ಕರ್ಣನಿಗೆ ತನ್ನ ಹೆತ್ತ ತಾಯಿ ಸೀತಾ ಸಿಕ್ಕಿದ್ದಕ್ಕೆ ಅತೀವ ಸಂತೋಷವಾಗಿದೆ. ಆದರೆ ಗಂಡನ ಮೊದಲ ಪತ್ನಿ ಮನೆಗೆ ಬಂದರೆ ತನ್ನ ಸ್ಥಾನವೇನು ಎಂದು ಹೆದರಿರುವ ಮಾಲತಿ ಮನೆ ಬಿಟ್ಟು ಹೋಗುವ ನಿರ್ಧಾರ ಮಾಡಿದ್ದಾಳೆ. ಮಾಲತಿಯನ್ನು ಕರ್ಣ ತಡೆಯುತ್ತಾನಾ ಎಂಬ ಕುತೂಹಲ ಮೂಡಿದೆ.
ಕರ್ಣ ಸೀರಿಯಲ್ನಲ್ಲಿ ಒಂದೆಡೆ ಕರ್ಣನಿಗೆ ಹೆತ್ತ ಅಮ್ಮ ಸೀತಾ ಸಿಕ್ಕ ಖುಷಿಯಾಗಿದ್ದರೆ, ಅದೇ ಇನ್ನೊಂದೆಡೆ, ರಮೇಶನ ಪತ್ನಿ ಮಾಲತಿಗೆ ಸಂಕಟ ಶುರುವಾಗಿದೆ.
26
ಕರ್ಣನ ಖುಷಿಗೆ ಪಾರವೇ ಇಲ್ಲ
ಭುವನೇಶ್ವರಿ ಎಂದು ಹೆಸರು ಬದಲಾಯಿಸಿಕೊಂಡಿರುವ ಸೀತಾ ತಾನು ಮನೆಗೆ ಬರುವುದಾಗಿ ಹೇಳಿದ್ದಾಳೆ. ಇದರಿಂದ ಕರ್ಣನ ಖುಷಿಗೆ ಪಾರವೇ ಇಲ್ಲವಾಗಿದೆ. 30 ವರ್ಷಗಳ ಕಾಲ ಹೆತ್ತ ಅಮ್ಮನಿಗಾಗಿ ಹಂಬಲಿಸಿದ ಆ ಮನಸ್ಸು ಅದೆಷ್ಟು ಸಂತೋಷದಿಂದ ಕೂಡಿರುತ್ತದೆ ಎಂದು ಆತನೇ ಬಲ್ಲ.
36
ಮಾಲತಿಯ ಸಂಕಟ
ಆದರೆ, ಈ ಖುಷಿಯಲ್ಲಿ ಆತನಿಗೆ ಹೆತ್ತ ಅಮ್ಮ ಮನೆಗೆ ಎಂಟ್ರಿ ಕೊಟ್ಟರೆ, ಇಷ್ಟು ವರ್ಷ ಹೆತ್ತಮ್ಮನಿಗಿಂತಲೂ ಮಿಗಿಲಾಗಿ ಪ್ರೀತಿ ತೋರಿದ ಮಾಲತಿ ಅಮ್ಮನ ಸ್ಥಿತಿ ಏನಾಗಬಹುದು ಎನ್ನುವ ಯೋಚನೆ ಆತ ಮಾಡಿರಲಿಲ್ಲ.
ಕರ್ಣನನ್ನು ಮಗನಿಗಿಂತಲೂ ಮಿಗಿಲಾಗಿ ಸಲಹುತ್ತಿರುವ ಮಾಲತಿಗೆ, ಒಂದೆಡೆ ಕರ್ಣನಿಗೆ ಅಮ್ಮ ಸಿಕ್ಕ ಖುಷಿಯಾದರೆ, ಅದೇ ಇನ್ನೊಂದೆಡೆ, ಗಂಡನ ಮೊದಲ ಪತ್ನಿ ಮನೆಗೆ ಬಂದರೆ ತನಗೇನು ಕೆಲಸ ಎನ್ನುವ ಭೀತಿ.
56
ಮನೆ ಬಿಟ್ಟು ಹೋಗುವ ನಿರ್ಧಾರ
ಇದೇ ಕಾರಣಕ್ಕೆ ತಾನು ಮನೆ ಬಿಟ್ಟು ಹೋಗುತ್ತೇನೆ ಎಂದು ಅವಳು ಹೇಳಿದಾಗ, ಎಲ್ಲರೂ ಆಕೆಯ ಮನವೊಲಿಸಲು ಯತ್ನಿಸಿದ್ದಾರೆ. ಆದರೆ ಸೀತಾ ವಾಪಸ್ ಬಂದರೆ ತನಗೆ ಆ ಮನೆಯಲ್ಲಿ ಸ್ಥಾನ ಇಲ್ಲ ಎನ್ನುವುದು ಮಾಲತಿ ಅನಿಸಿಕೆ.
66
ತಡೀತಾನಾ ಕರ್ಣ?
ಮಾಲತಿ ಅಮ್ಮ ಮನೆ ಬಿಟ್ಟು ಹೋಗುವುದನ್ನು ತಡೆಯಲು ಸಾಧ್ಯವಿರುವುದು ಕರ್ಣನಿಗೆ ಮಾತ್ರ ಸಾಧ್ಯವಿದೆ. ಅದನ್ನು ಕರ್ಣ ಮಾಡುತ್ತಾನಾ? ನಿಜವಾಗಿಯೂ ಸೀತಾ ಮನೆಗೆ ಬರುತ್ತಾಳಾ ಎನ್ನುವ ಪ್ರಶ್ನೆ ಮುಂದಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.