Amruthadhaare- ಅಖಿಲಾಂಡೇಶ್ವರಿ ತಪ್ಪಿಗೆ ಗೌತಮ್​ ಪ್ರಾಣಕ್ಕೆ ಕುತ್ತು? ಜ್ಯೋತಿಷಿ ಹೇಳಿದ ಮಾತು ನಿಜವಾಯ್ತಾ

Published : May 18, 2026, 07:27 PM IST

ಜೈಲಿನಿಂದ ಹೊರಬಂದಿರುವ ಜೈದೇವನಿಗೆ, ಅಖಿಲಾಂಡೇಶ್ವರಿ ಪತ್ತೆಹಚ್ಚಿದ ಗೌತಮ್-ಭೂಮಿಕಾ ಮಗಳ ಸುಳಿವನ್ನು ಶಕುನಿಮಾಮಾ ನೀಡಿದ್ದಾನೆ. ಇದರಿಂದ, ಜ್ಯೋತಿಷಿ ನುಡಿದಂತೆ ಅದೇ ಮಗಳಿಂದ ಗೌತಮ್ ಜೀವಕ್ಕೆ ಅಪಾಯ ಎದುರಾಗುವ ಸಾಧ್ಯತೆ ದಟ್ಟವಾಗಿದೆ.

PREV
15
ಹೊರಬಂದ ಜೈದೇವ

ಅಮೃತಧಾರೆ ಸೀರಿಯಲ್​ (Amruthadhaare Serial) ಸದ್ಯ ರೋಚಕ ಹಂತ ತಲುಪಿದೆ. ಜೈಲುಪಾಲಾಗಿದ್ದ ಜೈದೇವನನ್ನು ಶಕುನಿಮಾಮಾ ಲಕ್ಷ್ಮೀಕಾಂತ ಬಿಡಿಸಿಕೊಂಡು ಬಂದಿದ್ದಾನೆ. ಸದ್ಯ ಅವರು ದಿಯಾ ಮನೆಯಲ್ಲಿ ಮನೆಯಾಳಿನ ರೀತಿಯಲ್ಲಿ ವಾಸ ಮಾಡ್ತಿದ್ದಾನೆ.

25
ಮಗಳನ್ನು ಪತ್ತೆ ಹಚ್ಚಿದ ಅಖಿಲಾಂಡೇಶ್ವರಿ

ಅದೇ ಇನ್ನೊಂದೆಡೆ, ಅಖಿಲಾಂಡೇಶ್ವರಿ ತನ್ನ ಎನ್‌ಜಿಓ ಮೂಲಕ ಗೌತಮ್‌ ಮತ್ತು ಭೂಮಿಕಾರ ಕಳೆದು ಹೋಗಿರುವ ಮಗಳನ್ನು ಹುಡುಕಿದ್ದಾಳೆ. ಈ ವಿಷ್ಯವನ್ನು ಗೌತಮ್‌ ಅಥವಾ ಭೂಮಿಕಾಗೆ ಹೇಳಲು ಮಾಡಿದ ಪ್ರಯತ್ನ ವಿಫಲವಾಗಿದೆ. ಗೌತಮ್‌ ಮೀಟಿಂಗ್‌ನಲ್ಲಿ ಬಿಜಿ ಇದ್ದುದರಿಂದ ಫೋನ್‌ ರಿಸೀವ್‌ ಮಾಡ್ಲೇ ಇಲ್ಲ.

35
ಶಕುನಿಮಾಮಂಗೆ ವಿಷ್ಯ

ಈ ಕಾರಣದಿಂದ ಅಖಿಲಾಂಡೇಶ್ವರಿ ಶಕುನಿಮಾಮಾನಿಗೆ ವಿಷ್ಯ ತಿಳಿಸಿದ್ದಾಳೆ. ಅಲ್ಲಿಗೆ ಬಹುದೊಡ್ಡ ಕುತಂತ್ರದ ಭಾಗ ಶುರುವಾದಂತಿದೆ.

45
ಮಗಳಿಂದ ಜೀವಕ್ಕೆ ಅಪಾಯ

ಇದಾಗಲೇ ಜ್ಯೋತಿಷಿ ಗೌತಮ್‌ ಜೀವಕ್ಕೆ ಮಗಳಿಂದ ಅಪಾಯ ಇದೆ ಎಂದು ಹೇಳಿದ್ದರು. ಇದೀಗ ಆಗಿರುವ ಘಟನೆ ನೋಡಿದರೆ, ಗೌತಮ್‌ನ ಆ ಕಳೆದು ಹೋಗಿರುವ ಮಗಳಿಂದಲೇ ಅನಾಹುತ ಎನ್ನುವುದು ಅನ್ನಿಸುತ್ತಿದೆ.

55
ಜ್ಯೋತಿಷಿ ಭವಿಷ್ಯ ನಿಜವಾಗತ್ತಾ?

ಈ ವಿಷ್ಯವನ್ನು ಶಕುನಿಮಾಮಾ ಗೌತಮ್‌ ಮತ್ತು ಭೂಮಿಕಾಗೆ ತಿಳಿಸದೇ ನೇರವಾಗಿ ಜೈದೇವ್‌ಗೆ ತಿಳಿಸುತ್ತಾನೆ. ಆಕೆಯನ್ನು ಇಟ್ಟುಕೊಂಡು ಜೈದೇವ್‌ ಆಟವಾಡುತ್ತಾನೆ ಎನ್ನುವುದು ಸದ್ಯಕ್ಕಿರುವ ಸಂದೇಹ. ಹೀಗೆ ಆದರೆ ಜ್ಯೋತಿಷಿ ಹೇಳಿರುವಂತೆ ಅದೇ ಮಗುವಿನಿಂದ ಗೌತಮ್‌ ಜೀವಕ್ಕೆ ಅಪಾಯ ಇರುವ ಸಾಧ್ಯತೆ ಇದೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories