Anchor Anushree ಸೋಶಿಯಲ್ ಮೀಡಿಯಾದಲ್ಲಿ ಫೋಟೊಗಳನ್ನು ಶೇರ್ ಮಾಡಿದಾಗಲೆಲ್ಲಾ ಅವರ ಕರಿಮಣಿ ಅಥವಾ ತಾಳಿ ಸರದ ಬಗ್ಗೆ ಯಾವಾಗಲೂ ಪ್ರಶ್ನೆಗಳು ಬಂದೇ ಬರುತ್ತೆ. ಈ ಬಾರಿಯೂ ತಾಳಿ ಕಾಣಲ್ವಲ್ಲ ಎಂದವರಿಗೆ ಅನುಶ್ರೀ ಖಡಕ್ ಆಗಿ ಉತ್ತರ ನೀಡಿದ್ದಾರೆ. ಅವರು ಏನು ಹೇಳಿದ್ರು ನೋಡಿ.
ಕನ್ನಡದ ಜನಪ್ರಿಯ ಆಂಕರ್ ಅನುಶ್ರೀಯವರು ತಮ್ಮ ಇನ್’ಸ್ಟಾಗ್ರಾಂ ಖಾತೆಯಲ್ಲಿ ಒಂದಷ್ಟು ಫೋಟೋಸ್ ಶೇರ್ ಮಾಡಿದ್ದು, ತಮ್ಮ ಫೋಟೊಗೆ ನೆಗೆಟಿವ್ ಪಾಸಿಟಿವ್ ಕಾಮೆಂಟ್ ಮಾಡಿರುವವರಿಗೆ ನಿರೂಪಕಿ ಖುದ್ದಾಗಿ ಉತ್ತರಿಸಿದ್ದಾರೆ.
27
ತಾಳಿ ಬಗ್ಗೆ ಪ್ರಶ್ನೆ
ಮದುವೆಯಾದ ಬಳಿಕ ಅನುಶ್ರೀ ಫೋಟೊ ಶೇರ್ ಮಾಡಿದಾಗಲೆಲ್ಲಾ ಅಥವಾ ಸ್ಟೇಜ್ ಮೇಲೆ ಕಾಣಿಸಿಕೊಂಡಾಗಲೆಲ್ಲಾ ಜನರ ಕಣ್ಣು ಅವರ ತಾಳಿ ಮೇಲೆಯೇ ಇದೆ. ಅನುಶ್ರೀ ತಾಳಿ ಹಾಕಿಲ್ಲ ಅಂದ್ರೆ ಅದನ್ನು ಪ್ರಶ್ನಿಸಿ ಕಾಮೆಂಟ್ ಹಾಕುತ್ತಾರೆ ಜನ. ಇದೀಗ ಅನುಶ್ರೀ ತಮ್ಮ ಫೋಟೊಗೆ ಬಂದ ಕಾಮೆಂಟ್ ಗೆ ಖಡಕ್ಕಾಗಿ ಉತ್ತರ ನೀಡಿದ್ದಾರೆ.
37
ಸೂಪರ್ ಆದ್ರೆ ತಾಳಿ ಕಾಣಲ್ವಲ್ಲ
ಅಭಿಮಾನಿಯೊಬ್ಬರು ಅನುಶ್ರೀ ಫೋಟೊ ಸೂಪರ್ ಆದ್ರೆ ತಾಳಿ ಕಾಣಲ್ವಲ್ಲ ಎಂದಿದ್ದಾರೆ. ಅದಕ್ಕೆ ಉತ್ತರಿಸಿದ ಅನುಶ್ರೀ ಎಲ್ಲರಿಗೂ ಕಾಣ್ಲಿ ಅಂತ ತಾಳಿ ಹಾಕೋದಲ್ಲ ಸೀಮ… ನಂಗೆ ಕಂಡ್ರೆ ಸಾಕು. ಕೆಲವೊಂದು ಡ್ರೆಸ್ ಗೆ ಕಾಣಲ್ಲ ಎಂದು ಉತ್ತರ ನೀಡಿದ್ದಾರೆ.
