ಮಾಲೆ ಧರಿಸಿ ಕನ್ನಿ ಸ್ವಾಮಿಯಾಗಿ ಶಬರಿಮಲೆ ಅಯ್ಯಪ್ಪ ದರ್ಶನ ಪಡೆದ ಭಾಗ್ಯ ಪುತ್ರ ಗುಂಡಣ್ಣ

Published : May 18, 2026, 04:48 PM IST

Nihar Gowda: ಭಾಗ್ಯಲಕ್ಷ್ಮಿ ಧಾರಾವಾಹಿಯಲ್ಲಿ ಭಾಗ್ಯ ಮತ್ತು ತಾಂಡವ್ ಪುತ್ರ ಗುಂಡಣ್ಣ-ತನ್ಮಯ್ ಪಾತ್ರದಲ್ಲಿ ನಟಿಸುತ್ತಿರುವ ಬಾಲ ನಟ ನಿಹಾರ್ ಗೌಡ, ಅಯ್ಯಪ್ಪ ಮಾಲೆ ಧರಿಸಿ, ಶಬರಿ ಮಲೆ ಸ್ವಾಮಿ ಮಣಿಕಂಠನ ದರ್ಶನ ಪಡೆದು ಬಂದಿದ್ದಾರೆ. ಫೋಟೊಗಳನ್ನು ಹಂಚಿಕೊಂಡಿದ್ದಾರೆ. 

PREV
16
ನಿಹಾರ್ ಗೌಡ

ಕನ್ನಡ ಕಿರುತೆರೆಯಲ್ಲಿ ಬಾಲ ನಟನಾಗಿ ಗುರುತಿಸಿಕೊಂಡಿರುವ ನಟ ನಿಹಾರ್ ಗೌಡ. ಇವರು ಸದ್ಯ ಕಲರ್ಸ್ ಕನ್ನಡ ವಾಹಿನಿಯ ‘ಭಾಗ್ಯಲಕ್ಷ್ಮೀ’ ಧಾರಾವಾಹಿಯಲ್ಲಿ ಭಾಗ್ಯ ಮಗನಾಗಿ ನಟಿಸುತ್ತಿದ್ದಾರೆ.

26
ಭಾಗ್ಯನ ಮುದ್ದಿನ ಮಗ ಗುಂಡಣ್ಣ

ಅಮ್ಮನನ್ನು ತುಂಬಾ ಪ್ರೀತಿಸುವ, ಅಮ್ಮನಿಗೆ ನೋವಾಗದಂತೆ ಸದಾ ನೆರವಾಗುವ ಮುದ್ದಿನ ಗುಂಡಣ್ಣ ಪಾತ್ರವನ್ನು ಜನರು ಸಿಕ್ಕಾಪಟ್ಟೆ ಇಷ್ಟಪಟ್ಟಿದ್ದಾರೆ. ಜನ ಇವರು ಹೋದಲ್ಲೆಲ್ಲಾ ಗುಂಡಣ್ಣ ಎಂದೇ ಕರೆಯುತ್ತಾರೆ, ಅಷ್ಟೊಂದು ಜನಪ್ರಿಯ ಪಾತ್ರ ಇವರದ್ದು.

36
ಅಯ್ಯಪ್ಪ ಮಾಲೆ ಧರಿಸಿದ ನಿಹಾರ್

ಇದೀಗ ನಿಹಾರ್ ಗೌಡ ಮೊದಲ ಬಾರಿಗೆ ಅಯ್ಯಪ್ಪ ಮಾಲೆ ಧರಿಸಿ, ಕನ್ನಿ ಸ್ವಾಮಿಯಾಗಿ ಶಬರಿಮಲೆ ಸ್ವಾಮಿ ಮಣಿಕಂಠನ ದರ್ಶನ ಪಡೆದು ಬಂದಿದ್ದಾರೆ. ಈ ಕುರಿತು ನಟ ಇತ್ತೀಚೆಗೆ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಹಾಕಿ ತಿಳಿಸಿದ್ದರು.

46
ಮೊದಲ ಬಾರಿಗೆ ಕನ್ನಿ ಸ್ವಾಮಿಯಾಗಿ

ತಾವು ಕಪ್ಪು ಬಣ್ಣದ ಅಯ್ಯಪ್ಪ ವಸ್ತ್ರ ಹಾಗೂ ಮಾಲೆಯನ್ನು ಧರಿಸಿರುವ ಫೋಟೊಗಳನ್ನು ಹಾಗೂ ಪೂಜೆ ಮಾಡುವ, ಕಟ್ಟ ತುಂಬಿಸುವ ವಿಡಿಯೋ ಹಂಚಿಕೊಂಡಿರುವ ನಿಹಾರ್ ಗೌಡ ಮೊದಲ ಬಾರಿಗೆ ಖನ್ಯಾಸ್ವಾಮಿ ….. SWAMIYE SHARANAM AYYAPPA. Blessed journey starts today ಎಂದು ಬರೆದುಕೊಂಡಿದ್ದಾರೆ.

56
ಶಬರಿಮಲೆ ಅಯ್ಯಪ್ಪಸ್ವಾಮಿ

ಶಬರಿಮಲೆ ಒಂದು ಪುಣ್ಯ ಕ್ಷೇತ್ರವಾಗಿದ್ದು, ಇಲ್ಲಿಗೆ ಮೊದಲ ಬಾರಿಗೆ ಮಾಲೆ ಧರಿಸಿ ಹೋಗುವವರನ್ನು ಕನ್ನಿ ಸ್ವಾಮಿ ಎಂದು ಕರೆಯಲಾಗುತ್ತದೆ. ಹೆಚ್ಚಾಗಿ ಭಕ್ತರು ಸಂಕ್ರಮಣದ ಸಮಯದಲ್ಲಿ ಅಯ್ಯಪ್ಪ ಸ್ವಾಮಿ ದರ್ಶನ ಪಡೆದು ಬರುತ್ತಾರೆ. ಪ್ರತಿತಿಂಗಳ ಸಂಕ್ರಮಣದ ಸಮಯದಲ್ಲಿ ಭಕ್ತರಿಗೆ ಅವಕಾಶ ನೀಡಲಾಗುತ್ತದೆ. ಹಾಗೆಯೇ ನಿಹಾರ್ ಗೌಡ ಕೂಡ ದರ್ಶನ ಪಡೆದು ಬಂದಿದ್ದಾರೆ. ಫೋಟೊ ಮತ್ತು ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ.

66
ಧ್ರುವ ಸರ್ಜಾ ಅವರ ಕೆಡಿ ಸಿನಿಮಾದಲ್ಲಿ ನಟನೆ

ಅಂದ ಹಾಗೆ ಭಾಗ್ಯಲಕ್ಷ್ಮೀ ಧಾರಾವಾಹಿಯ ಈ ಗುಂಡಣ್ಣ, ಪ್ರೇಮ್ ನಿರ್ದೇಶನದ ಹಾಗೂ ಧ್ರುವ ಸರ್ಜಾ ನಟಿಸಿರುವ ಇತ್ತೀಚೆಗೆ ಬಿಡುಗಡೆಯಾಗಿರುವ ಬ್ಲಾಕ್ ಬಸ್ಟರ್ ಸಿನಿಮಾ ಕೆಡಿಯಲ್ಲಿ ಧ್ರುವ ಅವರ ಬಾಲ್ಯದ ಪಾತ್ರದಲ್ಲಿ ನಿಹಾರ್ ಗೌಡ ನಟಿಸಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories