ ಮಾಡುತ್ತಿದ್ದಾಳೆ. ಮಧ್ಯೆ ಮಾತನಾಡಲು ಬಂದಿರೋ ಕರ್ಣನನ್ನು ತಡೆದಿದ್ದಾಳೆ ನಿಧಿ.

47
ಕರ್ಣ-ನಿತ್ಯಾ ತಬ್ಬಿಬ್ಬು

ನಿನ್ನನ್ನು ನನ್ನ ಅಮ್ಮನಂತೆ ಕಂಡೆ. ನನ್ನ ಬಳಿಯೇ ಇಷ್ಟು ದೊಡ್ಡ ಸತ್ಯ ಯಾಕೆ ಮುಚ್ಚಿಟ್ಟಿ ಎಂದು ನಿಧಿ ಪ್ರಶ್ನಿಸಿದಾಗ, ನಿತ್ಯಾ ಮತ್ತು ಕರ್ಣ ಇಬ್ಬರೂ ತಬ್ಬಿಬ್ಬಾಗಿದ್ದಾರೆ.

57
ಸತ್ಯದ ಬಗ್ಗೆ ಪ್ರಶ್ನಿಸಿದ ನಿಧಿ

ಆಗ ನಿತ್ಯಾ ಏನು ಸತ್ಯ, ಯಾವುದರ ಬಗ್ಗೆ ಹೇಳುತ್ತಿರುವೆ ಎಂದು ಕೇಳಿದಾಗ ನಿಧಿ, ನಿನ್ನ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗುವಿನ ಸತ್ಯ, ನೀನು ಗರ್ಭಿಣಿ ಎನ್ನುವ ಸತ್ಯ ಎಂದು ಕೇಳಿದಾಗ ನಿತ್ಯಾ ಕರ್ಣನತ್ತ ತಿರುಗಿದ್ದಾಳೆ. ಕರ್ಣ ನಾನು ಹೇಳಲಿಲ್ಲ ಎನ್ನುವಂತೆ ಸನ್ನೆ ಮಾಡಿದ್ದಾನೆ.

67
ಅಂತೂ ಬಂತು ಆ ಕ್ಷಣ

ನಿನಗೆ ಈ ವಿಷಯ ಹೇಗೆ ಗೊತ್ತಾಯ್ತು ಎಂದು ನಿಧಿಗೆ ನಿತ್ಯಾ ಕೇಳಿದಾಗ ನನ್ನ ಪ್ರಶ್ನೆಗೆ ಮೊದಲು ಉತ್ತರ ಕೊಡು, ನೀನು ಪ್ರಶ್ನೆ ಕೇಳಬೇಡ ಎಂದಿದ್ದಾಳೆ. ಅಲ್ಲಿಗೆ ಸೀರಿಯಲ್​ನಲ್ಲಿ ಒಂದು ದೊಡ್ಡ ಸಮಸ್ಯೆ ಬಗೆಹರಿದಂತಾಯ್ತು ಎನ್ನುವ ಸಂತೋಷ ವೀಕ್ಷಕರದ್ದು.

77
ಅಭಿಮಾನಿಗಳ ಹಾರೈಕೆ

ಕೊನೆಗೂ ನಿಧಿಗೆ ಸತ್ಯ ತಿಳಿಯಲೇಬೇಕಿತ್ತು. ಅದು ಒಳ್ಳೆಯದ್ದೇ ಆಯಿತು. ಈಗ ಏನಿದ್ದರೂ ನಿಧಿ ಮತ್ತು ಕರ್ಣ ಲವ್​ ಮಾಡ್ತಿರೋ ವಿಷಯ ನಿತ್ಯಾಗೆ ತಿಳಿಯಬೇಕಿದೆ. ಅದು ಆದಷ್ಟು ಬೇಗ ತಿಳಿಯಲಿ ಎಂದು ಅಭಿಮಾನಿಗಳು ಹಾರೈಸುತ್ತಿದ್ದಾರೆ.

Read more Photos on
click me!

Recommended Stories