BBK 12: ಗಿಲ್ಲಿ ನಟನ ವಿರುದ್ಧ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೇಡು ತೀರಿಸಿಕೊಳ್ಳಲು ರೆಡಿಯಾದ ರಘು; ಪ್ಲ್ಯಾನ್‌ ಏನು?

Published : Dec 07, 2025, 04:23 PM IST

Bigg Boss Kannada 12: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಗಿಲ್ಲಿ ನಟ ಲವ್ಸ್‌ ರಘು ಎನ್ನೋ ಥರ ಇವರ ಬಂಧ ಇತ್ತು. ಆದರೆ ಈಗ ಇವರಿಬ್ಬರ ಮಧ್ಯೆ ಮನಸ್ತಾಪ ಬಂದಿದೆ. ಈ ಜೋಡಿ ದೂರ ಆಗಿದೆ. ಈಗ ಗಿಲ್ಲಿ ನಟನ ವಿರುದ್ಧ ರಘು ಅಂತಾರಾಷ್ಟ್ರೀಯ ಮಟ್ಟದಲ್ಲಿ ಸೇಡು ತೀರಿಸಿಕೊಳ್ಳಲು ರೆಡಿಯಾಗಿದ್ದಾರೆ.

PREV
15
24/7 ಗಂಟೆಗಳ ಕಾಲ ಲೈವ್‌

ಹೌದು, ನಿತ್ಯ ಒಂದೂವರೆ ಗಂಟೆಗಳ ಕಾಲ ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಎಪಿಸೋಡ್‌ ಪ್ರಸಾರ ಆಗುವುದು. 24/7 ಗಂಟೆಗಳ ಕಾಲ ಜಿಯೋ ಹಾಟ್‌ಸ್ಟಾರ್‌ ಲೈವ್‌ನಲ್ಲಿ ಬಿಗ್‌ ಬಾಸ್‌ ನೋಡಬಹುದು. ಗಿಲ್ಲಿ ನಟನ ಮೇಲೆ ಹೇಗೆ ಸೇಡು ತೀರಿಸಿಕೊಳ್ಳಬಹುದು ಎಂದು ಈಗ ಲೈವ್‌ನಲ್ಲಿ ರಘು ಅವರು ಹೇಳಿರೋದು ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗ್ತಿದೆ.

25
ರಘು, ಗಿಲ್ಲಿ ಒಟ್ಟಿಗೆ ಇರುತ್ತಿದ್ದರು

ಆರಂಭದಲ್ಲಿ ಗಿಲ್ಲಿ ನಟ ಅಂತೂ ರಘು ಜೊತೆಯೇ ಇರುತ್ತಿದ್ದರು. ಯಾವಾಗ ನೋಡಿದರೂ ರಘು ಮೈಮೇಲೆ ಒರಗಿ ಕೂರೋದು, ರಘು ತೊಡೆ ಮೇಲೆ ಮಲಗೋದು ಮಾಡುತ್ತಿದ್ದರು. ಇನ್ನು ಟಾಸ್ಕ್‌ ಬರಲೀ, ಡ್ಯಾನ್ಸ್‌ ಇರಲೀ ರಘು ಜೊತೆಯೇ ಇರುತ್ತಿದ್ದರು. ಆಮೇಲೆ ಇವರಿಬ್ಬರ ಮಧ್ಯೆ ಮನಸ್ತಾಪ ಬಂದಿದೆ.

35
ಗಿಲ್ಲಿ ಕಂಡ್ರೆ ರಘುಗೆ ಯಾಕೆ ಇಷ್ಟ ಆಗ್ತಿಲ್ಲ?

