Gautam Bhoomika story in Amruthadhaare: ಗೌತಮ್-ಭೂಮಿಕಾ ರೋಮ್ಯಾನ್ಸ್ ನೋಡದೆ ಬೇಸರವಾಗಿದ್ದ ವೀಕ್ಷಕರು ಈಗ "ನಮ್ಮ ಗೌತಮ್ ದಿವಾನ್-ಭೂಮಿ ಹೀಗೆ ಇರಲಪ್ಪಾ" ಅಂದುಕೊಳ್ಳುತ್ತಿದ್ದಾರೆ. ಆದರೆ ನೀವು ದಿನನಿತ್ಯ ಧಾರವಾಹಿ ವೀಕ್ಷಿಸುತ್ತಿದ್ದರೆ ನಿಮಗಿಲ್ಲೊಂದು ಬದಲಾವಣೆ ಕಾಣಿಸುತ್ತದೆ.
ವೀಕ್ಷಕರ ಬಹುದಿನದ ಆಸೆಯಂತೆ 'ಅಮೃತಧಾರೆ' ಧಾರಾವಾಹಿಯಲ್ಲಿ ಭೂಮಿಕಾ-ಗೌತಮ್ ಒಂದಾಗಿದ್ದಾರೆ. ಮನಸ್ಸಿನಲ್ಲಿ ಬೆಟ್ಟದಷ್ಟು ಪ್ರೀತಿ, ಆಸೆಯಿದ್ದರೂ ಹೇಳಿಕೊಳ್ಳದೆ ಮೌನವಾಗಿದ್ದ ಭೂಮಿ ಈಗ ಗೌತಮ್ ಮೇಲೆ ಪ್ರೀತಿಯ ಧಾರೆಯನ್ನೇ ಎರೆಯುತ್ತಿದ್ದಾಳೆ.
26
ದಿನನಿತ್ಯ ಧಾರವಾಹಿ ವೀಕ್ಷಿಸುತ್ತಿದ್ದೀರಾ?
ತುಂಬಾ ದಿನಗಳಿಂದ ಗೌತಮ್-ಭೂಮಿಕಾ ರೋಮ್ಯಾನ್ಸ್ ನೋಡದೆ ಬೇಸರವಾಗಿದ್ದ ವೀಕ್ಷಕರು ಈಗ "ನಮ್ಮ ಗೌತಮ್ ದಿವಾನ್-ಭೂಮಿ ಹೀಗೆ ಇರಲಪ್ಪಾ" ಅಂದುಕೊಳ್ಳುತ್ತಿದ್ದಾರೆ. ಆದರೆ ನೀವು ದಿನನಿತ್ಯ ಧಾರವಾಹಿ ವೀಕ್ಷಿಸುತ್ತಿದ್ದರೆ ನಿಮಗಿಲ್ಲೊಂದು ಬದಲಾವಣೆ ಕಾಣಿಸುತ್ತದೆ.
36
ಫುಲ್ ಬದಲಾಗಿದ್ದಾಳೆ ಭೂಮಿಕಾ
ಅದೇನಪ್ಪಾ ಅಂದ್ರೆ ಗೌತಮ್‌ನಿಂದ ಇಷ್ಟು ದಿನ ದೂರವಾಗಿದ್ದ ಭೂಮಿ ಕಣ್ಣಿಗೆ ಕನ್ನಡಕ ಧರಿಸಿ, ಜುಟ್ಟು ಹಾಕಿ, ಕಾಟನ್ ಸೀರೆಯಲ್ಲಿ ಕಾಣಿಸಿಕೊಳ್ಳುತ್ತಿದ್ದಳು. ಇಂತಿಪ್ಪ, ಈಗ ಗೌತಮ್ ಸಿಕ್ಕ ಮೇಲೆ ಭೂಮಿಕಾ ಫುಲ್ ಬದಲಾಗಿದ್ದಾಳೆ. ಭೂಮಿಕಾ ಬದಲಾಗಿರುವುದು ವೀಕ್ಷಕರಿಗೂ ಖುಷಿ ಕೊಟ್ಟಿದೆ.
ಯೆಸ್ ಭೂಮಿಕಾ ಈಗ ಮೊದಲಿನ ಹಾಗೆ ಲವಲವಿಕೆಯಿಂದ ಇದ್ದಾಳೆ. ಅಷ್ಟೇ ಅಲ್ಲ, ತುಂಬು ಜಡೆ ಹಾಕಿ, ಕೈ ತುಂಬಾ ಬಳೆ ಧರಿಸಿ, ಸಾದಾಸೀದ ಕಲರ್‌ಫುಲ್ ಸೀರೆ ಹಾಕಿ ಲಕ್ಷಣವಾಗಿ ಕಾಣಿಸುತ್ತಿದ್ದಾಳೆ.
56
ಗೌತಮ್-ಜೈದೇವ್ ಮಧ್ಯೆ ಜಟಾಪಟಿ
ಸದ್ಯದಲ್ಲೇ ಧಾರಾವಾಹಿಯಲ್ಲಿ ಗೌತಮ್-ಜೈದೇವ್ ಮಧ್ಯೆ ಜಟಾಪಟಿ ನಡೆಯುವ ಹಾಗೆ ಕಾಣುತ್ತಿದೆ. ಹಾಗೆಯೇ ಎಲ್ಲಾ ಆಸ್ತಿ ಗೌತಮ್ ಸೇರುವ ಹಾಗೆ ಕಾಣುತ್ತಿದೆ. ಆದರೆ ಜೈದೇವ್ ಅಮ್ಮ ಅಂದ್ರೆ ಶಕುಂತಲಾ ಅಷ್ಟು ಸುಲಭಕ್ಕೆ ಬಿಟ್ಟುಕೊಡಬೇಕಲ್ಲಾ?.
66
ಯಾವ ರೀತಿ ಟ್ವಿಸ್ಟ್ ಕೊಡ್ತಾರೆ?
ಮತ್ತೆ ಕೆಲವರು ಈ ಧಾರಾವಾಹಿ ಮುಗಿಯುವ ಹಂತಕ್ಕೆ ಬಂದಿದೆ. ಎಳೆಯುವುದಕ್ಕೆ ಏನು ಇಲ್ಲ. ಹೇಗಿದ್ದರೂ ಹೊಸ ಧಾರಾವಾಹಿ ಬೇರೆ ಬರುತ್ತಿದೆ ಎನ್ನುತ್ತಿದ್ದಾರೆ. ಆದರೆ ನಿರ್ದೇಶಕರು ಮುಂದಿನ ದಿನಗಳಲ್ಲಿ ಧಾರಾವಾಹಿಯನ್ನ ಯಾವ ರೀತಿ ಟ್ವಿಸ್ಟ್ ಕೊಟ್ಟು ಮುಂದುವರೆಸುತ್ತಾರೆ ಎಂಬುದುನ್ನು ನಾವು ಕಾದು ನೋಡಬೇಕಿದೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.