Amruthadhaare: ಕೆಡಿ ಜೈದೇವ್​ಗೆ ಚಮಕ್​ ಕೊಟ್ಟ ಆಕಾಶ್​- ಗೌತಮ್​ ಪುತ್ರ ಎಂದ್ರೆ ಸುಮ್ನೇನಾ?

Published : Nov 26, 2025, 07:21 PM IST

ಆಸ್ತಿ ಪತ್ರಕ್ಕೆ ಸಹಿ ಹಾಕಿಸಿಕೊಳ್ಳಲು ಮಲ್ಲಿಯನ್ನು ಹುಡುಕುತ್ತಿರುವ ಜೈದೇವ್‌ಗೆ ಆಕೆಯ ಮಕ್ಕಳಾದ ಆಕಾಶ್ ಮತ್ತು ಮಿಂಚು ಮಾಲ್‌ನಲ್ಲಿ ಸಿಕ್ಕಿದ್ದಾರೆ. ಜೈದೇವ್ ಮಲ್ಲಿಯ ಫೋಟೋ ತೋರಿಸಿ ವಿಚಾರಿಸಿದಾಗ, ಬುದ್ಧಿವಂತ ಆಕಾಶ್ ಅವನಿಗೆ ತಿರುಗೇಟು ನೀಡಿ ಸುಸ್ತು ಮಾಡುತ್ತಾನೆ.

PREV
17
ಮಲ್ಲಿಗಾಗಿ ಜೈದೇವ್​ ಹುಡುಕಾಟ

ಮಲ್ಲಿಯ ಕೈಯಲ್ಲಿ ಆಸ್ತಿಯ ಪೇಪರ್​ಗೆ ಸಹಿ ಹಾಕಿಸಿಕೊಳ್ಳುವ ಉದ್ದೇಶದಿಂದ ಕೆಡಿ ಜೈದೇವ ಆಕೆಯನ್ನು ಹುಡುಕಿ ಬಂದಿದ್ದಾನೆ. ಇದೇ ವೇಳೆ ಮಕ್ಕಳಿಗೆ ಐಸ್​​ಕ್ರೀಮ್​ ಕೊಡಿಸಲು ಮಲ್ಲಿ ಮಾಲ್​ ಪ್ರವೇಶಿಸಿದ್ದಾಳೆ.

27
ಮಲ್ಲಿ ಬಚಾವ್​

ಮಲ್ಲಿಯನ್ನು ಎಲ್ಲಾ ಕಡೆ ಹುಡುಕಿ ಹುಡುಕಿ ಜೈದೇವ್​ ಮಲ್ಲಿ ಹೋಗಿರೋ ಮಾಲ್​ಗೇ ಪ್ರವೇಶಿಸಿದ್ದಾನೆ. ಇವನ ಪ್ಲ್ಯಾನ್​ ತಿಳಿದಿದ್ದ ಶಕುನಿ ಮಾಮಾ ಮಲ್ಲಿಯನ್ನು ಅಲ್ಲಿಂದ ಬೇರೆ ಕಡೆ ಕರೆದುಕೊಂಡು ಹೋಗಿದ್ದಾನೆ.

37
ಕೌಂಟರ್​ ಕೊಟ್ಟು ಸುಸ್ತು

ಆದರೆ, ಮಕ್ಕಳು ಜೈದೇವನ ಕೈಗೆ ಸಿಕ್ಕಿಬಿದ್ದಿದ್ದಾರೆ. ಮಕ್ಕಳನ್ನು ಮಾತನಾಡಿಲು ಜೈದೇವ್​ ಮುಂದಾದಾಗ ಆಕಾಶ್​ ಕೌಂಟರ್​ ಕೊಟ್ಟು ಅವನನ್ನು ಸುಸ್ತು ಮಾಡಿದ್ದಾನೆ.

47
ತಿರುಗೇಟು ಕೊಟ್ಟ ಆಕಾಶ್​

ನಿನ್ನ ಹೆಸರೇನು ಎಂದು ಕೇಳಿದಾಗ, ಅಪರಿಚಿತರಿಗೆ ಹಾಗೆಲ್ಲಾ ಹೆಸರು ಹೇಳಲ್ಲ ಎಂದಿದ್ದಾನೆ. ಕೊನೆಗೆ ಜೈದೇವ್​ ನೈಸ್​ ಆಗಿ ಕೇಳಿದಾಗ ಅಪ್ಪು ಎಂದು ಹೇಳಿದ್ದಾನೆ. ಮಿಂಚು ಬಳಿ ಮಾತನಾಡಲು ಅವಳನ್ನು ಮುಟ್ಟಿದಾಗ ಆಕಾಶ್​, ನೀವು ನನ್ನ ಬಳಿ ಮಾತನಾಡಿ ಅವಳನ್ನು ಮುಟ್ಟಬೇಡಿ ಎಂದು ತಿರುಗೇಟು ನೀಡಿದ್ದಾನೆ.

57
ಸಹಾಯ ಬೇಡಿದ ಜೈದೇವ್​

ನಿಮ್ಮಿಂದ ಹೆಲ್ಪ್​ ಆಗಬೇಕಿತ್ತು. ನೀವು ಸಹಾಯ ಮಾಡಿದ್ರೆ ಏನು ಬೇಕಾದರೂ ಕೊಡ್ತೇನೆ ಎಂದು ಜೈದೇವ್​ ಹೇಳಿದಾಗ ಆಕಾಶ್​ ಅದಕ್ಕೆ ಒಪ್ಪಿಕೊಂಡಿದ್ದಾನೆ.

67
ಫೋಟೋ ತೋರಿಸಿದ ಜೈದೇವ್​

ಕೊನೆಗೆ ನಿಮಗೆ ಇವರು ಗೊತ್ತಾ ಎಂದು ಮಲ್ಲಿಯ ಫೋಟೋ ತೋರಿಸಿದ್ದಾನೆ ಜೈದೇವ್​. ಇದನ್ನು ನೋಡಿ ಆಕಾಶ್​ ಮತ್ತು ಮಿಂಚು ಶಾಕ್​ ಆಗಿದ್ದಾರೆ. ಇಷ್ಟು ಪ್ರೊಮೋ ಬಿಡುಗಡೆಯಾಗಿದೆ.

77
ಮುಂದೇನು?

ಆಕಾಶ್​ ಮತ್ತು ಮಿಂಚು ಯಾವುದೇ ಕಾರಣಕ್ಕೂ ಜೈದೇವ್​ಗೆ ಈ ವಿಷಯ ಹೇಳುವುದಿಲ್ಲ ಎನ್ನುವುದು ನೆಟ್ಟಿಗರ ಅಭಿಮತ. ಹೇಳಿಕೇಳಿ ಆಕಾಶ್​ ಬುದ್ಧಿವಂತ. ಅವನು ಭೂಮಿಕಾ ಮಿಸ್​ ಮಗ ಬೇರೆ. ಎಲ್ಲವನ್ನೂ ಅಳೆದು ತೂಗಿ ಹೇಳುತ್ತಾನೆ. ಅಲ್ಲಿಗೆ ಜೈದೇವ್​ ವಾಪಸ್​ ಹೋಗುವ ಸ್ಥಿತಿ ಬರುತ್ತದೆ.

Read more Photos on
click me!

Recommended Stories