ಮತ್ತೊಬ್ಬ ಅಭಿಮಾನಿ ಅಂದವನ್ನು ವರ್ಣಿಸಲು ಪದಗಳೇ ಇಲ್ಲ, ಅಷ್ಟು ಮುದ್ದಾಗಿ ಕಾಣುತ್ತಿದ್ದಾರೆ, ನಮ್ಮ ಅಕ್ಕ, ನಮ್ಮ ರೋಶನ್ ಭಾವ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆ ನಮ್ಮ ಅಕ್ಕನ, ಅದಕ್ಕೆ ಇಷ್ಟು ಚೆನ್ನಾಗಿ ಕಾಣುತ್ತೀರಿ ಎಂದು ಕಾಮೆಂಟ್ ಮಾಡಿದ್ದು, ಅದಕ್ಕೆ ಉತ್ತರಿಸಿದ ಅನುಶ್ರೀ ಹೌದು ರೋಷನ್ ಪ್ರೀತಿ ಹಾಗೂ ನಿಮ್ಮೆಲ್ಲರ ಆಶೀರ್ವಾದ ಎಂದಿದ್ದಾರೆ.
57
ಗೌರವದಿಂದ ಕೈಮುಗಿಬೇಕು ಅನಿಸ್ತಿದೆ
ಇನ್ನೊಬ್ಬರು ಅಭಿಮಾನಿ ಅನುಶ್ರೀ ಮೇಡಂ ನೋಡುತ್ತಿದ್ದರೆ ಗೌರವದಿಂದ ಕೈಮುಗಿಬೇಕು ಅನಿಸ್ತಿದೆ ಎಂದಿದ್ದಾರೆ. ಅದಕ್ಕೆ ಅನುಶ್ರೀ ಇದು ದೊಡ್ಡ ಮಾತು ಎಂದು ಹೇಳಿದ್ದಾರೆ. ನಿಮ್ಮಿಂದಾಗೆ ಡ್ರೆಸ್ ಅಂದ ಹೆಚ್ಚಿತು ಎಂದವರಿಗೆ ಇಲ್ಲಾ ಡ್ರೆಸ್ ತುಂಬಾನೆ ಚೆನ್ನಾಗಿದೆ ಎಂದಿದ್ದಾರೆ.
67
ಗಿಲ್ಲಿಗೆ ಸಪೋರ್ಟ್
ಇನ್ನು ಹಲವು ಜನರು ಬಿಗ್ ಬಾಸ್ ಸ್ಪರ್ಧಿಯಾದ ಗಿಲ್ಲಿಗೆ ಬೆಂಬಲ ನೀಡುವಂತೆ ಅನುಶ್ರೀಯವರಿಗೆ ಕೇಳಿದ್ದಾರೆ. ಗಿಲ್ಲಿ ನಿಮ್ಮ ತಮ್ಮ ಇದ್ದ ಹಾಗೆ ಅಲ್ವಾ? ಹಾಗಾಗಿ ಗಿಲ್ಲಿಗೆ ಬೆಂಬಲ ನೀಡಿ ಎಂದು ಕೇಳಿದ್ದಾರೆ, ಅದಕ್ಕೆ ಅನುಶ್ರೀ ಕೂಡ ಓಕೆ ಎನ್ನುವಂತೆ ಗಿಲ್ಲಿಯ ಸಿಂಬಲ್ ಇಮೋಜಿ ಕಾಮೆಂಟ್ ಮಾಡಿದ್ದಾರೆ.
77
ಡಿಕೆಡಿ ನಿರೂಪಕಿ
ನಿರೂಪಕಿ ಅನುಶ್ರೀಯವರು ಸದ್ಯ ಜೀ ಕನ್ನಡ ವಾಹಿನಿಯ’ ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ ಕಾರ್ಯಕ್ರಮದ ನಿರೂಪಣೆ ಮಾಡುತ್ತಿದ್ದಾರೆ. ಇದು ಡ್ಯಾನ್ಸ್ ರಿಯಾಲಿಟಿ ಶೋ ಆಗಿದ್ದು, ಶಿವರಾಜ್ ಕುಮಾರ್, ವಿಜಯ್ ರಾಘವೇಂದ್ರ, ರಚಿತಾ ರಾಮ್ ಹಾಗೂ ಅರ್ಜುನ್ ಜನ್ಯ ತೀರ್ಪುಗಾರರಾಗಿದ್ದಾರೆ.