ಗಿಲ್ಲಿ ನಟ ಬಾಡಿ ಶೇಮಿಂಗ್‌ ಮಾಡೋದು, ಬೇರೆಯವರನ್ನು ಕೆಳಗಡೆ ಹಾಕಿ ಮಾತನಾಡೋದು, ಕಾಮಿಡಿ ಮಾಡೋದು ರಘುಗೆ ಇಷ್ಟ ಆಗಿಲ್ಲ. ಹೊರಗಡೆ ಡಿಸೈನರ್ಸ್‌ ಪ್ರೀತಿಯಿಂದ ಗಿಲ್ಲಿ ನಟನಿಗೆ ಡ್ರೆಸ್‌ ಕಳಿಸಿದರೂ ಕೂಡ ಅವರು ಹಾಕಿಕೊಳ್ತಿಲ್ಲ. ಬದಲಿಗೆ ಬನಿಯನ್‌, ಚಡ್ಡಿಯಲ್ಲಿ ಇರುತ್ತಾರೆ ಎನ್ನೋದು ರಘುಗೆ ಬೇಸರ ತಂದಿತ್ತು. ಇದನ್ನು ಹೇಳಿದಾಗ ಗಿಲ್ಲಿ “ನನ್ನಿಷ್ಟ” ಎಂದು ಹೇಳಿ ಉಲ್ಟಾ ಮಾಡಿದ್ದರು.

45
ರಘುವನ್ನು ಕೆಣಕಿರೋ ಗಿಲ್ಲಿ

ಸಿನಿಮಾಗಳಲ್ಲಿ ವೈಲೆಂಟ್‌ ಅಥವಾ ವಿಲನ್‌ ಪಾತ್ರ ಮಾಡುತ್ತಿದ್ದ ರಘು ಅವರು ಬಿಗ್‌ ಬಾಸ್‌ ಮನೆಯಲ್ಲಿ ಕಿಚನ್‌ ಕೆಲಸವನ್ನು ಮಾಡುತ್ತಾರೆ, ಮನೆ ಕೆಲಸ ಮಾಡುತ್ತಾರೆ. ಇದನ್ನು ಗಿಲ್ಲಿ ನಟ ಆಡಿಕೊಂಡಿದ್ದರು. ಇದು ರಘುಗೆ ಇಷ್ಟವೇ ಆಗಿರಲಿಲ್ಲ. ನನ್ನ ವ್ಯಕ್ತಿತ್ವವನ್ನು ಬದಲಾಯಿಸುವ ಪ್ರಯತ್ನ ಮಾಡುತ್ತಿದ್ದಾನೆ ಎಂದು ರಘು ದೂರಿದ್ದರು.

55
ಪ್ಲ್ಯಾನ್‌ ಏನು?

ಈಗ ಗಿಲ್ಲಿ ನಟನನ್ನು ಫಾರಿನ್‌ಗೆ ಕರೆದುಕೊಂಡು ಹೋಗಿ, ಅಲ್ಲಿ ಅವನ ಪಾಸ್‌ಪೋರ್ಟ್‌ ಹರಿದು ಹಾಕಬೇಕು ಎಂದು ರ‍ಘು ಅಂದುಕೊಂಡಿದ್ದಾರಂತೆ. ಇದನ್ನು ಗಿಲ್ಲಿ ನಟ ಅವರು ರಜತ್‌ ಬಳಿ ಹೇಳಿದ್ದಾರೆ. ಆಗ ರಜತ್‌ ಅವರು “ಇನ್ನೂ ಏನೇನೋ ಪ್ಲ್ಯಾನ್‌ ರೆಡಿಯಾಗಿದೆ” ಎಂದಿದ್ದಾರೆ. ಆಗ ಗಿಲ್ಲಿ, “ಇಂಟರ್‌ನ್ಯಾಶನಲ್‌ ಲೆವೆಲ್‌ನಲ್ಲಿ ನನ್ನ ಮೇಲೆ ಗರ್ಜು ಇಟ್ಟುಕೊಂಡಿದ್ದಾರೆ” ಎಂದು ಹೇಳಿದ್ದು, ಎಲ್ಲರೂ ಈ ಮಾತಿಗೆ ನಕ್ಕಿದ್ದಾರೆ.

Read more Photos on
click me!

Recommended Stories