6 ವರ್ಷಗಳ ಕಾಲ ಸೂಪರ್‌ ಹಿಟ್‌ ಆಗಿ ಮೆರೆದಿದ್ದ Agnisakshi Serial; ಪಾರ್ಟ್‌ 2ರಲ್ಲಿ ಹೀರೋ ಯಾರು?

Published : Mar 13, 2026, 10:45 AM IST

Agnisakshi Kannada Serial Part 2: ಕನ್ನಡದಲ್ಲಿ ಸಾಕಷ್ಟು ಮೆಗಾ ಧಾರಾವಾಹಿಗಳು ಬಂದಿದ್ದು, ಅವುಗಳಲ್ಲಿ ಅಗ್ನಿಸಾಕ್ಷಿ ಸೀರಿಯಲ್‌ಗೆ ಅಗ್ರಗಣ್ಯ ಸ್ಥಾನವಿದೆ. ಈಗಲೂ ಸಿದ್ದಾರ್ಥ್-ಸನ್ನಿಧಿ ಜೋಡಿಗೆ ಅಭಿಮಾನಿಗಳಿದ್ದಾರೆ. ಈಗ ಈ ಟೀಂನಿಂದ ಗುಡ್‌ನ್ಯೂಸ್‌ ಸಿಕ್ಕಿದೆ. ಕಲರ್ಸ್‌ ಕನ್ನಡವೇ ಈ ಬಗ್ಗೆ ಹೇಳಿದೆ. 

PREV
15
ಆರು ವರ್ಷ ಪ್ರಸಾರ ಆಗಿದ್ದ ಸೀರಿಯಲ್

2013 ಡಿಸೆಂಬರ್‌ನಿಂದ 2020ರವರೆಗೆ ಪ್ರಸಾರ ಆಗಿದ್ದ ಅಗ್ನಿಸಾಕ್ಷಿ ಧಾರಾವಾಹಿ ಈಗಲೂ ವೀಕ್ಷಕರಿಗೆ ಅಚ್ಚುಮೆಚ್ಚು. ಈ ಸೀರಿಯಲ್‌ ಅಂತ್ಯವಾಗಿ ಆರು ವರ್ಷಗಳು ಕಳೆದಿವೆ.

25
ಪಾತ್ರವನ್ನು ನೆನಪಿಟ್ಟುಕೊಂಡಿರೋ ಜನರು

ಈ ಸೀರಿಯಲ್‌ನ ಪಾತ್ರಧಾರಿಗಳನ್ನು ಜನರು ಇಂದು ಕೂಡ ನೆನಪಿಟ್ಟುಕೊಂಡಿದ್ದಾರೆ. ಈ ಪಾತ್ರಧಾರಿಗಳು ಬೇರೆ ಪ್ರಾಜೆಕ್ಟ್‌ಗಳನ್ನು ಮಾಡಿದ್ದರೂ ಕೂಡ,  ಕಲಾವಿದರಿಗೆ ಜನರು ಸಿಕ್ಕಾಗ “ನೀವು ಅಗ್ನಿಸಾಕ್ಷಿ ಸೀರಿಯಲ್‌ ಮಾಡಿದ್ರಿ ಅಲ್ವಾ?” ಎಂದು ಮಾತನಾಡಿಸೋದಿದೆ.

35
ಪ್ರೋಮೋ ರಿಲೀಸ್‌ ಆಗಿದೆ

ಈಗ ಅಗ್ನಿಸಾಕ್ಷಿ ಧಾರಾವಾಹಿ ಟೈಟಲ್‌ ಇಟ್ಟುಕೊಂಡು, ಹೊಸ ಕಥೆ ಬರುತ್ತಿದೆ. ಹೌದು, ಸೀರಿಯಲ್‌ ಮುಗಿದು ಆರು ವರ್ಷಗಳ ಬಳಿ ಇದೇ ಟೈಟಲ್‌ ಇಟ್ಟುಕೊಂಡು ಹೊಸ ಧಾರಾವಾಹಿ ಬರುತ್ತಿದೆ. 

ಕಣ್ಮುಂದೆ ಬಂದ್ರೆ ಸಹಿಸೋಕಾಗಲ್ಲ. ಕಾಣದೇ ಹೋದ್ರೆ ಬದುಕೋಕೇ ಆಗಲ್ಲ! ಎಂಬ ಕ್ಯಾಪ್ಶನ್‌ ಅಡಿಯಲ್ಲಿ ಪ್ರೋಮೋ ಕೂಡ ರಿಲೀಸ್‌ ಆಗಿದೆ.

45
ಯಾರು ಹೀರೋ ಆಗ್ತಾರೆ?

ಅಗ್ನಿಸಾಕ್ಷಿ ಧಾರಾವಾಹಿಯ ಪ್ರೋಮೋ ಕೂಡ ರಿಲೀಸ್‌ ಆಗಿದ್ದು, ವೀಕ್ಷಕರಿಗೆ ಅಚ್ಚರಿ ತಂದಿದೆ. ಅಂದಹಾಗೆ ಈ ಧಾರಾವಾಹಿಯಲ್ಲಿ ಯಾರು ಹೀರೋ ಆಗಲಿದ್ದಾರೆ? ಯಾರು ಹೀರೋಯಿನ್‌ ಎಂಬ ಪ್ರಶ್ನೆ ಇರಬಹುದು.

55
ಹೀರೋ, ಹೀರೋಯಿನ್ ಯಾರು?

ಹೀರೋಯಿನ್‌ ಬಗ್ಗೆ ಇನ್ನೂ ಮಾಹಿತಿ ಇಲ್ಲ. ಆದರೆ ಲಕ್ಷ್ಮೀ ಬಾರಮ್ಮ ಧಾರಾವಾಹಿಯ ವೈಷ್ಣವ್‌ ಪಾತ್ರಧಾರಿ ಶಮಂತ್‌ ಬ್ರೋ ಗೌಡ ಅವರು ಈ ಸೀರಿಯಲ್‌ನಲ್ಲಿ ನಟಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಜೀ ಕನ್ನಡ ಧಾರಾವಾಹಿಯ ನಾಯಕಿಯೊಬ್ಬರು ಈ ಧಾರಾವಾಹಿಯಲ್ಲಿ ನಟಿಸಲಿದ್ದಾರೆ ಎನ್ನಲಾಗ್ತಿದೆ. ಸೀರಿಯಲ್‌ ಪ್ರಸಾರ ಆದ್ಮೇಲೆ ಯಾರು ಹೀರೋ? ಯಾರು ಹೀರೋಯಿನ್‌ ಎಂದು ಗೊತ್ತಾಗುವುದು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

Read more Photos on
click me!

Recommended Stories