Amruthadhaare ರೋಚಕ ಸಂಚಿಕೆ: ಅಕ್ಕ- ತಂಗಿ ಒಂದಾಗಾಯ್ತು, ದೀಪಿಕಾಗೆ ಸತ್ಯ ತಿಳಿದಾಯ್ತು; ಮುಂದೆ?

Published : Oct 09, 2026, 11:05 PM IST

ಅಮೃತಧಾರೆ ಧಾರಾವಾಹಿಯಲ್ಲಿ ಭೂಮಿಕಾ ಮತ್ತು ಮಲ್ಲಿ ಸೇರಿ ದೀಪಿಕಾಗೆ ಜೈದೇವ್ ಮಾಡಿದ ಮೋಸದ ಸತ್ಯವನ್ನು ತಿಳಿಸಿದ್ದಾರೆ. ಆಸ್ತಿ ಕಬಳಿಸಲು ಸಂಚು ರೂಪಿಸಿದ್ದ ಜೈದೇವ್ ಮತ್ತು ಶಕುಂತಲಾ ಬಣ್ಣ ಬಯಲಾಗಿದೆ. ಇದೀಗ ಕಥೆ ರೋಚಕ ಘಟ್ಟ ತಲುಪಿದ್ದು, ಮುಂದೇನು ಎಂಬ ಕುತೂಹಲ ಮೂಡಿಸಿದೆ.

PREV
16
ಕ್ಷಣ ಕ್ಷಣಕ್ಕೂ ಕುತೂಹಲ

ಅಮೃತಧಾರೆ ಸೀರಿಯಲ್​ (Amruthadhaare Serial) ಕ್ಷಣ ಕ್ಷಣಕ್ಕೂ ಕುತೂಹಲ ಕೆರಳಿಸುತ್ತಿದೆ. ಭೂಮಿಕಾ ವಾಪಸ್​ ಮನೆಗೆ ಬಂದಾಗಿದೆ. ದೀಪಿಕಾಳನ್ನು ಮಲ್ಲಿ ಹೆದರಿಸಿ ಸತ್ಯ ತಿಳಿದುಕೊಂಡಿದ್ದಾಳೆ.

26
ಭೂಮಿಕಾ-ದೀಪಿಕಾ ಎದುರು ಬದುರು

ದೀಪಿಕಾಳನ್ನು ಒಂದು ಕಡೆ ಕರೆದುಕೊಂಡು ಹೋಗಿ ಎಲ್ಲಾ ವಿಷಯವನ್ನು ಮಲ್ಲಿ ಹೇಳಿದ್ದಾಳೆ. ಮೊದಲಿಗೆ ತಾನೇ ಭೂಮಿಕಾ ಎಂದು ನಾಟಕ ಮಾಡಿದ ದೀಪಿಕಾ, ಕೊನೆಗೆ ಅಸಲಿ ಭೂಮಿಕಾ ಎದುರಿಗೆ ಬಂದಾಗ ಸುಸ್ತಾಗಿದ್ದಾಳೆ.

36
ದೀಪಿಕಾಗೆ ಅಸಲಿ ವಿಷಯ

ಆ ಬಳಿಕ ಭೂಮಿಕಾ ಮತ್ತು ಮಲ್ಲಿ ಸೇರಿ ಎಲ್ಲಾ ವಿಷಯಗಳನ್ನೂ ದೀಪಿಕಾಗೆ ಹೇಳಿದ್ದಾರೆ. ಜೈದೇವ ಹೇಗೆ ಮಲ್ಲಿಯ ಬದುಕನ್ನು ನಾಶ ಮಾಡಿದ ಎಂದೂ ಹೇಳಿದ್ದಾರೆ.

46
ಮೋಸ ಹೋದದ್ದು ತಿಳಿದಿದೆ

ಇದನ್ನು ಕೇಳಿದ ದೀಪಿಕಾಗೆ ತಾನು ಮೋಸ ಹೋಗಿರುವುದು ತಿಳಿದಿದೆ. ಏನೂ ವಿಚಾರ ಮಾಡದೇ ಜೈದೇವ್​ ಮತ್ತು ಶಕುಂತಲಾರನ್ನು ನಂಬಿರುವುದಾಗಿ ಅವಳಿಗೆ ತಿಳಿದಿದೆ.

56
ರೋಚಕ ಘಟ್ಟ ತಲುಪಿದೆ

ಇದೀಗ ಸಕತ್​ ರೋಚಕ ಘಟ್ಟವನ್ನು ತಲುಪಿದೆ ಅಮೃತಧಾರೆ. ಈಗ ಮಲ್ಲಿ ಮತ್ತು ಭೂಮಿಕಾರ ಮುಂದಿನ ಹೆಜ್ಜೆ ಏನು ಎನ್ನುವ ಕುತೂಹಲ ಇದೆ.

66
ಆಸ್ತಿ ವರ್ಗಾವಣೆ

ಅದೇ ಇನ್ನೊಂದೆಡೆ, ದೀಪಿಕಾಳ ಸಹಿ ಹಾಕಿಸಿಕೊಂಡು ಎಲ್ಲಾ ಆಸ್ತಿಯನ್ನೂ ತನ್ನ ಪಾಲಿಗೆ ಮಾಡಿಕೊಳ್ಳಲು ಹೊರಟಿದ್ದಾನೆ ಜೈದೇವ. ಇದಕ್ಕೆ ಶಕುಂತಲಾ ಬೆಂಬಲ ಕೊಟ್ಟಿದ್ದಾಳೆ. ಆದರೆ ಅಷ್ಟರಲ್ಲಿಯೇ ದೀಪಿಕಾಗೆ ಸತ್ಯ ಗೊತ್ತಾಗಿದೆ. ಮುಂದೇನು?

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories